ಕುಮಟಾ: ತಾಲೂಕಿನ ಶ್ರೀಕ್ಷೇತ್ರ ಯಾಣದಲ್ಲಿ ಪ್ರವಾಸಿಗರ ಮೇಲೆ ಹೆಜ್ಜೇನು ದಾಳಿ ಮಾಡಿ ಮೂರ್ನಾಲ್ಕು ಪ್ರವಾಸಿಗರಿಗೆ ಕಡಿದು ಗಂಭೀರ ಗಾಯಗೊಳಿಸಿದ್ದು, ಜೇನು ದಾಳಿಯಿಂದ ಭಕ್ತರಿಗೆ ತೊಂದರೆಯಾಗದಂತೆ ಭೈರವೇಶ್ವರ ದೇವಾಲಯಕ್ಕೆ ಭೇಟಿ ನೀಡುವ ಸಮಯದಲ್ಲಿ ಕೊಂಚ ಬದಲಾವಣೆ ಮಾಡಲಾಗಿದೆ.
ಪರಶಿವ ನೆಲೆಸಿರುವ ಯಾಣದ ಪುಣ್ಯ ಕ್ಷೇತ್ರಕ್ಕೆ ಪ್ರತಿನಿತ್ಯ ನೂರಾರು ಪ್ರವಾಸಿಗರು ಭೇಟಿ ನೀಡುತ್ತಾರೆ. ಈ ಭಾಗದಲ್ಲಿ
ಜೇನುಗೂಡುಗಳು ಸಿಗುವುದು ಸಾಮಾನ್ಯವಾಗಿದೆ. ಯಾರೂ ಪ್ರವಾಸಿಗರು ಮಾಡಿದ ಒಂದು ತಪ್ಪಿನಿಂದ ಹೆಚ್ಚೇನ ಹುಳುಗಳ ತಂಡ ದಂಡೆತ್ತಿ ಬಂದು ನೂರಾರು ಪ್ರವಾಸಿಗರ
ಮೇಲೆ ದಾಳಿ ಮಾಡಿದೆ. ಜೇನು ಹುಳುಗಳು ದಾಳಿ ಮಾಡುತ್ತಿದ್ದಂತೆ ಅನೇಕ ಪ್ರವಾಸಿಗರು ಅಲ್ಲಿಂದ ದಿಕ್ಕಾಪಾಲಾಗಿ ಓಡಿ ಹೋಗಿದ್ದಾರೆ.
ಸುಮಾರು 220 ಮೆಟ್ಟಿಲುಗಳಿಂದ ಇಳಿದು ಪ್ರವಾಸಿಗರು ಓಡಿ ಹೋದರೆ, ಇನ್ನೂ ಅನೇಕರು
ದೇವರ ಗರ್ಭಗುಡಿಯಲ್ಲಿ ಸೇರಿ ದಾಳಿ ತಪ್ಪಿಸಿಕೊಂಡಿದ್ದಾರೆ.ಭೈರವೇಶ್ವರ ದೇವಾಲಯದ ಟ್ರಸ್ಟ್ ಕಾಯದರ್ಶಿ ಮಹೇಶ ಹೆಗಡ, ಇತರರು 100ಕ್ಕೂ ಅಧಿಕ ಪ್ರವಾಸಿಗರನ್ನು ರಕ್ಷಣೆ ಮಾಡಿದ್ದಾರೆ. ಆದರೂ ಮೂರುನಾಲ್ಕು ಪ್ರವಾಸಿಗರಿಗೆ ಗಂಭೀರ ಗಾಯಗಳಾಗಿದ್ದು, ಅವರನ್ನು ಕುಮಟಾ ಸರ್ಕಾರಿ ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ಕೊಡಿಸಲಾಗಿದೆ.
ಯಾಣದ ಶಿಖರದಲ್ಲಿ 120ಕ್ಕೂ ಅಧಿಕ ಜೇನು ಹುಳಗಳು ಗೂಡು ಕಟ್ಟಿಕೊಂಡಿದ್ದು, ಬೆಳಿಗ್ಗೆ 11 ಗಂಟೆ ನಂತರ ಬರುವ ಪ್ರವಾಸಿಗರ ಮೇಲೆ ದಾಳಿ ಮಾಡುತ್ತಿವೆ ಎನ್ನಲಾಗಿದೆ. ಬಿಸಿಲಿನ ತಾಪ ಮತ್ತು ಹೆಚ್ಚು ಪ್ರವಾಸಿಗರು ಆಗಮಿಸುವುದರಿಂದ ಶಿಖರದಲ್ಲಿ ಗೂಡು ಕಟ್ಟಿಕೊಂಡಿರುವ ನೂರಾರುಹೆಚ್ಚೇನಿನಪಡೆಯೇ ಸದ್ದು ಗದ್ದಲಕ್ಕೆ ತಾಳಲಾರದೆ ದಾಳಿ ನಡೆಸುತ್ತಿವೆ ಎಂದು ಟ್ರಸ್ಟ್ನ ಕಾಯದರ್ಶಿಯವರು ಮಾಹಿತಿ ನೀಡಿದ್ದಾರೆ.
