ಹುಣಸೂರು ತಾಲೂಕಿನ ಕಸಬಾ ಹೋಬಳಿ ಹಳೆಪುರ ಎಂಬ ಗ್ರಾಮದಲ್ಲಿ ಹಳೆ ಗ್ರಾಮಠಾಣ ಜಾಗವನ್ನು ಖಾಸಗಿ ವ್ಯಕ್ತಿಗಳು ಒತ್ತುವರಿ ಮಾಡಿಕೊಂಡಿದ್ದು ಇದನ್ನು ತೆರವುಗೊಳಿಸುವಲ್ಲಿ ಟಿವಿ 23 ಕನ್ನಡ ಸುದ್ದಿ ಮಾಧ್ಯಮ ತಮ್ಮ ಪತ್ರದೊಂದಿಗೆ 3/02/25ರಂದು ಗಾಗೇನಹಳ್ಳಿ ಗ್ರಾಮ ಪಂಚಾಯಿತಿಗೆ ಮನವಿ ಮಾಡಿತ್ತು ಅರ್ಜಿ ನೀಡಿ 8 ತಿಂಗಳಾದರೂ ಯಾವುದೇ ಕ್ರಮ ತೆರಗಿಸದೆ ಅಧಿಕಾರಿಗಳು ತಾರತಮ್ಯ ಒಟ್ಟುತ್ತಿರುವುದು ಇದೆಂಥ ವಿಪರ್ಯಾಸ ಬಡ ಕುಟುಂಬಗಳಿಗೆ ಸೂರು ಕಟ್ಟಿಕೊಳ್ಳಲು ನಿವೇಶನಗಳಿಲ್ಲದೆ ಪರದಾಡುತ್ತಿರುವ ಹಿನ್ನಲೆಯ ಕುರಿತು ಬಡವರ ಕಣ್ಣೀರು ಅಧಿಕಾರಿಗಳಿಗೆ ಕೇಳಿಸದಂತಾಗಿದೆ ಸಾರ್ವಜನಿಕರ ಕೆಲಸ ಮಾಡುತ್ತೇವೆ ಎಂದು ಗ್ರಾಮಪಂಚಾಯಿತಿಗೆ ಬರುವ ಸರ್ಕಾರಿ ಅಭಿವೃದ್ಧಿ ಅಧಿಕಾರಿಗಳು ಮೌನವಾಗಿ ಕುಳಿತುಕೊಂಡು ತಾರತಮ್ಯ ಓಡು ತ್ತಿರುವುದು ಯಾಕೆ .? ಸದ್ಯ ಈಗಲಾದರೂ ಈ ಸುದ್ದಿಯ ಪ್ರಸಾರದ ಹಿನ್ನೆಲೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಯಾವ ರೀತಿ ಕೆಲಸ ಮಾಡುತ್ತಾರೋ ಎಂಬುದನ್ನು ಕಾದುನೋಡಬೇಕಾಗಿದೆ
