ಕುಮಟಾ : ತಾಲೂಕಿನ ಹೆದ್ದಾರಿಯಲ್ಲಿ ಎದುರಿಗೆ ಬಂದ ಜಾನುವಾರನ್ನ ತಪ್ಪಿಸಲು ಹೋಗಿ ಲಾರಿಯೊಂದು ಪಲ್ಟಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ತಾಲೂಕಿನ ಬರ್ಗಿಯಲ್ಲಿ ಸಂಭವಿಸಿದೆ.
ಮಂಗಳೂರಿನಿಂದ ಗೇರು ಬೀಜವನ್ನ ತುಂಬಿಕೊಂಡು ಗುಜರಾತಕ್ಕೆ ತೆರಳುತ್ತಿದ್ದ ಲಾರಿಗೆ ಬರ್ಗಿ ಸಮೀಪ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಜಾನುವಾರು ಎದುರಾಗಿತ್ತು ಎನ್ನಲಾಗಿದೆ.ಅದನ್ನ ತಪ್ಪಿಸಲು ಹೋದ ಪರಿಣಾಮ ಹೆದ್ದಾರಿಯಲ್ಲೆ ಲಾರಿ ಪಲ್ಟಿಯಾಗಿದೆ. ಘಟನೆಯಿಂದಾಗಿ ಲಾರಿ ಚಾಲಕನಿಗೆ ಸಣ್ಣಪುಟ್ಟ ಗಾಯವಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾನೆ ಎಂದು ತಿಳಿದುಬಂದಿದೆ.ಚಾಲಕನನ್ನು ಕುಮಟಾ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನಾ ಸ್ಥಳಕ್ಕೆ ಗೋಕರ್ಣ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
