ರಾಜ್ಯ ಮೌಲ್ಯ ಮಾಪಕರ ನೀತಿ ಆಯೋಗ ಉಡುಪಿ ಜಿಲ್ಲೆಯ ಕಾಪು ತಾಲ್ಲೂಕಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಕಾಪು ತಾಲ್ಲೂಕಿನ ತಹಶಿಲ್ದಾರ ಅವರ ನೆರೆ ರಕ್ಷಣಾ ನೀತಿ ಮತ್ತು ಸಮಯ ಪ್ರಜ್ಞೆಯನ್ನು ಮುಕ್ತ ಮನಸ್ಸಿನಿಂದ ಶ್ಲಾಘಿಸಿದರು.
ನೀತಿ ಆಯೋಗದಿಂದ
ಕಾಪು ತಾಲ್ಲೂಕಿನ
ವಿವಿದೋದ್ದೇಶ ಸೈಕ್ಲೋನ್ ಆಶ್ರಯ ತಾಣ MPCS (Multipurpose cyclone shelter) ಮೌಲ್ಯಮಾಪನ:
*ಶೆಲ್ಟರ್ ಕಾರ್ಯಾಚರಣೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಾ.ಕಾಪು ತಾಲ್ಲೂಕಿನ ವಿವಿದೋದ್ದೇಶ ಸೈಕ್ಲೋನ್ ಆಶ್ರಯ ತಾಣ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದೆ. ಸಂತ್ರಸ್ತರಿಗೆ ಉತ್ತಮ ಸೌಲಭ್ಯ ನೀಡಿ, ರಕ್ಷಣಾ ಕಾರ್ಯಾಚರಣೆ ಮತ್ತು ಕಾಳಜಿ ವಹಿಸುವಲ್ಲಿ ಉತ್ತಮ ಮುತುವರ್ಜಿ ತೋರಿದೆ ಎಂದು ನೀತಿ ಆಯೋಗದ ಮೌಲ್ಯ ಮಾಪಕರಾದ ಶ್ರೀ ಅನಂತ ಪಂತ್ ಅಭಿಪ್ರಾಯಪಟ್ಟರು.
2017 ರಲ್ಲಿ ಸ್ಥಾಪನೆಯಾಗಿರುವ ವಿವಿದೋದ್ದೇಶ ಸೈಕ್ಲೋನ್ ಶೆಲ್ಟರ್ ನ ಮೌಲ್ಯಮಾಪನ ನಡೆಸಲು ನೀತಿ ಆಯೋಗದ ವತಿಯಿಂದ ಇಂದು ಅನಂತ ಪಂತ್ ಆಗಮಿಸಿದ್ದರು. ಪಡು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಈ MPCS ಅನ್ನು ಸ್ಥಾಪಿಸಲಾಗಿದೆ.
ಪಡು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ MPCS ಕೇಂದ್ರವಾಗಿದೆ. ಇಲ್ಲಿನ ಕೋಣೆಗಳು, ಅಡುಗೆ ಮನೆ, ಶೌಚಾಲಯ, ನೀರಿನ ವ್ಯವಸ್ಥೆ ಎಲ್ಲವನ್ನೂ ಮೌಲ್ಯಮಾಪಕರು ಈ ಸಂಧರ್ಭದಲ್ಲಿ
ಪರಿಶೀಲಿಸಿದರು.
MPCS (Multi purpose cyclone shelter)
ಚಂಡಮಾರುತ, ನೆರೆ, ಬರ ಇತ್ಯಾದಿ ಪ್ರಕೃತಿ ವಿಕೋಪದ ಸಂದರ್ಭದಲ್ಲಿ ಸಂತ್ರಸ್ತ ಜನತೆಯನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲು ಗುರುತಿಸಲಾದ ತಾಣಗಳಿಗೆ ಮಲ್ಟಿಪರ್ಪಸ್ ಸೈಕ್ಲೋನ್ ಶೆಲ್ಟರ್ ಅಥವಾ ಬಹುಪಯೋಗಿ ಸೈಕ್ಲೋನ್ ಶೆಲ್ಟರ್.
ಶ್ರೀ ಅನಂತ್ ಪಂತ್ ಹೇಳಿಕೆ:
ಕಾಪು ತಾಲ್ಲೂಕಿನಲ್ಲಿ ಈ MPCS ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದೆ. ತಹಶಿಲ್ದಾರ್ ಡಾ.ಪ್ರತಿಭಾ ಆರ್ ನೇತೃತ್ವದಲ್ಲಿ ರಕ್ಷಣಾ ಕಾರ್ಯ ಮತ್ತು ಕಾಳಜಿ ಕಾರ್ಯ ಅತ್ಯುತ್ತಮವಾಗಿ ನಡೆಯುತ್ತಿದೆ. ಕಳೆದ ಮಳೆಗಾಲದಲ್ಲಿ ಪ್ರವಾಹ ಉಂಟಾದಾಗ ಸ್ವತಃ ತಹಶಿಲ್ದಾರರು ಜಲಾವೃತ ಪ್ರದೇಶಕ್ಕೆ ಬೋಟ್ ನಲ್ಲಿ ತೆರಳಿ ನೆರೆ ಸಂತ್ರಸ್ತರನ್ನು ರಕ್ಷಿಸಿದ್ದು ನಿಜಕ್ಕೂ ಶ್ಲಾಘನೀಯ ಮತ್ತು ಅನುಕರಣೀಯ. ಅವರನ್ನು ನಮ್ಮ ನೀತಿ ಆಯೋಗ ಹೃತ್ಪೂರ್ವಕವಾಗಿ ಅಭಿನಂದಿಸುತ್ತದೆ
ಸಾರ್ವಜನಿಕರೊಂದಿಗೆ ಮೌಲ್ಯಮಾಪಕರ ಸಂವಾದ
ನೀತಿ ಆಯೋಗದ ಮೌಲ್ಯಮಾಪಕರಾದ ಶ್ರೀ ಅನಂತ ಪಂತ್ ರವರು ತಾಲ್ಲೂಕಿನ ಜನತೆಯೊಂದಿಗೆ ಸಂವಾದ ನಡೆಸಿದರು. ಮೌಲ್ಯಮಾಪನ ಪ್ರಶ್ನಾವಳಿಗಳ ಮೂಲಕ ಉತ್ತರ ಪಡೆದರು. ಇಲ್ಲಿ ಸೌಲಭ್ಯಗಳು ಉತ್ತಮವಾಗಿ ದೊರಕುತ್ತಿವೆಯೇ?
ಅಧಿಕಾರಿಗಳ ಸ್ಪಂದನೆ ಉತ್ತಮವಾಗಿದೆಯೇ?
ಇಲ್ಲಿನ ಉತ್ತಮೀಕರಣಕ್ಕೆ ಸಲಹೆಗಳೇನು?
ಇನ್ನೂ ಹೆಚ್ಚಿನ ನಿರೀಕ್ಷೆಗಳಿವೆಯೇ?
ಎಂಬ ಪ್ರಶ್ನೆಗಳಿಗೆ ಉತ್ತರ ಪಡೆದರು.
ಸಾರ್ವಜನಿಕರ ಉತ್ತರ:
“ಕಾಪು ತಾಲ್ಲೂಕು ಆಡಳಿತ ಮತ್ತು ಪುರಸಭೆ ನೆರೆ ಸಂದರ್ಭದಲ್ಲಿ ಉತ್ತಮ ಸ್ಪಂದನೆ ನೀಡುತ್ತಾರೆ. ಮಳೆಗಾಲದಲ್ಲಿ ಸದಾ ಸಂಪರ್ಕದಲ್ಲಿರುತ್ತಾರೆ. VA, PDO, chief officer, ತಹಶಿಲ್ದಾರ್ ಎಲ್ಲರೂ ಸಮರೋಪಾದಿಯಲ್ಲಿ ಕಾರ್ಯ ನಿರ್ವಹಿಸಿ ಸಂತ್ರಸ್ತರಿಗೆ ಆಸರೆಯಾಗುತ್ತಾರೆ. ನಿಮ್ಮ ಜೊತೆಗೆ ನಾವಿದ್ದೇವೆ ಎಂಬ ಆತ್ಮ ಸ್ಥೈರ್ಯ ತುಂಬುತ್ತಾರೆ. ಜೊತೆಗೆ ಈ MPCS ಆಶ್ರಯ ತಾಣದಲ್ಲಿ ಉತ್ತಮ ವ್ಯವಸ್ಥೆ ಇದ್ದು ಸಂಕಟದ ಸಮಯದಲ್ಲಿ ಉತ್ತಮ ಸ್ಥಳವಾಗಿದೆ ಎಂದು ಸಾರ್ವಜನಿಕರು ಅಭಿಪ್ರಾಯ ಪಟ್ಟರು.
ಸಾರ್ವಜನಿಕರ ಅಳಲು
ನೆರೆ ಉಂಟಾದ ಸಂದರ್ಭದಲ್ಲಿ ಎಲ್ಲಾ ಅಧಿಕಾರಿಗಳು ದೌಡಾಯಿಸುತ್ತಾರೆ. ಆದರೆ ನೆರೆ ಇಳಿದ ನಂತರ ಪರಿಸ್ಥಿತಿಯನ್ನು ಸಹಜ ಸ್ಥಿತಿಗೆ ತರಲು ಯಾರೂ ಇರುವುದಿಲ್ಲ, ವಿದ್ಯುತ್ ಸಂಪರ್ಕ, ರಸ್ತೆ ಸಂಪರ್ಕ ಇದೆಯೇ ಎಂಬುದರ ಬಗ್ಗೆ ಗಮನ ಹರಿಸಿ ವ್ಯವಸ್ಥೆ ಮಾಡಬೇಕು ಎಂದು ಆಗ್ರಹಿಸಿದರು.
ತಹಶಿಲ್ದಾರ್ ಡಾ. ಪ್ರತಿಭಾ ಆರ್ ಹೇಳಿಕೆ
“ಮಳೆಗಾಲಕ್ಕೆ ಮೊದಲೇ ನಮ್ಮ ತಾಲೂಕಿನಲ್ಲಿ ಪೂರ್ವ ಸಿದ್ಧತೆಯೊಂದಿಗೆ ಸನ್ನದ್ಧರಾಗಿರುತ್ತೇವೆ. MPCS ಕೇಂದ್ರಗಳನ್ನು ಸರ್ವ ಸನ್ನದ್ಧ ಪರಿಕರಗಳೊಂದಿಗೆ ವ್ಯವಸ್ಥೆ ಮಾಡಿಕೊಂಡಿರುತ್ತೇವೆ. ನೆರೆ ಸಂತ್ರಸ್ತರ ರಕ್ಷಣೆ ನಮ್ಮ ಆದ್ಯತೆ. ಆತ್ಮವಿಶ್ವಾಸ ತುಂಬುವ ಕೆಲಸ ಮಾಡಲು ಸ್ವತಃ ತಹಶಿಲ್ದಾರ್ ಆದ ನಾನು ಫೀಲ್ಡಿಗಳಿದು ನೆರೆ ಸಂತ್ರಸ್ತರ ರಕ್ಷಣಾ ಕಾರ್ಯದಲ್ಲಿ ತೊಡಗುತ್ತೇವೆ. ಈಗ ನೀತಿ ಆಯೋಗದ ಮೌಲ್ಯಮಾಪಕರು ನಮ್ಮ ಕಾರ್ಯಾಚರಣೆ ಬಗ್ಗೆ ಪ್ರಶಂಸೆ ನೀಡಿರುವುದು ಸ್ಪೂರ್ತಿದಾಯಕವಾಗಿದೆ
ಮೌಲ್ಯಮಾಪನ ಸಂದರ್ಭದಲ್ಲಿ ಪುರಸಭಾ ಚೀಫ್ ಆಫೀಸರ್ ನಾಗರಾಜ್, ಜಿಲ್ಲಾ ಪ್ರಕೃತಿ ವಿಪತ್ತು ನಿರ್ವಹಣಾ ವಿಭಾಗದ ಅಧಿಕಾರಿ ರವಿ, ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು, ಪಡು ವಾರ್ಡ್ ನ ಕೌನ್ಸಿಲರ್ ಆದ. , ಶಾಲೆಯ ಅಡುಗೆ ಸಿಬ್ಬಂದಿ, ಅಂಗನವಾಡಿ ಕಾರ್ಯಕರ್ತರು, ರೆವಿನ್ಯೂ ಇನ್ಸ್ಪೆಕ್ಟರ್ ಇಜ್ಜಾರ್ ಸಾಬಿರ್, VAO ವೆಂಕಟೇಶ್, ಗ್ರಾಮಸಹಾಯಕರಾದ ದಿಲೀಪ್, ಇತರ ಸಾರ್ವಜನಿಕರು ಹಾಜರಿದ್ದರು.
ವರದಿ:ಡಾ.ನಂದುಪೂಜಾರಿ
ರಾಜ್ಯ ವರದಿಗಾರರು
