ಕಲ್ಬುರ್ಗಿ ಜಿಲ್ಲೆಯಲ್ಲಿ ಹೈದರಾಬಾದ್ ಕರ್ನಾಟಕ ಯುವ ಕಲಾವಿದರ ಹಾಗೂ ಸಾಂಸ್ಕೃತಿಕ ನೃತ್ಯ ಸಂಘ ಕಲ್ಬುರ್ಗಿ (ರಿ) ವತಿಯಿಂದ ಹಾಗೂ ಕಲ್ಬುರ್ಗಿ ನಗರದ ಜನಪ್ರಿಯ ಶಾಸಕ ಬಸವರಾಜ್ ಮತ್ತಿಮೂಡ ಗ್ರಾಮೀಣ ಮತಕ್ಷೇತ್ರ ಕಲ್ಬುರ್ಗಿ ಅವರ ಜೀವನದಾರಿತ ಕುರಿತು ಧ್ವನಿಸುರುಳಿ ಬಿಡುಗಡೆ ಸಮಾರಂಭ ಹಮ್ಮಿಕೊಳ್ಳಲಾಯಿತು ಹಾಗೂ ಐತಿಹಾಸಿಕವಾಗಿ ಕಲ್ಬುರ್ಗಿ ನಗರದಲ್ಲಿ ಸಂಘದ ವತಿಯಿಂದ ಎಂಟನೇ ವಾರ್ಷಿಕೋತ್ಸವದ ಸಮಾರಂಭದ ಅಂಗವಾಗಿ ನಾಡು ನುಡಿ ಜಲ ನೆಲ ಗೋಸ್ಕರ ಸಾಮಾಜಿಕ ಕ್ಷೇತ್ರದಲ್ಲಿ ಹೋರಾಟ ಮಾಡಿದವರು ಹಾಗೂ ಸೇವೆ ಸಲ್ಲಿಸುವವರನ್ನು ಗುರುತಿಸಿ ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು ಅದೇ ರೀತಿಯಾಗಿ ಜೇವರ್ಗಿ ತಾಲೂಕಿನ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ರೈತ ಸೇನೆಯ ತಾಲೂಕ ಅಧ್ಯಕ್ಷರಾದ ಸಿದ್ದಲಿಂಗ ಎಚ್ ಪೂಜಾರಿ ಹಾಲಗಡ್ಲಾ ಅವರಿಗೆ ಈ ಸಂದರ್ಭದಲ್ಲಿ ರೈತ ರತ್ನ ಪ್ರಶಸ್ತಿ ನೀಡಿ ಗೌರವ ಪೂರ್ವಕವಾಗಿ ಸನ್ಮಾನಿಸಲಾಯಿತು ಎಂದು ಹೈದರಾಬಾದ್ ಕರ್ನಾಟಕ ಯುವ ಕಲಾವಿದರ ಹಾಗೂ ಸಾಂಸ್ಕೃತಿಕ ನೃತ್ಯ ಸಂಘದ(ರಿ) ಸಂಸ್ಥಾಪಕ ಶ್ರೀ ಗುರು ಬಂಡಿ ಅವರು ಪತ್ರಿಕಾ ಪ್ರಕಟಣೆಗೆ ತಿಳಿಸಿದರು
ವರದಿ ಜೆಟ್ಟೆಪ್ಪ ಎಸ್ ಪೂಜಾರಿ