ಆಲಮೇಲ 30 ದೈಹಿಕ ಆರೋಗ್ಯಕ್ಕೆ ಯೋಗ, ಮಾನಸಿಕ ಆರೋಗ್ಯಕ್ಕೆ ಭಜನೆ ಮತ್ತು ಆಧ್ಯಾತ್ಮಿಕ ಪ್ರವಚನ, ಇವುಗಳಿಂದ ಆರೋಗ್ಯಯುತ ದೀರ್ಘಾಯುಷ್ಯ ಕಾಪಾಡಿಕೊಳ್ಳಲು ಸಾಧ್ಯ ಎಂದು ಯೋಗೋತ್ಸವ ಸಮಿತಿಯ ಮುಖ್ಯಸ್ಥರಾದ ಡಾ. ಶ್ರೀಶೈಲ್ ಪಾಟೀಲ್ ಹೇಳಿದರು. ಆಲಮೇಲ ಪಟ್ಟಣದ ಅಳ್ಳೊಳ್ಳಿ ಹಿರೇಮಠದಲ್ಲಿ ಮಹಿಳಾ ಶಿಬಿರಾರ್ಥಿಗಳ ಪೂರ್ವಭಾವಿ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತ ಜೂನ್ 2 ರಿಂದ 21 ದಿನಗಳ ಪರ್ಯಂತರ ಜರುಗಲಿರುವ ಉಚಿತ ಯೋಗ ಶಿಬಿರ ಹಾಗೂ ಭಜನೆ ಮತ್ತು ಆಧ್ಯಾತ್ಮಿಕ ಪ್ರವಚನವನ್ನು ಹಿಮಾಲಯದಲ್ಲಿ ಯೋಗ ಸಾಧನೆ ಮಾಡಿರುವ ಯೋಗ ಗುರು ಪರಮಪೂಜ್ಯ ನಿರಂಜನ ಶ್ರೀಗಳು ನಡೆಸಿಕೊಡಲಿದ್ದು ತಾವೆಲ್ಲರೂ ಇದರ ಸದುಪಯೋಗ ಪಡೆದು ಕೊಳ್ಳಬೇಕೆಂದು ವಿನಂತಿಸಿಕೊಂಡರು. ಸಭೆಯಲ್ಲಿ ಶ್ರೀಶೈಲಯ್ಯ ಮಹಾಸ್ವಾಮಿಗಳು ಸಾನಿಧ್ಯ ವಹಿಸಿದ್ದರು ಲಕ್ಷ್ಮಿ ಗುಣಾರಿ ಕಾವೇರಿ ಅವರಾದಿ ನಿರ್ಮಲ ಭಾವಿಕಟ್ಟಿ ನೀಲೇಶಾ.ಕಾಂಚನ ಘಟಕದೊಂಡ್ ಸುರೇಖಾ ಸಾಲಕ್ಕಿ ಗಂಗೂಬಾಯಿ ಅಮಲ್ಜೇರಿ ಅಶ್ವಿನಿ ಹೂಗಾರ್ ವರದಾ ಉಪ್ಪಿನ ಶ್ರೀಶೈಲ ಮಠಪತಿ ಸಿದ್ದಲಿಂಗ ಗುಂದಗಿ ಸುನಿಲ್ ನಾರಾಯಣಕರ್ ಹಾಗೂ ಶಿವಶರಣ ಗುಂದಗಿ ಉಪಸ್ಥಿತರಿದ್ದರು.