ಆನೇಕಲ್ : ಆನೇಕಲ್ ತಾಲ್ಲೂಕಿನ 20 ಗ್ರಾಮ ಪಂಚಾಯಿತಿಗಳನ್ನು ಮೇಲ್ದರ್ಜೆಗೆ ಏರಿಸುವ ಸರ್ಕಾರದ ಕ್ರಮ ಅವೈಜ್ಞಾನಿಕವಾಗಿದೆ ಎಂದು ಕರ್ನಾಟಕ ಜೈ ಭೀಮ್ ಜನಜಾಗೃತಿ ವೇದಿಕೆ ರಾಜ್ಯಾದ್ಯಕ್ಷ ವೈ ಚಿನ್ನಪ್ಪ ಚಿಕ್ಕಹಾಗಡೆ ಆರೋಪಿಸಿದ್ದಾರೆ.
ಬುಧವಾರ ಆನೇಕಲ್ ಪಟ್ಟಣದ ರಾಘವೇಂದ್ರ ಭವನದಲ್ಲಿ ನಡೆದ ಪತ್ರಿಕಾ ಘೋಷ್ಟಿಯಲ್ಲಿ ಮಾತನಾಡಿ ಆನೇಕಲ್ ವಿಧಾನಸಭಾ ಕ್ಷೇತ್ರದ (1)ದೊಮ್ಮಸಂದ್ರ-ಯಮರೆ- ಸರ್ಜಾಪುರ (ಮೂರು)ಗ್ರಾಮ ಪಂಚಾಯಿತಿಗಳು (2)ಅತ್ತಿಬೆಲೆ ಪುರಸಭೆ-ನೆರಳೂರು-ಬಿದರಗುಪ್ಪೆ (ಎರಡು) ಗ್ರಾಮ ಪಂಚಾಯಿತಿಗಳು ಹಾಗು (3)ಆನೇಕಲ್ ಪುರಸಭೆ- ವಣಕನಹಳ್ಳಿ-ಸಮಂದೂರು(ಎರಡು)ಗ್ರಾಮ ಪಂಚಾಯಿತಿಗಳನ್ನು ಸೇರಿಸಿ ಒಟ್ಟು 03 ನಗರಸಭೆಗಳನ್ನಾಗಿ ಹಾಗೂ (1)ಕರ್ಪೂರು-ಬ್ಯಾಗಡದೇನಹಳ್ಳಿ-ಗ್ರಾಮ ಪಂಚಾಯಿತಿ (2)ಮುಗಳೂರು-ನೆರಿಗಾ ಗ್ರಾಮ ಪಂಚಾಯಿತಿ(3) ಬಳ್ಳೂರು-ಮಾಯಸಂದ್ರ-ಮರಸೂರು(ಮೂರು)ಗ್ರಾಮ ಪಂಚಾಯಿತಿ(4)ಹಂದೇನಹಳ್ಳಿ-ಬಿಲ್ಲಾಪುರ-ಮುತ್ತಾನಲ್ಲೂರು (ಮೂರು)ಗ್ರಾಮ ಪಂಚಾಯಿತಿ (5)ಇಂಡ್ಲವಾಡಿ-ಹಾರಗದ್ದೆ (ಎರಡು)ಗ್ರಾಮ ಪಂಚಾಯಿತಿಗಳನ್ನು ಸೇರಿಸಿ ಒಟ್ಟು 05 ಪುರಸಭೆಗಳನ್ನಾಗಿ ವಿಂಗಡಿಸಲು, ಬೆಂಗಳೂರು ನಗರ ಜಿಲ್ಲಾಧಿಕಾರಿಗಳು ಮತ್ತು ನಗರ ಜಿಲ್ಲಾ ಪಂಚಾಯತಿ ಮುಖ್ಯಕಾರ್ಯನಿರ್ವಹಣಾಧಿಕಾರಿಗಳು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿಗಳ ಮೂಲಕ ಗ್ರಾ.ಪಂ ಗಳಿಗೆ ವರದಿ ಕೇಳಿರುವುದು ಗಮನಕ್ಕೆ ಬಂದಿದೆ.
ಆನೇಕಲ್ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಗ್ರಾ ಪಂ ಗಳಾಗಿದ್ದ ಚಂದಾಪುರ,ಬೊಮ್ಮಸಂದ್ರ,ಅತ್ತಿಬೆಲೆ ಪುರಸಭೆಗಳನ್ನಾಗಿ ಹೆಬ್ಬಗೋಡಿ ಗ್ರಾ ಪಂ ಯನ್ನು ನಗರಸಭೆಯನ್ನಾಗಿ 2015 ರಲ್ಲಿ ಮೇಲ್ದರ್ಜೆಗೆ ಏರಿಸಲಾಗಿತ್ತು. ಈಗ ಕ್ಷೇತ್ರದ ಎಲ್ಲಾ 20 ಗ್ರಾಮ ಪಂಚಾಯಿತಿಗಳನ್ನು ಮೇಲ್ದರ್ಜೆಗೆ ಏರಿಸುವುದರಿಂದ 515 ಗ್ರಾ.ಪಂ,20 ತಾ.ಪಂ,09 ಜಿ.ಪಂ ಕ್ಷೇತ್ರಗಳು ರದ್ದಾಗಲಿವೆ,ಅಲ್ಲದೇ ಮೀಸಲಾತಿಯಲ್ಲಿ ಗೆದ್ದ ಪರಿಶಿಷ್ಟ ಜಾತಿ,ಪರಿಶಿಷ್ಟ ವರ್ಗ, ಹಿಂದುಳಿದ ಜಾತಿ, ಮಹಿಳೆಯರು ಸೇರಿದಂತೆ ಶೇ.60 ರಷ್ಟು ಮಂದಿಗೆ ಭಾರಿ ಅನ್ಯಾಯವಾಗಲಿದೆ ಎಂದು ತಿಳಿಸಿದರು.
ಗ್ರಾ ಪಂ ಗಳ ಅಸ್ತಿತ್ವವೇ ಇರುವುದಿಲ್ಲ: ಕ್ಷೇತ್ರದ 20 ಗ್ರಾ ಪಂ ಗಳ ಪೈಕಿ 09 ಗ್ರಾಮ ಪಂಚಾಯಿತಿ,02 ಪುರಸಭೆಗಳನ್ನು ಸೇರಿಸಿ 03 ನಗರಸಭೆಗಳನ್ನಾಗಿ,11 ಗ್ರಾ ಪಂ ಗಳನ್ನು ಸೇರಿಸಿ 05 ಪುರಸಭೆಗಳನ್ನಾಗಿ ವಿಂಗಡಿಸುವುದರಿಂದ ಗ್ರಾ ಪಂ ಗಳ ಅಸ್ತಿತ್ವವೇ ಇಲ್ಲದಂತಾಗುತ್ತದೆ.
ಕರ್ನಾಟಕ ಸರ್ಕಾರವು 74ನೇ ಸಂವಿಧಾನಾತ್ಮಕ ತಿದ್ದುಪಡಿಯ ಅಧಿನಿಯಮದ ಪ್ರಕಾರ ಸ್ಠಳೀಯ ಸಂಸ್ಥೆಗಳನ್ನು ಜನಸಂಖ್ಯೆ ಮತ್ತು ಇತರ ಮಾನದಂಡಗಳ ಮೇಲೆ ಪಟ್ಟಣ ಪಂಚಾಯಿತಿ ರಚಿಸಲು 10,000 ದಿಂದ 20,000 ಜನಸಂಖ್ಯೆ, ಪುರಸಭೆಗೆ 20,000 ದಿಂದ 50,000 ಜನಸಂಖ್ಯೆ, ನಗರಸಭೆಗೆ 50,000 ದಿಂದ 05 ಲಕ್ಷ ಜನಸಂಖ್ಯೆ ಇರಬೇಕು ಅಲ್ಲದೇ ಒಂದು ಚದರ ಕಿ.ಮೀ ಪ್ರದೇಶದಲ್ಲಿ ಕನಿಷ್ಟ1500 ಜನರು ವಾಸವಾಗಿರಬೇಕು, ಶೇ.50 ರಷ್ಟು ಕೃಷಿಯೇತರ ಚಟುವಟಿಕೆಗಳು ಮತ್ತು ಶೇ.50 ರಷ್ಟು ಉದ್ಯೋಗದಾತರು ಇರಬೇಕು ಎಂದು ಕಾಯ್ದೆಯಲ್ಲಿ ತಿಳಿಸಿದ್ದರೂ ಸಹ ಈಗ ಪ್ರಸ್ತಾಪಿತ ಆನೇಕಲ್ ಕ್ಷೇತ್ರದ 03ನಗರಸಭೆ ಮತ್ತು 05ಪುರಸಭೆಗಳ ರಚನೆಯೂ 10 ರಿಂದ 12 ಕಿ.ಮಿ ವ್ಯಾಪ್ತಿಯನ್ನು ಹೊಂದಿರುತ್ತವೆ, 2-3 ಗ್ರಾಮಗಳನ್ನು ಸೇರಿಸಿ ಪುರಸಭೆ, ನಗರಸಭೆಯ ವಾರ್ಡು ರಚನೆ ಮಾಡಬೇಕಾಗುತ್ತೆ ಇದರಿಂದ ಆಡಳಿತ ನಡೆಸಲು ಜನಪ್ರತಿನಿಧಿಗಳಿಗೆ, ಅಧಿಕಾರಿಗಳಿಗೆ ಹಾಗು ಜನಸಾಮಾನ್ಯರಿಗೆ ಬಹಳ ತೊಂದರೆಯಾಗಲಿದೆ ಎಂದು ತಿಳಿಸಿದರು.
ಹಣವಂತರಿಗೆ,ಬಲಾಡ್ಯರಿಗೆ ಅಧಿಕಾರ:
ಗ್ರಾ ಪಂ ಗಳಲ್ಲಿ ಇದುವರೆವಿಗೂ ಪಕ್ಷಗಳ ಚಿಹ್ನೆ ಇಲ್ಲದೇ ಪಕ್ಷಾತ್ತೀತವಾಗಿ ಚುನಾವಣೆಗಳು ನಡೆಯುತ್ತಿತ್ತು, ಈಗ ನಗರಸಭೆ,ಪುರಸಭೆಗಳು ಅಸ್ತಿತ್ವಕ್ಕೆ ಬಂದರೆ ಪಕ್ಷಗಳ ಚಿಹ್ನೆ ಮೇಲೆ ಚುನಾವಣೆಗಳು ನಡೆಯುವುದರಿಂದ ರಾಜಕೀಯ ಶಕ್ತಿಗಳು ತಲೆಎತ್ತಲಿವೆ, ಇದರಿಂದ ಸಾಕಷ್ಟು ಮಂದಿ ಬಡವರು, ಪರಿಶಿಷ್ಟ ಜಾತಿ , ಪರಿಶಿಷ್ಟ ವರ್ಗ, ಹಿಂದುಳಿದ ಜಾತಿ ಮತ್ತು ಮಹಿಳೆಯರು ಚುನಾಯಿತ ಸದಸ್ಯರಾಗುವುದು ತಪ್ಪಿ ಹೋಗಿ ಹಣವಂತರಿಗೆ,ಬಲಾಡ್ಯರಿಗೆ ಅಧಿಕಾರ ಸಿಕ್ಕಂತಾಗುತ್ತದೆ.ಇದರಿಂದ ಶೇ.60 ಮಂದಿಗೆ ಭಾರಿ ಅನ್ಯಾಯವಾಗಲಿದೆ ಎಂದು ತಿಳಿಸಿದರು.
ಹಿರಿಯ ಪತ್ರಕರ್ತರಾದ ಚಂದಾಪುರ ಸಿ.ಆರ್.ವಿಜಯಕುಮಾರ್ ಮಾತನಾಡಿ ಕ್ಷೇತ್ರದಲ್ಲಿರುವ 20 ಗ್ರಾ.ಪಂ ಗಳ ಪೈಕಿ 15 ಗ್ರಾ ಪಂ ಗಳ ವ್ಯಾಪ್ತಿಯಲ್ಲಿ ಗ್ರಾಮಗಳು ಶೇ.60-70 ರಷ್ಟು ಜನರು ಇನ್ನೂ ಗ್ರಾಮೀಣ ಭಾಗದ ಗ್ರಾಮಗಳಲ್ಲಿ ವಾಸಮಾಡುತ್ತಿದ್ದಾರೆ. ಇನ್ನೂ ಶೇ.60-65 ರಷ್ಟು ಇನ್ನೂ ಕೃಷಿ ಭೂಮಿಗಳನ್ನು ಹೊಂದಿದ್ದಾರೆ. ಸುರಗಜಕ್ಕನಹಳ್ಳಿ,ಇಂಡ್ಲವಾಡಿ, ಬ್ಯಾಗಡದೇನಹಳ್ಳಿ, ವಣಕನಹಳ್ಳಿ,ಸಮಂದೂರು,ಕರ್ಪೂರು, ಮಾಯಸಂದ್ರ, ಮರಸೂರು, ಮುತ್ತಾನಲ್ಲೂರು,ಹಂದೇನಹಳ್ಳಿ ಗ್ರಾ ಪಂ ವ್ಯಾಪಿಯ ಹಳ್ಳಿಗಳಲ್ಲಿ ಇನ್ನೂ ಕೃಷಿ,ರೇಷ್ಮೆ,ತೋಟಗಾರಿಕಾ,ಉಪಕಸುಬುಗಳ ಮೂಲಕ ಜೀವನ ನಡೆಸುತ್ತಿದ್ದಾರೆ. ಅಲ್ಲದೇ ರೈತರು ಕೃಷಿ ಭೂಮಿಗಳಲ್ಲಿ ಸಣ್ಣ ಪುಟ್ಟ ಬೆಳೆ ಬೆಳೆದರೆ,ಕೆಲವು ಕಡೆ ಬೀಡು ಬಿಟ್ಟಿದ್ದಾರೆ.ಕೃಷಿ ಭೂಮಿಗಳಲ್ಲಿ ಸ್ವಂತಕ್ಕೆ ಮನೆ, ರಸ್ತೆ ಬದಿಯಲ್ಲಿ ಬಾಡಿಗೆ ಕಟ್ಟಡ, ವಾಣಿಜ್ಯ ಮಳಿಗೆ, ಅಂಗಡಿ-ಮುಂಗಟ್ಟುಗಳನ್ನು ನಿರ್ಮಿಸಿರುವುದರಿಂದ ಯಾವುದೇ ತೆರಿಗೆಯನ್ನು ವಿಧಿಸಲು ಸಾಧ್ಯವಾಗುವುದಿಲ್ಲ,ಅಲ್ಲದೇ ಯಾರೂ ಕೂಡ ಕಂದಾಯ ಕಟ್ಟುವುದಿಲ್ಲ ಕೃಷಿ ಭೂಮಿಗಳಿಂದ ಸ್ಧಳೀಯ ಸಂಸ್ಥೆಗಳಿಗೆ ಹೆಚ್ಚಿನ ಆದಾಯ ಇಲ್ಲದಂತಾಗಿ ಹೋಗುತ್ತದೆ.
2011 ಜನಸಂಖ್ಯೆ ಪ್ರಕಾರ ಗ್ರಾಮ ಪಂಚಾಯಿತಿಗಳು 15 ರಿಂದ 20 ಸದಸ್ಯರನ್ನು ಮಾತ್ರ ಹೊಂದಿದ್ದು 2011 ಜನಸಂಖ್ಯೆ ಪ್ರಕಾರ ಪ್ರತಿ ಗ್ರಾ.ಪಂ ಸುಮಾರು 10,000 ಜನಸಂಖ್ಯೆಯನ್ನು ಹೊಂದಿರುತ್ತವೆ. ಆದರೂ ಅಧಿಕಾರಿಗಳು 2-3 ಪಂಚಾಯಿತಿಗಳನ್ನು ಸೇರಿಸಿ ನಗರಸಭೆ, ಪುರಸಭೆಗಳನ್ನಾಗಿ ಮಾಡಿಹೊರಟಿರುವುದು ಅವೈಜ್ಞಾನಿಕ ಎಂದರು. ಕ್ಷೇತ್ರದಲ್ಲಿ ಹಲವಾರು ಗ್ರಾಮಗಳಿಗೆ ಇನ್ನೂ ಮೂಲಭೂತ ಸೌಲಭ್ಯಗಳನ್ನು ಒದಗಿಸಲು ಸರ್ಕಾರ ವಿಫಲವಾಗಿದೆ ಎಂದರು
ಸಿಬ್ಬಂದಿಗಳ ಕೊರತೆ ಕಾಡುತ್ತೆ::
ಗ್ರಾ ಪಂ ಗಳಲ್ಲಿ ಪಂಚಾಯಿತಿ ಅಭಿವೃದ್ದಿ ಅಧಿಕಾರಿಗಳು,ಕಾರ್ಯದರ್ಶಿಗಳು ಸ್ಥಳೀಯವಾಗಿ ನೇಮಕವಾದ ಬಿಲ್ಕಲೆಕ್ಟರ್ ಗಳು, ವಾಟರ್ಮೆನ್ಗಳು, ಪೌರಕಾರ್ಮಿಕರು ಎಲ್ಲಾ ಕಾರ್ಯಗಳನ್ನು ನಿರ್ವಹಿಸುತ್ತಿದ್ದರು,ಆದರೆ ಪುರಸಭೆಗೆ ಸುಮಾರು 100 ಮಂದಿ, ನಗರಸಭೆಗೆ 200ಜನ ಅಧಿಕಾರಿ,ಸಿಬ್ಬಂದಿ ಗುತ್ತಿಗೆ ಆಧಾರ ಮೇಲೆ ಕೆಲಸ ಮಾಡುವವರು, ಪೌರಕಾರ್ಮಿಕರು ವಾಟರ್ ಮೇನ್ ಗಳು ಬೇಕಾಗಿದ್ದಾರೆ ಸರ್ಕಾರ ಎಲ್ಲರನ್ನು ನೇಮಕ ಮಾಡುವುದಿಲ್ಲ ಇದರಿಂದ ಕೆಲಸಕಾರ್ಯಗಳಿಗೆ ತೊಂದರೆಯಾಗುತ್ತದೆ. ಗ್ರಾ ಪಂ ಯ ಸಾಕಷ್ಟು ಮಂದಿ ನೌಕರರಿಗೆ ನೇಮಕಾತಿ ಪತ್ರ ನೀಡಿಲ್ಲ ಅವರಿಗೆ ಅನ್ಯಾಯವಾಗಲಿದೆ ಎಂದು ತಿಳಿಸಿದರು.
ಗ್ರಾಮ ಸಭೆಗಳ ಇರೋದಿಲ್ಲ:: ಗ್ರಾಮ ಪಂಚಾಯಿತಿಗಳಲ್ಲಿ ಸಾರ್ವಜನಿಕ ಕುಂದುಕೊರತೆ ಮತ್ತು ಫಲಾನುಭವಿಗಳ ಆಯ್ಕೆ ಗ್ರಾಮ ಸಭೆಗಳ ಮೂಲಕ ನಡೆಯುತ್ತಿತ್ತು ಆದರೆ ಈಗ ಗ್ರಾಮ ಸಭೆಗಳೇ ನಡೆಯುವುದಿಲ್ಲ. ಅಲ್ಲದೇ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಸರ್ಕಾರಿ ಕೆಲಸ, ಉನ್ನತ ಶಿಕ್ಷಣ ಪಡೆಯಲು ಹಾಗು ಉನ್ನತ ಮಟ್ಟದ ಪರೀಕ್ಷೆಗಳನ್ನು ಎದುರಿಸಲು ಗ್ರಾಮೀಣ ಕೋಟಾದಡಿಯಲ್ಲಿ ಅವಕಾಶ ಸಿಗುವುದಿಲ್ಲವೆಂದು ತಿಳಿಸಿದರು.
ಪತ್ತಿಕಾ ಗೋಷ್ಟಿಯಲ್ಲಿ ಹಿರಿಯ ಪತ್ರಕರ್ತರಾದ ಸಿ.ಆರ್.ವಿಜಯಕುಮಾರ್ ವೇದಿಕೆ ರಾಜ್ಯ ಪ್ರಧಾನ ಕಾರ್ಯದರ್ಶಿ ಟಿ.ಎಸ್ ಕುಮಾರಾಚಾರಿ, ರಾಜ್ಯ ಉಪಾಧ್ಯಕ್ಷ ಅತ್ತಿಬೆಲೆ ರವಿಕುಮಾರ್,ರಾಜ್ಯ ಖಜಾಂಚಿ ಚಂದಾಪುರ ಕೆ.ಮಹೇಶ್ ಉಪಸ್ಢಿತರಿದ್ದರು.
ವರದಿ :- ನಾಗರಾಜ್ ಪದ್ಮಶಾಲಿ