ಕಾಗವಾಡ: ಕಾಗವಾಡ ತಾಲೂಕಿನ ನೂತನ ದಂಡಾಧಿಯಾಗಿ ರವೀಂದ್ರ ಹಾದಿಮನಿ ಗುರುವಾರ 3 ರಂದು ಅಧಿಕಾರ ಸ್ವೀಕಾರ ಮಾಡಿದರು.
ಗುರುವಾರ ದಿನಾಂಕ 3 ರಂದು ಕಾಗವಾಡ ಪಟ್ಟಣದ ಇಲ್ಲಿಯ ಪ್ರವಾಸಿಮಂದಿರದಲ್ಲಿ ಹಮ್ಮಿಕೊಂಡ ನೂತನ ಅಧಿಕಾರ ಹಸ್ತಾಂತರ ಕಾರ್ಯಕ್ರಮದಲ್ಲಿ ನಿಕಟ ಪೂರ್ವ ಅಧಿಕಾರಿ ರಾಜೇಶ್ ಬುರ್ಲಿ ಅವರು ಕಳೇದ ನಾಲ್ಕು ವರ್ಷಗಳಿಂದ ಕಾಗವಾಡ ತಾಲೂಕಿನಲ್ಲಿ ನಿಷ್ಟೆಯಿಂದ ನಿಷ್ಠಾವಂತ ಸೇವೆಸಲ್ಲಿಸಿ ಬೆಂಗಳೂರಿಗೆ ವರ್ಗಾವಣೆ ಗೊಂಡು ನೂತನ ದಂಡಾಧಿಕಾರಿಗೆ ಅಧಿಕಾರ ಹಸ್ತಾಂತರ ಮಾಡಿದರು..

ಇದೇ ವೇಳೆ ಮಾತನಾಡಿದ ನಿಕಟಪೂರ್ವ ಅಧಿಕಾರಿ ರಾಜೇಶ ಬುರ್ಲಿ ಇಲ್ಲಿಯವರೆಗೂ ತಾಲೂಕಿನಲ್ಲಿ ಎಲ್ಲ ಅಧಿಕಾರಿವರ್ಗದವರು ಮತ್ತು ಗುರು ಹಿರಿಯರು ನನಗೆ ಸಹಕಾರಯುತವಾಗಿ ಕಾರ್ಯನಿರ್ವಹಿಸಲು ಸಹಕರಿಸಿದ್ದರಿ.ಇದಕ್ಕಾಗಿ ಎಲ್ಲರಿಗೂ ನಾನು ಚಿರರುಣಿಯಾಗಿದ್ದೆನೆ ಅಲ್ಲದೆ ನಾನು ಸ್ವ ಇಚ್ಛೆಯಿಂದ ವರ್ಗಾವಣೆ ಯಾಗಿದ್ದೆನೆ ವಿನಃ ಯಾರದೇ ಒತ್ತಡಕ್ಕೆ ಅಲ್ಲ ಯಾರು ಕೂಡಾ ತಪ್ಪಾಗಿ ಭಾವಿಸಿ ಕೊಳ್ಳಬಾರದು ಅಲ್ಲದೆ ನನಗೆ ಹೇಗೆ ಸಹಕಾರ ನೀಡಿದ್ದಿರಿ ಅದೇ ರೀತಿಯಲ್ಕೆ ಈಗಿನ ನೂತನ ದಂಡಾಧಿಕಾರಿಗಳಿಗೂ ಸಹಕರಿಸ ಬೇಕೆಂದು ಮನವಿ ಮಾಡಿದರು..
ಬಳಿಕ ನೂತನ ಅಧಿಕಾರ ವಹಿಸಿಕೊಂಡ ಮಾತನಾಡಿದ ರವೀಂದ್ರ ಹಾದಿಮನಿ, ನನಗೆ ಮಾರ್ಗದರ್ಶನ ಮಾಡುದರೊಂದಿಗೆ ಎಲ್ಲ ರೀತಿಯ ಕೇಲಸ ಸಂಬಂಧಿಸಿದಂತ್ತೆ ಸಹಕಾರಯುತ ಜವಾಬ್ದಾರಿಗಳ ಬಗ್ಗೆ ತಹಶಿಲ್ದಾರರ ರಾಜೇಶ ಬುರ್ಲಿಯವರು ಹೇಳಿದ್ದಾರೆ ಅವರ ಮಾರ್ಗದರ್ಶನದೊಂದಿಗೆ ಕಾಗವಾಡ ತಾಲೂಕಿಗೆ ಉತ್ತಮ ಆಡಳಿತ ನೀಡುವುದಾಗಿ ಹೇಳಿದರು..
ನಂತರ ಪ್ರವಾಸಿ ಮಂದಿರದಲ್ಲಿ ಎಲ್ಲ ಅಧಿಕಾರಿಗಳು ಪದಾಧಿಕಾರಿಗಳು ನೂತನ ತಹಶಿಲ್ದಾರರಿಗೆ ಸನ್ಮಾನಿಸಿ ಸ್ವಾಗತಿಸಿದರು..
ಈ ಸಂಧರ್ಭದಲ್ಲಿ ಗ್ರೇಡ್ -2 ತಹಶಿಲ್ದಾರ ರಷ್ಷಿ ಜಕಾತೆ, ಉಪ ತಹಶಿಲ್ದಾರ ಅಣ್ಣಾಸಾಹೇಬ ಕೋರೆ, ಸಿಡಿಪಿಓ ಸಂಜಿವಕುಮಾರ ಸದಲಗಿ ಮತ್ತು ತಾಲೂಕಿನ ಎಲ್ಲ ಗ್ರಾಮ ಆಡಳಿತಧಿಕಾರಿಗಳು ಭಾಗಿಯಾಗಿದ್ದರು…
ವರದಿ : ಪವನಕುಮಾರ ಶರ್ಮಾ
