ಕುಮಟಾ :-ಪಟ್ಟಣದ ರಥ ಬೀದಿಯಲ್ಲಿ ನೆಲೆಸಿರುವ ವೆಂಕಟರಮಣ ದೇವರ ರಥೋತ್ಸವವು ರಥ ಸಪ್ತಮಿ ದಿನವಾದ ಮಂಗಳವಾರದಂದು ಭಕ್ತರ ಜಯಘೋಷದೊಂದಿಗೆ ಅದ್ದೂರಿಯಾಗಿ ನಡೆಯಿತು.ವೆಂಕಟರಮಣ ದೇವರ ಜಾತ್ರೆಯ ಪ್ರಯುಕ್ತ ದೇವರಿಗೆ ವಿವಿಧ ಸಾಂಪ್ರದಾಯಿಕ ಧಾರ್ಮಿಕ ಕಾರ್ಯಕ್ರಮಗಳು ನಡೆದವು.ವೆಂಕಟರಮಣ ದೇವಸ್ಥಾನಕ್ಕೆ ಬೆಳೆಗ್ಗೆಯಿಂದ ಭಕ್ತರು ಆಗಮಿಸಿ ಹಣ್ಣು ಕಾಯಿ ಮಾಡಿ ಪೂಜೆ ಸಲ್ಲಿಸಿದರು.ದೇವರ ಮೂರ್ತಿ ರಥದಲ್ಲಿ ಕೂರಿಸಿ ಪೂಜೆ ಸಲ್ಲಿಸಿ ರಥಾರೋಹಣ ನೆರೆವೇರಿಸಲಾಯಿತು. ಭಕ್ತರು ರಥಾರೋಹಣದಲ್ಲಿ ಪಾಲ್ಗೊಂಡು ರಥಕ್ಕೆ ಬಾಳೆಹಣ್ಣು ಕಡಲೆ ಎಸೆದು ತಮ್ಮ ಇಷ್ಟಾರ್ಥವನ್ನು ಈಡೇರಿಸುವಂತೆ ಬೇಡಿಕೊಂಡರು .ಜಾತ್ರೆಯ ಪ್ರಯುಕ್ತ ಅಂಗಡಿ ಹಾಗೂ ತಿನಿಸುಗಳ ಮಳಿಗೆಗಳು ಜನರನ್ನು ಕೈಬಿಸಿ ಕರೆಯುತ್ತಿದ್ದು. ಜನರು ತಮಗೆ ಇಷ್ಟವಾದ ಸಾಮಗ್ರಿಗಳನ್ನು ಖರೀದಿ ಮಾಡಿ ಖುಷಿ ಪಟ್ಟರು.
