ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮ.

ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮ.

Share

ಜೇಸೀಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮ.
ಜೇಸೀಸ್ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ಶಾರದಾ ಮಾತೆಯ ಮೆರವಣಿಗೆಯೊಂದಿಗೆ ಮಕ್ಕಳಿಗೆ ಆರತಿ ಬೆಳಗಿಸಿ ತಿಲಕವಿಟ್ಟು ಬ್ಯಾಂಡ್ ಸೆಟ್ ನೊಂದಿಗೆ ಸಂಭ್ರಮದಿಂದ ಸ್ವಾಗತಿಸಲಾಯಿತು.ಕಾರ್ಯಕ್ರಮದ ಉದ್ಘಾಟನೆಯನ್ನು ವಿಶೇಷ ಚೇತನಾ ಶಾಲೆಯ ಕರೆಸ್ಪಾಂಡೆಂಟ್ ಆಗಿರುವ ಶ್ರೀಯುತ ರಘುನಾಥ ಶೆಟ್ಟಿ ಇವರು ನೆರವೇರಿಸಿದರು.ಇವರು ಮಾತನಾಡಿದ ಶೈಕ್ಷಣಿಕ ವರ್ಷದ ಆರಂಭೋತ್ಸವವನ್ನು ಬಹಳ ಹುಮ್ಮಸ್ಸಿನಿಂದ ಮಾಡಿದ್ದೀರಿ. ಈ ಕಾರ್ಯಕ್ರಮದಲ್ಲಿ ಭಾಗವಹಿಸುವ ಸೌಭಾಗ್ಯ ಒದಗಿದೆ. ಕಾರ್ಕಳ ಇತಿಹಾಸದಲ್ಲಿ ಇದು ಪ್ರಥಮವಾಗಿ ಆರಂಭವಾದ ಶಾಲೆ, ಇಲ್ಲಿ ಒಳ್ಳೆಯ ರೀತಿಯ ಶಿಕ್ಷಣವಿದೆ. ಈ ಶಾಲೆ ಇನ್ನಷ್ಟು ಉನ್ನತ ಸ್ಥಾನಕ್ಕೆರಲಿ ಎಂದರು.ಶಿಕ್ಷಕ- ರಕ್ಷಕ ಸಂಘದ ಅಧ್ಯಕ್ಷರಾದ ಶ್ರೀಮತಿ ಶಾಂತ ಹೆಗ್ಡೆ ಮಾತನಾಡುತ್ತಾ ಸರಕಾರದ ನಿಯಮಗಳು ಈ ಶಾಲೆಯನ್ನು ನೋಡಿ ಅನುಸರಿಸಿದಂತಿದೆ ಈ ಶಾಲೆ ಇನ್ನಷ್ಟು ಬೆಳಗಲಿ ಎಂದರು.
ನಿವೃತ್ತ ಶಿಕ್ಷಕರಾದ ಶ್ರೀ ಮಂಜುನಾಥಶೆಟ್ಟಿ ಯವರು ಮಾತನಾಡುತ್ತಾ,ಎಲ್ಲರೂ ಸಡಗರ ಸಂಭ್ರಮದಿಂದ ಇದ್ದೀರಿ.ಈ ದಿನದ ಶುಭಾಶಯಗಳು.ಇಲ್ಲಿ ಉತ್ತಮ ಸಂಸ್ಕಾರಯುತವಾದ ಶಿಕ್ಷಣವಿದೆ.ಇದು ನಿಮ್ಮ ಮುಂದಿನ ಜೀವನದಲ್ಲಿ ಉತ್ತಮ ಪರಿಣಾಮ ಬೀರಲಿ ಎಂದರು.ಜೇಸಿಚಿತ್ತರಂಜನ್ ಶೆಟ್ಟಿಯವರು ಮಾತನಾಡುತ್ತಾ, ಈ ವರ್ಷ ವಿದ್ಯಾರ್ಥಿಗಳು ಕೊಟ್ಟ ಟಾರ್ಗೆಟ್ ಮುಂದಿನ ವರ್ಷದ ವಿದ್ಯಾರ್ಥಿಗಳಿಗೆ ಚಾಲೆಂಜ್ ಆಗಿದೆ. ಧೈರ್ಯದಿಂದ ಗುರಿ ಸಾಧನೆಗೆ ಪ್ರಯತ್ನ ಪಟ್ಟರೆ ಎಲ್ಲರೂ ಯಶಸ್ವಿಯಾಗಲು ಸಾಧ್ಯ ಎಂದರು.
ಕಾರ್ಯಕ್ರಮದಲ್ಲಿ ವಿಶೇಷ ಚೇತನಾ ಶಾಲೆಯ ಕರೆಸ್ಪಾಂಡೆಂಟ್ ರಘುನಾಥ ಶೆಟ್ಟಿಯವರು, ಮಂಜುನಾಥ ಶೆಟ್ಟಿಯವರು, ಶಾಲಾ ಅಧ್ಯಕ್ಷರಾದ ಜೆಸಿ ಚಿತ್ತರಂಜನ್ ಶೆಟ್ಟಿಯವರು, ಶ್ರೀಮತಿ ಶಾಂತ ಹೆಗ್ಡೆ, ಜೇಸಿ ಜಯಕುಮಾರ್, ಮಂಜುನಾಥ್ಶೆಟ್ಟಿ, ಶಂಕರ್ ನಾರಾಯಣ್ ಭಟ್,ಶಂಕರನ್ ಶಾಲಾ ಮುಖ್ಯೋಪಾಧ್ಯಾಯನಿ ಶ್ರೀಮತಿ ಸುರೇಖಾ ರಾಜ್ ರವರು ಉಪಸ್ಥಿತರಿದ್ದರು.
ಶ್ರೀಮತಿ ಸುರೇಖಾ ರಾಜ್ ರವರು ಸ್ವಾಗತಿಸಿದರು,ಶ್ರೀಮತಿ ರಕ್ಷಾ ಶೆಟ್ಟಿ ವಂದಿಸಿದರು,ಶ್ರೀಮತಿ ಪೂನಂ ಕಾಮತ್ ರವರು ನಿರೂಪಿಸಿದರು.


Share