ನ್ಯೂಯಾರ್ಕ್: ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಪಾಲ್ಗೊಂಡಿರುವ ಭಾರತ ತಂಡ ಅಲ್ಲಿನ ಆಹಾರ ಮತ್ತು ಮೂಲಭೂತ ಸೌಕರ್ಯಗಳ ಕುರಿತು ಚಕಾರವೆತ್ತಿದೆ.
ಹೌದು.. ಕಳೆದ ಮೂರು ದಿನಗಳಿಂದ ಟೀಮ್ ಇಂಡಿಯಾದ ಆಟಗಾರರು ನ್ಯೂಯಾರ್ಕ್‌ನಲ್ಲಿ ಅಭ್ಯಾಸ ನಡೆಸುತ್ತಿದ್ದು, ಆಟಗಾರರು ಇಂದು ಬ್ಯಾಟಿಂಗ್ ಮತ್ತು ಬೌಲಿಂಗ್ ಅಭ್ಯಾಸ ಕೂಡ ಆರಂಭಿಸಿದ್ದಾರೆ. ಆದರೆ ಇಲ್ಲಿ ಅಭ್ಯಾಸ ನಡೆಸಲು ಉನ್ನತ ಸೌಲಭ್ಯಗಳಿಲ್ಲ ಎಂದು ನಾಯಕ ರೋಹಿತ್ ಶರ್ಮಾ ಮತ್ತು ಕೋಚ್ ರಾಹುಲ್ ದ್ರಾವಿಡ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದು ವರದಿಯಾಗಿದೆ.
ಅಲ್ಲದೆ ಈ ಸಂಬಂಧ ತಂಡದ ನಾಯಕ ರೋಹಿತ್ ಶರ್ಮ ಮತ್ತು ಕೋಚ್ ರಾಹುಲ್ ದ್ರಾವಿಡ್ ಬಿಸಿಸಿಐಗೆ ದೂರು ಸಲ್ಲಿಸಿದ್ದಾರೆ ಎನ್ನಲಾಗಿದೆ.
ಟೀಂ ಇಂಡಿಯಾ ಸತತ ಅಭ್ಯಾಸ
ಕಳೆದ ಮೂರು ದಿನಗಳಿಂದ ಟೀಮ್ ಇಂಡಿಯಾದ ಆಟಗಾರರು ನ್ಯೂಯಾರ್ಕ್‌ನಲ್ಲಿ ಅಭ್ಯಾಸ ನಡೆಸುತ್ತಿದ್ದು, ಆಟಗಾರರು ಇಂದು ಬ್ಯಾಟಿಂಗ್ ಮತ್ತು ಬೌಲಿಂಗ್ ಅಭ್ಯಾಸ ಕೂಡ ಆರಂಭಿಸಿದ್ದಾರೆ. ಅಮೆರಿಕದ ವಾತಾವರಣಕ್ಕೆ ಹೊಂದಿಕೊಳ್ಳುವ ಸಲುವಾಗಿ ಬುಧವಾರ ಮತ್ತು ಗುರುವಾರ ಆಟಗಾರರು ಕೇವಲ ಜಾಗಿಂಗ್ ನಡೆಸಿ, ಫುಟ್ಬಾಲ್ ಆಡಿದ್ದರು. ಆದರೆ ಇಲ್ಲಿ ಅಭ್ಯಾಸ ನಡೆಸಲು ಉನ್ನತ ಸೌಲಭ್ಯಗಳಿಲ್ಲ ಎಂದು ನಾಯಕ ರೋಹಿತ್ ಮತ್ತು ಕೋಚ್ ರಾಹುಲ್ ದ್ರಾವಿಡ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದು ವರದಿಯಾಗಿದೆ.
ವರದಿಯ ಪ್ರಕಾರ ಭಾರತ ತಂಡದ ಆಟಗಾರಿಗೆ ಗುಣಮಟ್ಟದ ಆಹಾರ ಸಿಗುತ್ತಿಲ್ಲ. ಈ ವಿಚಾರಗಳನ್ನು ಬಿಸಿಸಿಐ ಆಯೋಜಕ ಐಸಿಸಿ ಗಮನಕ್ಕೆ ತಂದಿದೆ ಎಂದು ವರದಿಯಾಗಿದೆ.
ಭಾರತ ನಾಳೆ(ಶನಿವಾರ) ಬಾಂಗ್ಲಾದೇಶ ವಿರುದ್ಧ ಏಕೈಕ ಅಭ್ಯಾಸ ಪಂದ್ಯವನ್ನಾಡಲಿದೆ. ವ್ಯಾಪಕ ಪ್ರಯಾಣ ಮತ್ತು ಐಪಿಎಲ್ನಿಂದ ದಣಿದಿರುವ ಕಾರಣ ಕೇವಲ ಒಂದು ಅಭ್ಯಾಸ ಪಂದ್ಯಕ್ಕೆ ಮೊರೆ ಹೋಗಿದೆ.
ಅಂದಹಾಗೆ ಭಾರತ ತನ್ನ ಮೊದಲ ಪಂದ್ಯವನ್ನು ಜೂನ್ 5 ರಂದು ಐರ್ಲೆಂಡ್ ವಿರುದ್ಧ ಆಡಲಿದೆ. ಭಾರತವು ತನ್ನ ಗುಂಪು ಹಂತದ ಎಲ್ಲಾ ಪಂದ್ಯಗಳನ್ನು ಅಮೆರಿಕದಲ್ಲೇ ಆಡಲಿದೆ. ಲೀಗ್ ಮುಕ್ತಾಯದ ಬಳಿಕ ಮುಂದಿನ ಹಂತಕ್ಕೆ ಅರ್ಹತೆ ಪಡೆದರೆ, ಸೂಪರ್ 8 ಪಂದ್ಯಗಳನ್ನು ಸಹ ಇಲ್ಲೇ ಆಡಲಿದೆ. ಸಾಂಪ್ರದಾಯಿಕ ಬದ್ಧ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ ನಡುವಣ ಪಂದ್ಯ ಜೂನ್ 9 ರಂದು ನ್ಯೂಯಾರ್ಕ್‌ನಲ್ಲಿ ನಡೆಯಲ್ಲಿದೆ.