*ಜನಪರ ಆಡಳತ, ತೆರಿಗೆ ಹಣ ಸಮರ್ಪಕ ಬಳಕೆ,ಸಮ ಸಮಾಜ ನಿರ್ಮಾಣಕ್ಕೆ ನಾಲ್ವಡಿ ಕೃಷ್ಣರಾಜ ಒಡೆಯರ್ ದೇಶಕ್ಕೆ ಮಾದರಿಯಾದರು-ಸಚಿವ ಹೆಚ್.ಸಿ.ಮಹದೇವಪ್ಪ
ಬೆಂಗಳೂರು:ಸರ್ಕಾರಿ ಕಲಾ ಕಾಲೇಜು, ಬಾಪೂಜಿ ಸಭಾಂಗಣದಲ್ಲಿ ಬೆಂಗಳೂರು ನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಪ್ರಸಿದ್ದ ಇತಿಹಾಸಕಾರರಾದ ಪ್ರೊ. ಎಸ್.ಚಂದ್ರಶೇಖರ್ ರವರ ನಾಲ್ವಡಿ ಕೃಷ್ಣರಾಜ ಒಡೆಯರು ಮತ್ತು ಆಧುನಿಕ ಮೈಸೂರು ಪುಸ್ತಕ ಬಿಡುಗಡೆ ಕಾರ್ಯಕ್ರಮ.
ಸಮಾಜ ಕಲ್ಯಾಣ ಸಚಿವರಾದ ಹೆಚ್.ಸಿ.ಮಹದೇವಪ್ಪರವರು, ಬೆಂಗಳೂರುನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರಾದ ಎಂ.ಪ್ರಕಾಶಮೂರ್ತಿ, ಚಿಂತಕರು, ನಾಟಕಕಾರ ಡಾ.ಕೆ.ವೈ.ನಾರಾಯಣಸ್ವಾಮಿ, ಇತಿಹಾಸ ಪ್ರಾಧ್ಯಾಪಕರಾದ ಪ್ರೊ.ಎಸ್.ಚಂದ್ರಶೇಖರ್, ಸರ್ಕಾರಿ ಕಲಾ ಕಾಲೇಜು ಪ್ರಾಂಶುಪಾಲರಾದ ಡಾ.ಪಿ.ಟಿ.ಶ್ರೀನಿವಾಸ್ ನಾಯಕ್, ಬಿಬಿಎಂಪಿ ನಿವೃತ್ತ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಚ.ನಾಗರಾಜ್ ರವರು ಪುಸ್ತಕ ಬಿಡುಗಡೆಗೊಳಿಸಿದರು.
ಸಚಿವರಾದ ಹೆಚ್.ಸಿ.ಮಹದೇವಪ್ಪ ರವರು ಮಾತನಾಡಿ ನಾಲ್ವಡಿ ಕೃಷ್ಣರಾಜ ಒಡೆಯರು ಮತ್ತು ಆಧುನಿಕ ಮೈಸೂರು ಪುಸ್ತಕ ಬರೆದ ಪ್ರೊ.ಚಂದ್ರಶೇಖರ್ ರವರಿಗೆ ಅಭಿನಂದನೆಗಳು ಸಲ್ಲಿಸುತ್ತೇನೆ.
ಪ್ರೊ.ಚಂದ್ರಶೇಖರ್ ರವರು 45ವರ್ಷಗಳ ಕಾಲ ಶಿಕ್ಷಕರಾಗಿ ವೃತ್ತಿಯಲ್ಲಿ ಸೇವೆ ಸಲ್ಲಿಸಿ, 72ವರ್ಷವಾದರು ಉತ್ಸಾಹದಿಂದ ಸಾಹಿತ್ಯ ಸೇವೆ ಮಾಡುತ್ತಿದ್ದಾರೆ.
ಪುಸ್ತಕದ ಕೇಂದ್ರ ಬಿಂದು ನಾಲ್ವಡಿ ಕೃಷ್ಣರಾಜ ಒಡೆಯರು, ರಾಜರ ಆಳ್ವಿಕೆಯಲ್ಲಿ ಜನಪರ ಆಡಳಿತ, ತೆರಿಗೆ ಹಣ ಸಮರ್ಪಕ ಬಳಕೆ, ಸಮ ಸಮಾಜ ನಿರ್ಮಾಣಕ್ಕೆ ಬೇಕಾದದನ್ನು ಇಡಿ ದೇಶಕ್ಕೆ ತೋರಿಸಿ ಕೊಟ್ಟರು, ಸಾಹು ಮಹಾರಾಜ್ ಅವರನ್ನ ಬಿಟ್ಟರೆ ನಾಲ್ವಡಿ ಕೃಷ್ಣರಾಜ ಒಡೆಯರು.
ಶೂದ್ರರಿಗೆ ಬ್ರಿಟಿಷರ ಆಡಳಿತದಲ್ಲಿ ಶಿಕ್ಷಣ ಕೊಡುತ್ತಿರಲ್ಲಿಲ.
65ಶಾಲೆಗಳನ್ನು 1890ರಲ್ಲಿ ಸ್ಥಾಪನೆ ಮಾಡಿದ್ದರು ನಾಲ್ವಡಿ ಕೃಷ್ಣರಾಜ ಒಡೆಯರ್ ರವರು.
ಹಿಂಸೆ, ಸವಾಲುಗಳನ್ನು ಮೆಟ್ಟಿ ನಿಂತರು. ದಿವಾನರ ಮಾತನ್ನು ಲೆಕ್ಕಿಸದೇ ಪ್ರಜಾಪ್ರತಿನಿಧಿಯಲ್ಲಿ ಮೀಸಲಾತಿ ಕೊಟ್ಟರು. ಕೆ.ಆರ್.ಎಸ್.ಅಣೆಕಟ್ಟು ಕಟ್ಟಿದ್ದರು.
ಶಿಕ್ಷಣ, ನೀರಾವರಿ, ಕೈಗಾರಿಕೆ ಮತ್ತು ವಿದ್ಯುತ್ ಎಲ್ಲ ಕ್ಷೇತ್ರಗಳಲ್ಲಿ ಅವರ ಆಡಳಿತದಲ್ಲಿ ಹೆಚ್ಚಿನ ಅಭಿವೃದ್ದಿಯಾಯಿತು.
ಚರಿತ್ರೆ ಗೊತ್ತಿದ್ದರೆ ಮಾತ್ರ ಚರಿತ್ರೆ ಬರೆಯಲು ಸಾಧ್ಯ ಎಂದು ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ರವರು ಹೇಳಿದ್ದರು.
ಮುಂದಿನ ದಿನಗಳಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರು ಪುಸ್ತಕ ಮಕ್ಕಳ ಪಠ್ಯಪುಸ್ತಕದಲ್ಲಿ ಆಳವಡಿಸಲು ಮುಖ್ಯಮಂತ್ರಿಗಳಿಗೆ ಮನವಿ ಮಾಡಲಾಗುವುದು.
ನಾಲ್ವಡಿ ಕೃಷ್ಣರಾಜ ಒಡೆಯರ ಆದರ್ಶ, ಮಾರ್ಗದರ್ಶನದಲ್ಲಿ ಎಲ್ಲರು ಸಾಗಿದರೆ ಉತ್ತಮ ಜೀವನ, ಸಮಾನತೆ ತರಲು ಸಾಧ್ಯ ಎಂದು ಹೇಳಿದರು.
ಎಂ.ಪ್ರಕಾಶಮೂರ್ತಿ ರವರು ಮಾತನಾಡಿ ಕನ್ನಡ ಸಾಹಿತ್ಯ ಪರಿಷತ್ತು 109ವರ್ಷವಾಗಿದೆ. ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರು ಪುಸ್ತಕ ಬರೆದುಕೊಡಿ ಎಂದು ಚಂದ್ರಶೇಖರ್ ರವರಿಗೆ ಹಿಂದಿನ ಅಧ್ಯಕ್ಷರಾದ ಪುಂಡಲಿಕ ಹಾಲಂಬಿರವರು ವಿನಂತಿ ಮಾಡಿದ್ದರು.
ನಾಲ್ವಡಿ ಕೃಷ್ಣರಾಜ ಒಡೆಯರು ಜನಪರ ಕಾಳಜಿ ಇರುವ ಮಹಾನ್ ವ್ಯಕ್ತಿಯಾಗಿದ್ದರು. 56ವರ್ಷ ಜೀವನದಲ್ಲಿ 36ವರ್ಷ ಕಾಲ ಜನಸೇವೆ ಇತಿಹಾಸದಲ್ಲಿ ಉತ್ತಮ ಆಡಳಿತವೆಂದು ಜನಪ್ರಿಯವಾಗಿದೆ.
ಕನ್ನಡ ನಾಡು ಎಂದು ಮರೆಯದಂತಹ ವ್ಯಕ್ತಿತ್ವ ನಾಲ್ವಡಿ ಕೃಷ್ಣರಾಜ ಒಡೆಯರ್ ರವರದ್ದು.
ನಾಲ್ವಡಿ ಕೃಷ್ಣರಾಜ ಒಡೆಯರ ಸಾಧನೆಗಳು ಜೀವನ ಚರಿತ್ರೆ ನಾಡಿನ ಜನತೆಗೆ ತಿಳಿಯಬೇಕು ಎಂದು ಪುಸ್ತಕ ರೂಪದಲ್ಲಿ ಹೊರತರಲಾಗಿದೆ ಎಂದು ಹೇಳಿದರು.
ಸ್ವಾಗತ ಡಾ.ಹಂಗು ರಾಜೇಶ್,ನಿರೂಪಣೆ ಇಂದಿರಾಶರಣ್, ವಂದನಾರ್ಪಣೆ ಹೆಚ್.ಎಸ್.ಸುಧೀಂದ್ರಕುಮಾರ್ ಮತ್ತು ಶೋಭಾ ರುದ್ರಮುನಿ ಇಂಚಗೇರಿಮಠ, ಟಿ.ಎಸ್.ಶೇಖರ್ ತಿಪಟೂರು, ಭಾನಕುಮಾರಿ ನಂಜನಗೂಡು ಇವರಿಂದ ಗೀತೆಗಳ ಗಾಯನ ಏರ್ಪಡಿಸಲಾಗಿತ್ತು.