ಚಿಕ್ಕಬಳ್ಳಾಪುರ ಪತ್ರಕರ್ತರ ಭವನದಲ್ಲಿ ಕರ್ನಾಟಕ ಮಾದಿಗ ದಂಡೋರ ಸಮಿತಿ ವತಿಯಿಂದ ಸುದ್ದಿಗೋಷ್ಠಿಯನ್ನು ಕರೆಯಲಾಗಿತ್ತು
ನ್ಯಾಯಮೂರ್ತಿ ಹೆಚ್ಎಸ್ ನಾಗಮೋಹನ್ ದಾಸ್ ಆಯೋಗದ ವತಿಯಿಂದ ನಡೆಯಲಿರುವ ಪರಿಶಿಷ್ಟ ಜಾತಿ ಗಣತಿಗಾಗಿ ಜನಗಣತಿ ದಾರರು ನಿಮ್ಮಲ್ಲಿಗೆ ಬಂದಾಗ ಆದಿ ಕರ್ನಾಟಕ,ಆದಿ ಆಂಧ್ರ ಹಾಗೂ ಆದಿ ದ್ರಾವಿಡ ಎಂದು ಹೇಳಬೇಡಿ ಮಾದಿಗ ಎಂದು ಕಾಲಮ್ ಸಂಖ್ಯೆ 61 ರಲ್ಲಿ ನಮೂದಿಸಿ ಎಂದು ಮಾಜಿ ಕೇಂದ್ರ ಸಚಿವರು ಹಾಗೂ ದಲಿತ ಮುಖಂಡರಾದಂತಹ ಎ ನಾರಾಯಣಸ್ವಾಮಿ ಅವರು ಸಮುದಾಯದ ಜನರಲ್ಲಿ ಮನವಿ ಮಾಡಿಕೊಂಡರು. ನಮ್ಮ ಮಾದಿಗ ಸಮಾಜ ಇಡೀ ರಾಜ್ಯದಲ್ಲಿ ಅತಿ ಹೆಚ್ಚು ಜನಸಂಖ್ಯೆಯನ್ನು ಹೊಂದಿರುವಂತಹ ಸಮಾಜ ಆದರೆ ಆರ್ಥಿಕವಾಗಿ,ಸಾಮಾಜಿಕವಾಗಿ ಮತ್ತು ರಾಜಕೀಯವಾಗಿ ತೀರಾ ಹಿಂದೆ ಇರುವಂತಹ ಸಮಾಜ.ನಮ್ಮ ಸಮುದಾಯದವರು ಅನಕ್ಷರಸ್ಥರು ಅವರಿಗೆ ಈ ಜಾತಿ ಜನಗಣತಿ ಬಗ್ಗೆ ಮಾಹಿತಿ ಇಲ್ಲ ಸರ್ಕಾರ ಮತ್ತು ಸಮುದಾಯದ ಮುಖಂಡರು ಜನರಲ್ಲಿ ಜಾಗೃತಿ ಮೂಡಿಸಿ ತಮ್ಮ ಜಾತಿಯನ್ನು ಕಡ್ಡಾಯವಾಗಿ ಮಾದಿಗ ಎಂದು ಬರಿಸಬೇಕೆಂದು ತಿಳಿಸಿದರು . ಜಾತಿ ಜನಗಣತಿ ಮಾಡುತ್ತಿರುವ ಸಂದರ್ಭದಲ್ಲಿ ಹಲವಾರು ಸಮಸ್ಯೆಗಳು ಕಂಡು ಬರುತ್ತಿವೆ ಚಿಕ್ಕಬಳ್ಳಾಪುರ ನಗರದ ವಾರ್ಡ್ ಗಳ ಹೆಸರುಗಳು ಮತ್ತು ಮಾಹಿತಿ ಜನಗಣತಿದಾರರ ಮೊಬೈಲ್ ಆಪ್ ನಲ್ಲಿ ಡಿಸ್ಪ್ಲೇ ಆಗುತ್ತಿಲ್ಲ ಕೇವಲ ವಾಪಸಂದ್ರ ವಾರ್ಡಿನ ಮಾಹಿತಿ ಅಷ್ಟೇ ಮೊಬೈಲ್ ಆಪ್ ನಲ್ಲಿ ತೋರಿಸುತ್ತಿದೆ ಹಾಗೂ ಸರ್ವರ್ ಸಮಸ್ಯೆ ಎದುರಾಗಿದ್ದು ಒಂದು ಕುಟುಂಬದ ಮಾಹಿತಿಯನ್ನು ಭರ್ತಿ ಮಾಡಲು ಕನಿಷ್ಠ 45 ನಿಮಿಷಗಳು ಬೇಕಾಗಿರುತ್ತದೆ. ನಿನ್ನೆ ಪ್ರಾರಂಭವಾದ ಜಾತಿ ಜನಗಣತಿಯು ಆಮೆ ಗತಿಯಿಂದ ಸಾಗುತ್ತಿರುವುದು ಗೋಚರವಾಗುತ್ತಿದೆ ಎಂದು ಮಾಜಿ ತಾಲೂಕು ಪಂಚಾಯಿತಿಯ ಅಧ್ಯಕ್ಷರು ಮತ್ತು ಮಾಜಿ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷರಾದ ಕೆ ಕೃಷ್ಣಮೂರ್ತಿ ರವರು ತಿಳಿಸಿದರು ಈ ಎಲ್ಲಾ ಸಮಸ್ಯೆಗಳಿಂದ ನಿಗದಿತ ಸಮಯದಲ್ಲಿ ಜಾತಿ ಜನಗಣತಿಯನ್ನು ಮಾಡಲು ಕಷ್ಟವಾಗಬಹುದು ಎಂದು ಅನುಮಾನ ವ್ಯಕ್ತಪಡಿಸುತ್ತಾ ನಿಗದಿಪಡಿಸಿರುವಂಥ ದಿನಾಂಕವನ್ನು ವಿಸ್ತರಿಸಿದರೆ ಅನುಕೂಲವಾಗುತ್ತದೆ ಎಂದು ಎಂದು ಮನವಿ ಮಾಡಿದರು
ಈ ಸುದ್ದಿಗೋಷ್ಠಿಯಲ್ಲಿ. ಎ ನಾರಾಯಣಸ್ವಾಮಿ, ಕೆ ಕೃಷ್ಣಮೂರ್ತಿ. ಸಮುದಾಯದ ಹಿರಿಯ ಮುಖಂಡರಾದ ತಿರುಮಲಪ್ಪ. ಮತ್ತು ಬಾಲ ಕುಂಟ ಹಳ್ಳಿ ಗಂಗಾಧರ್ ಇತರರು ಹಾಜರಿದ್ದರು
