ರಾಯಬಾಗ: ನೀರಿನ ಅಭಾವ ಆಗದಂತೆ ಮುನ್ನೆಚ್ಚರಿಕೆ ಕ್ರಮವಾಗಿ ತಾಲೂಕಿನ ಎಲ್ಲ ಕಾಲುವೆಗಳಿಗೆ ಹಿರಣ್ಯಕೇಶಿ ನದಿ ನೀರು ಹರಿಬಿಡಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಆಶಯ- ಆಪ್ತ ಸಹಾಯಕ ಶಿವನಗೌಡ ಪಾಟೀಲ. ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ರಾಯಬಾಗ ಕ್ಷೇತ್ರಕ್ಕೆ ನೀರು ಕಡಿಮೆ ಬೀಳಬಾರದು ಎಂದು ಘಟಪ್ರಭಾದಿಂದ 1200 ಕ್ಯೂಸೆಕ್ ನೀರು ರಾಯಬಾಗ ಮತಕ್ಷೇತ್ರದ ಎಲ್ಲ ಕಾಲುವೆಗಳಿಗೆ ನೀರು ಹರಿಸಲಾಗಿದೆ. ಅಲ್ಲದೇ ರಾಯಬಾಗ ಪಟ್ಟಣದ ಕುಡಿಯುವ ನೀರಿನ ಮೂಲವಾದ ಹುಲ್ಲ್ಯಾಳನ ಕೆರೆಯನ್ನು ಸಹಿತ ಭರ್ತಿ ಮಾಡಲಾಗಿದೆ ಎಂದರು. ತಾಲೂಕಿನ ಅಳಗವಾಡಿ, ನಿಡಗುಂದಿ, ರಾಯಬಾಗ, ಮೊರಬ ಬೆಕ್ಕೇರಿ, ಕಂಚಕರವಾಡಿ, ದಿಗ್ಗೇವಾಡಿ, ಬಾವನಸೌಂದತ್ತಿ ಹಾಗೂ ಚಿಕ್ಕೋಡಿ ಸಿಬಿಸಿ ಕಾಲುವೆಗು ಅರ್ಧ ಟಿಎಂ ನೀರು ಬಿಡಲಾಗಿದೆ. ಈ ನೀರಿನಿಂದ ರೈತರ ಬೋರವೆಲ್ ಗಳ ಅಂತರ್ಜಲಮಟ್ಟ ಹೆಚ್ಚುವುದರ ಜೊತೆಗೆ ನೀರಿನ ಸಮಸ್ಯೆ ಉಂಟಾಗುವುದಿಲ್ಲ , ರಾಯಬಾಗ ಕ್ಷೇತ್ರ ಸಂಪೂರ್ಣ ನೀರವಾರಿಗೊಳಿಸಲು ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಅವರು ಪಣ ತೊಟ್ಟಿದ್ದಾರೆ ಎಂದರು.

ರಾಯಬಾಗ ಕ್ಷೇತ್ರಕ್ಕೆ ನೀರು ಹರಿಸುತ್ತಿರುವುದರಿಂದ ಕ್ಷೇತ್ರದ ಜನರೂ ಸಹಿತ ಸಚಿವರಿಗೆ ಅಭಿನಂದಿಸಿ” ಈ ಭಾಗದಲ್ಲಿನ ಜನರಿಗೆ ನೀರು ಕೊರತೆ ಆಗಬಾರದು ಎಂದು ಸಚಿವರ ಆಶಯದಂತೆ ರಾಯಬಾಗ ಕ್ಷೇತ್ರದಲ್ಲಿ ಕಾಲುವೆಗೆ ನೀರು ಹರಿಸಲಾಗಿದೆ.-ಎಚ್. ಎಲ್. ಪೂಜೇರಿ, ಎಇಇ ರಾಯಬಾಗ,ಜೆ.ಎಲ್.ಬಿ.ಸಿ
ಶುದ್ದಿ ವರದಿಗಾರ: ಪವನ್ ಕುಮಾರ ಶರ್ಮಾ
