ಕೃಷ್ಣರಾಜನಗರ : ತಾಲೂಕಿನ ದೆಗ್ಗನಹಳ್ಳಿಯ ಯುವ ಕಾಂಗ್ರೆಸ್ ಮುಖಂಡ ಆನಂದ್ ಅವರನ್ನು ಕೃಷ್ಣರಾಜನಗರ ಬ್ಲಾಕ್ ಕಾಂಗ್ರೆಸ್ ಹಿಂದುಳಿದ ವರ್ಗಗಳ ವಿಭಾಗದ ಅಧ್ಯಕ್ಷರನ್ನಾಗಿ ಜಿಲ್ಲಾ ಕಾಂಗ್ರೆಸ್ ಒಬಿಸಿ ಅಧ್ಯಕ್ಷ ಕೆ.ಮಾರುತಿ ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ. ನೇಮಕ ಪತ್ರದಲ್ಲಿ ತಾವು ಈ ಕೂಡಲೇ ಅಧಿಕಾರ ವಹಿಸಿಕೊಂಡು ಬ್ಲಾಕ್ ಕಾಂಗ್ರೆಸ್ ಸಮಿತಿಯ ಮಾರ್ಗದರ್ಶನ ಮತ್ತು ಸ್ಥಳೀಯ ನಾಯಕರ ಸಹಕಾರದಲ್ಲಿ ಪಕ್ಷದ ಸಂಘಟನೆ ಮತ್ತು ಬಲವರ್ಧನೆಗೆ ಕಾರ್ಯೋನ್ಮುಖರಾಗುವಂತೆ ಸೂಚಿಸಿದ್ದಾರೆ.
