ದಾವಣಗೆರೆ ಜಿಲ್ಲೆ ಹರಿಹರ ತಾಲೂಕು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ ಹರಿಹರದ ಗಾಂಧಿ ಮೈದಾನದಲ್ಲಿ ನಿರ್ಮಿಸಿರುವ ವಾಣಿಜ್ಯ ಮಳಿಗೆಗಳ ಬಾಡಿಗೆದಾರರ ಕರಾರು ಅವಧಿ 2019 ಕ್ಕೆ ಮುಗಿದಿದ್ದರೂ ಸಹ 5 ರಿಂದ 6 ವರ್ಷಗಳು ಆದರೂ ಹರಾಜು ಪ್ರಕ್ರಿಯ ನಡೆಸದೆ ಇರುವ ಬಗ್ಗೆ ನಮ್ಮ ಜಯ ಕರ್ನಾಟಕ ಸಂಘಟನೆಯ ತಾಲೂಕು ಅಧ್ಯಕ್ಷರಾದ ಎಸ್ ಗೋವಿಂದ್ ಮತ್ತು ಜಯ ಕರ್ನಾಟಕ ಸಂಘಟನೆ ಕಾರ್ಯಕರ್ತರು ಹರಿಹರದ ಗಾಂಧಿ ವೃತ್ತದಲ್ಲಿ ಸತತ 96 ದಿನಗಳಿಂದ ಸಾರ್ವಜನಿಕರ ಹಿತ ದೃಷ್ಟಿಯಿಂದ ಹಾಗೂ ಸರ್ಕಾರದ ಬೊಕ್ಕಸಕ್ಕೆ ನಷ್ಟ ಉಂಟು ಆಗುತ್ತಿರುವುದರಿಂದ ಮರು ಹರಾಜು ಪ್ರಕ್ರಿಯ ನಡೆಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಹಲವಾರು ಬಾರಿ ಮನವಿ ಕೊಟ್ಟರು ಸಹ ಬರಿ ಭರವಸೆ ಮಾತನ್ನು ಹೇಳುತ್ತಾ ಬಂದಿರುತ್ತಾರೆ ಆದಕಾರಣ ತಾವುಗಳು ಸಂಬಂಧಪಟ್ಟ ಅಧಿಕಾರಿಗಳವರೆಗೆ ಆದಷ್ಟು ಬೇಗ ಮರು ಹರಾಜು ಪ್ರಕ್ರಿಯ ನಡೆಸುವಂತೆ ಸೂಚನೆ ನೀಡಬೇಕೆಂದು ಒತ್ತಾಯಿಸಿದರು ಹಾಗೂ ನಮ್ಮ ಬೇಡಿಕೆ ಈಡೇರದೇ ಇದ್ದಲ್ಲಿ ಮುಂದಿನ ದಿನಗಳಲ್ಲಿ ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ಬೇಡಿಕೆ ಈಡೇರೋ ವರ್ಗು ಧರಣಿ ಮಾಡಲಾಗುವುದು ಎಂದು ಮನವಿ ಕೊಡಲಾಯಿತು
