ರಾಯಬಾಗ: ವಿದ್ಯಾರ್ಥಿಗಳು ಸೇವಾ ಮನೋಭಾವ ರೂಢಿಸಿಕೊಳ್ಳಲು ಮತ್ತು ನಾಯಕತ್ವ ಗುಣ ಬೆಳೆಸಿಕೊಳ್ಳಲು ಎನ್.ಎಸ್.ಎಸ್ ವಾರ್ಷಿಕ ವಿಶೇಷ ಶಿಬಿರಗಳು ಉತ್ತಮ ಅವಕಾಶ ಒದಗಿಸಿಕೊಡುತ್ತವೆ ಎಂದು ಶಿಕ್ಷಣ ಪ್ರಸಾರಕ ಮಂಡಳದ ಕಾನೂನು ಮಹಾವಿದ್ಯಾಲಯದ ಪ್ರಾಂಶುಪಾಲರಾದ ಎಸ್.ಎಸ್. ಕುರಬೇಟಿ ಹೇಳಿದರು.
ರಾಯಬಾಗ ಗ್ರಾಮೀಣ ವ್ಯಾಪ್ತಿಯ ದತ್ತು ಗ್ರಾಮವಾದ ಶಾಹುಪಾರ್ಕನ ಶ್ರೀ ಬೀರೇಶ್ವರ ದೇವಸ್ಥಾನದ ಸಭಾ ಭವನದಲ್ಲಿ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ ಹುಬ್ಬಳ್ಳಿ ಇವರ ಸಹಯೋಗದಲ್ಲಿ ರಾಯಬಾಗ ಪಟ್ಟಣದ ಪ್ರತಿಷ್ಟಿತ ಶಿಕ್ಷಣ ಸಂಸ್ಥೆಯಾದ
ಶಿಕ್ಷಣ ಪ್ರಸಾರಕ ಮಂಡಳದ ಕಾನೂನು ಮಹಾವಿದ್ಯಾಲಯದ ವತಿಯಿಂದ ಸೋಮವಾರ ಹಮ್ಮಿಕೊಳ್ಳಲಾಗಿದ್ದ ಏಳು ದಿನಗಳ
ರಾಷ್ಟ್ರೀಯ ಸೇವಾ ಯೋಜನೆ ವಿಶೇಷ ಶಿಬಿರದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಈ ವಿಶೇಷ ಶಿಬಿರಕ್ಕೆ ವೇದಿಕೆ ಮೇಲಿದ್ದ ಗಣ್ಯರು ದೀಪ ಬೆಳಗಿಸುವ ಮೂಲಕ ಚಾಲನೆ ನೀಡಿದರು.
ನಂತರ ರಾಷ್ಟ್ರೀಯ ಸೇವಾ ಯೋಜನಾ ಕಾರ್ಯಕ್ರಮದ ಅಧಿಕಾರಿಗಳಾದ ಪ್ರೊ.ಪಿ.ಆರ್ ಸವದತ್ತಿ ಅವರು ಮಾತನಾಡಿ ಶಿಬಿರಾರ್ಥಿಗಳಿಗೆ ಹಾಗೂ ಗ್ರಾಮಸ್ಥರಿಗೆ ರಾಷ್ಟ್ರೀಯ ಸೇವಾ ಯೋಜನೆಯ ಉದ್ದೇಶ ಮತ್ತು ಏಳು ದಿನಗಳ ಕಾಲ ನಡೆಯುವ ಚಟುವಟಿಕೆಗಳ ಬಗ್ಗೆ ತಿಳಿಸಿಕೊಟ್ಟರು.
ಈ ಸಂದರ್ಭದಲ್ಲಿ ಹಿರಿಯರಾದ ನಿಂಗಪ್ಪಾ ಪೂಜಾರಿ, ಶ್ರೀನಾಥ ಪೂಜಾರಿ,ಉಪನ್ಯಾಸಕರಾದ ಎಸ್.ಎಮ್. ಲೈನದಾರ,ಆಯ್.ಆರ್ ಪತ್ತಾರ,ಎಮ್.ಆರ್ ಕಠಾರಿ, ವಿನಾಯಕ ಘಾಳಿ, ರಂಜಾನ ಮುಲ್ಲಾ, ಪ್ರಮೋದ ತಳವಾರ, ದಯಾನಂದ ಗಡ್ಡೆ,ರಾಮು ಕಾಕಡೆ,ರಾಷ್ಟ್ರೀಯ ಸೇವಾ ಯೋಜನೆಯ ಸ್ವಯಂ ಸೇವಕರು ಹಾಗೂ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಈ ಕಾರ್ಯಕ್ರಮವನ್ನು ವಿದ್ಯಾರ್ಥಿಗಳಾದ ತ್ರಿವೇಣಿ ಮೊಪಗಾರ ನಿರೂಪಿಸಿ,ಸ್ವಾತಿ ಶೇಡಬಾಳೆ ಸ್ವಾಗತಿಸಿ,ರಾಷ್ಟ್ರೀಯ ಸೇವಾ ಯೋಜನಾ ಶಿಬಿರದ ಕಾರ್ಯದರ್ಶಿಯಾದ ಸುನೀಲ ತಳ್ಳಕೇರಿ ವಂದಿಸಿದರು.
