ಲಯನ್ಸ್ ಇಂಟರ್ನ್ಯಾಶನಲ್ 317ಎಜಿಲ್ಲೆಯ 3ನೇ ಪ್ರಾಂತ್ಯದ ಪ್ರಾದೇಶಿಕ ಸಭೆಯಲ್ಲಿ ಮಾನವನ ಮುಖ್ಯ “ಅಂಗಾಂಗ ದಾನದ” ಬಗೆಗೆ ಬಿಜಿಎಸ್ ಆಸ್ಪತ್ರೆಯ”ಡಾ:ಸುರೇಶ್ ರಾಘವಯ್ಯ” ರವರಿಂದ ಸಮಾಜಕ್ಕೆ ಖಾತ್ರಿ ಇರುವ ಮಹತ್ವದ ಸಂದೇಶ. ಎಫ್ಕೆಕೆಸಿಸಿಐ ನಲ್ಲಿ ನಡೆದ ಅರ್ಥ ಪೂರ್ಣವಾದ “ಅಂಗಾಂಗ ದಾನದ” ಮಹತ್ವದ ಸಂದೇಶಗಳ; ಗೋಷ್ಠಿಗಳನ್ನು ನಡೆಸಿ ಲಯನ್ಸ್ ನ ಮುಖ್ಯಸ್ಥರು ಸುದ್ದಿಗಾರರೊಂ ದಿಗೆ ಮಾತನಾಡಿ,” ಇಂದು ಮನುಷ್ಯ ಅಕಸ್ಮಾತ್, ಅಕಾಲಿಕ, ಅಪಘಾತಗಳಲ್ಲಿ ಮರಣಿಸಿದಲ್ಲಿ ಇಡೀ ದೇಹವನ್ನು ಮೌಢ್ಯತೆ ಯಿಂದ ಸುಡದೆ, ಮಣ್ಣು ಮಾಡದೆ, ಲಕ್ಷಾಂತರ ಜನರು ಅಂಗಾಂಗಗಳಿಗೆ(ಕಸಿ) ಕಾಯುತ್ತಿರುವವರಿಗೆ “ಕೊಟ್ಟು ಜೀವದಾನ” ಮಾ ಡೋಣ, ಅದಕ್ಕಾಗಿ ಇಂದೇ ಪ್ರಾಯೋಗಿಕವಾಗಿ, ಪ್ರಾಮಾಣಿಕವಾಗಿ”ದಾನಪತ್ರಕ್ಕೆ ಸಹಿ “ಮಾಡುವ ಅಭಿಯಾನವನ್ನು ಎಲ್ಲರಿಗೂ ತಿಳಿಸಿ ಮೂಢ ನಂಬಿಕೆಗಳಿಂದ ದೂರಬಂ ದು ಅನೇಕ ಜನರ ಬಾಳಿಗೆ ಜೀವ ತುಂಬೋಣ” ಪ್ರಾಯೋಗಿಕ ಅರಿವಿನಿಂದ ಸಾರ್ಥಕತೆ ಹೊಂದೋಣ” ಎಂದು 3ನೇ ಪ್ರಾಂತ್ಯದ ಅನೇಕ ಲಯನ್ಸ್ ನ ಮುಖ್ಯಸ್ಥರು ಭಾಗವಹಿಸಿ ಸಮಾರಂಭ ಯಶಸ್ವಿಗೊಳಿಸಿದರು
