ಕಾಳಗಿ :ಸಮೀಪದ ಭರತನೂರ ಗ್ರಾಮದಲ್ಲಿ ಸೋಮವಾರ 2024-25ರ ಅನುದಾನಲ್ಲಿ 18 ಲಕ್ಷ ರೂಪಾಯಿಗಳ ವಿವಿಧ ಕಾಮಾಗಾರಿಗಳಿಗೆ ಗುದ್ದಲಿ ಪೂಜೆ ಮಾಡುವ ಮೂಲಕ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು ವಿಧಾನ ಪರಿಷತನ ಮೊದಲ ಅನುದಾನವನ್ನು ಪೂಜ್ಯ ಗುರುನಂಜೇಶ್ವರ ನೇತೃತ್ವದಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡುತಿದ್ದು ನನ್ನಗೆ ಸಂತಸ ತಂದಿದೆ. ಈ ಕಾಮಗಾರಿ ಕೆಲಸವನ್ನು ಆದಷ್ಟು ಬೇಗ ಮುಗಿಸಿ ಮತಷ್ಟು ಅನುದಾನ ತಂದು ತಾಲ್ಲೂಕಿನ ಅಭಿವೃದ್ಧಿಗೆ ಶ್ರಮಿಸುತ್ತೆನೆ ಎಂದು ತಿಳಿಸಿದರು ಈ ಸಂದರ್ಭದಲ್ಲಿ ಭರತನೂರ ಚಿಕ್ಕ ಗುರುನಂಜೇಶ್ವರ ಶ್ರೀಗಳು,ಮಾಜಿ ಜಿಲ್ಲಾ ಪಂಚಾಯತ ಸದಸ್ಯ ರಾಮಲಿಂಗ ರೆಡ್ಡಿ ದೇಶಮುಖ ,ಕೆಆರ್ ಐ ಡಿ ಎಲ್ ಎಇಇ ಅರುಣಕುಮಾರ ಬಿರಾದಾರ,ಕಾಂಗ್ರೆಸ್ ನಗರ ಘಟಕ ಅಧ್ಯಕ್ಷ ವೇದಪ್ರಕಾಶ ಮೊಟಗಿ,ಮಾಜಿ ಗ್ರಾಮ ಪಂಚಾಯತಿ ಅಧ್ಯಕ್ಷರಾದ ರಾಘವೇಂದ್ರ ಗುತ್ತೆದಾರ, ಶಿವಶರಣಪ್ಪ ಕಮಲಾಪುರ, ವಿಶ್ವನಾಥ ವನಮಾಲಿ,ಸಂತೋಷ ನರನಾಳ,ಸಂತೋಷ ಪತಂಗೆ ಅವಿನಾಶ್ ಗುತ್ತೆದಾರ ಇತರರು ಇದ್ದರೂ