ಹುಣಸೂರು ಸರ್ಕಾರದ ಜಾಗದಲ್ಲಿ ಕಟ್ಟಡ ನಿರ್ಮಿಸಲು ನಗರಸಭೆಯೇ ಪರವಾನಗಿ ನೀಡಿರುವ ಅಚ್ಚರಿಯ ಪ್ರಕರಣವೊಂದು ಬೆಳಕಿಗೆ ಬಂದಿದೆ.ತಡವಾಗಿ ಜ್ಞಾನೋದಯವಾಗಿ ಪರವಾನಗಿ ರದ್ದುಪಡಿಸಲು ಮುಂದಾಗಿದೆ.ನೆಪಮಾತ್ರಕ್ಕೆ ನೋಟೀಸ್ ನೀಡಿದ ಅಧಿಕಾರಿಗಳು ಜಾಣಕುರುಡರಂತೆ ವರ್ತಿಸುತ್ತಾ ಕಣ್ಮುಚ್ಚಿ ಕುಳಿತಿದ್ದಾರೆ.ಇತ್ತ ಕಟ್ಟಡ ಕಾಮಗಾರಿ ರಾಜಾರೋಷವಾಗಿ ಸಾಗುತ್ತಿದೆ. ಹುಣಸೂರು ತಾಲೂಕು ಕಸಬಾ ಹೋಬಳಿ,ದೊಡ್ಡಹುಣಸೂರು ಗ್ರಾಮ ಸರ್ಕಾರಿ ಸರ್ವೆ ನಂ.250 ರ 16.39 ಎಕ್ರೆ ವ್ಯಾಪ್ತಿಯಲ್ಲಿ ಬರುವ ಖಾತೆ ನಂ.185/152/1 ಹಾಗೂ 184/151/1 ರ ನಿವೇಶನಗಳಲ್ಲಿ ವಾಣಿಜ್ಯ ಹಾಗೂ ವಸತಿ ಕಟ್ಟಡಗಳನ್ನ ನಿರ್ಮಿಸಲು ಹುಣಸೂರು ನಗರಸಭೆಯಿಂದ ಪರವಾನಗಿ ನೀಡಿದ್ದಾರೆ.ಆದ್ರೆ ದಾಖಲೆಗಳನ್ನ ಪರಿಶೀಲನೆ ಮಾಡಿದಾಗ ಸದರಿ ಜಾಗದ ಆರ್.ಟಿ.ಸಿ.ಯಲ್ಲಿ ಟೌನ್ ಮುನಿಸಿಪಾಲಿಟಿ ಹುಣಸೂರು ಎಂದು ದಾಖಲಾಗಿದೆ.ಈ ಹಿನ್ನಲೆ ಪರವಾನಗಿ ನೀಡಿರುವ ಬಗ್ಗೆ ಸಾಕಷ್ಟು ತಕರಾರುಗಳು ಮತ್ತು ಆಕ್ಷೇಪಣೆಗಳು ಬಂದಿದೆ.ಹೀಗಾಗಿ ಸದರಿ ಸರ್ವೆ ನಂ.ಗೆ ಪರವಾನಗಿ ನೀಡಿರುವ ಬಗ್ಗೆ ಮೈಸೂರು ಜಿಲ್ಲಾ ನಗರಾಭಿವೃದ್ದಿ ಕೋಶದ ಯೋಜನಾ ನಿರ್ದೇಶಕರಿಂದ ತೆನಿಖೆ ಮಾಡಲು ತಂಡ ರಚಿಸಲಾಗಿದೆ.ಮುಂದಿನ ಆದೇಶದ ವರೆಗೆ ಯಾವುದೇ ಪರವಾನಗಿ ನೀಡಬಾರದೆಂದು ಹಾಗೂ ನಿರ್ಮಾಣ ಕಾರ್ಯ ಸ್ಥಗಿತಗೊಳಿಸಬೇಕೆಂದು ಪೌರಾಯುಕ್ತರು ನೋಟೀಸ್ ನೀಡಿ ಈಗಾಗಲೇ ನೀಡಿರುವ ಪರವಾನಗಿಯನ್ನ ಹಿಂದಕ್ಕೆ ಪಡೆದಿದ್ದಾರೆ.ನಿರ್ಮಾಣ ಕಾರ್ಯ ಸ್ಥಗಿತಗೊಳಿಸುವಂತೆ ಮೂರು ನೋಟೀಸ್ ನೀಡಲಾಗಿದೆ.ಹೀಗಿದ್ದೂ ಸರ್ಕಾರಿ ಜಾಗದಲ್ಲಿ ರಾಜಾರೋಷವಾಗಿ ನಿರ್ಮಾಣ ಕಾರ್ಯ ಮುಂದುವರೆಯುತ್ತಿದೆ.ಅಧಿಕಾರಿಗಳು ನೆಪಮಾತ್ರಕ್ಕೆ ನೋಟೀಸ್ ನೀಡಿ ಕಣ್ಮುಚ್ಚಿ ಕುಳಿತಿದ್ದಾರೆ.ಮೂರು ನೋಟೀಸ್ ಜಾರಿಯಾದ್ರೂ ಕಾಮಗಾರಿ ನಡೆಯುತ್ತಲೇ ಇದೆ.
ಸರ್ಕಾರಿ ಜಾಗಕ್ಕೆ ಪರವಾನಗಿ ನೀಡಿದ್ದು ಹೇಗೆ…?ಪರವಾನಗಿ ನೀಡುವ ಮುನ್ನ ದಾಖಲೆಗಳನ್ನ ಪರಿಶೀಲಿಸಲಿಲ್ಲವೇ…?ಆರ್.ಟಿ.ಸಿ.ಯಲ್ಲಿ ಟೌನ್ ಮುನಿಸಿಪಾಲಿಟಿ ಎಂದು ದಾಖಲಾಗಿದ್ದರೂ ಪರವಾನಗಿ ನೀಡಿದವರು ಯಾರು…? ಮೂರು ನೋಟೀಸ್ ಜಾರಿ ಮಾಡಿ ಕಣ್ಮುಚ್ಚಿ ಕುಳಿತಿರುವ ಕಾರಣವಾದ್ರೂ ಏನು..? ಎಂಬ ಪ್ರಶ್ನೆಗಳಿಗೆ ಪೌರಯುಕ್ತರು ಉತ್ತರ ನೀಡಬೇಕಿದೆ…