ಶ್ರೀರಾಮ್ ಫೈನಾನ್ಸ್ ಕುಮಟಾ ಶಾಖೆಯಿಂದ ವಂಚನೆ ಆರೋಪ ಕೋರ್ಟಿಗೆ ಹೋದ ಗ್ರಾಹಕ

ಶ್ರೀರಾಮ್ ಫೈನಾನ್ಸ್ ಕುಮಟಾ ಶಾಖೆಯಿಂದ ವಂಚನೆ ಆರೋಪ ಕೋರ್ಟಿಗೆ ಹೋದ ಗ್ರಾಹಕ

Share

ಕುಮಟಾ :-ಖಾಸಗಿ ಬ್ಯಾಂಕೊಂದರಿಂದ ವಂಚನೆಗೊಳಗಾದ ಗ್ರಾಹಕನೊಬ್ಬ ಕೋರ್ಟ್ ಮೆಟ್ಟಲೇರಿದ್ದು ಕೋರ್ಟ್ ನಿರ್ದೇಶನದ ಮೇರೆಗೆ ಪ್ರಕರಣ ದಾಖಸಿಕೊಂಡ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಕುಮಟಾ ಪಟ್ಟಣದಲ್ಲಿ ಶಾಖೆ ಹೊಂದಿರುವ ಶ್ರೀರಾಮ್ ಫೈನಾನ್ಸ್ ಸಂಸ್ಥೆಯ ವಿರುದ್ದ ವಿನೋದ ದೇಶಭಂಡಾರಿ ಎನ್ನುವವರು ಕುಮಟಾ ಜೆಎಂಎಫಸಿ ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಿಸಿದ್ದಾರೆ. ಫೈನಾನ್ಸ್ ಅಧಿಕಾರಿಗಳು ಮಾಡಿದ ತಪ್ಪಿಗೆ ನಾನೇನೇಕೆ ತಲೆಕೊಡಬೇಕೆಂದು ಪ್ರಶ್ನೆಸುವ ವಿನೋದ ಈ ಸಂಬಂಧ ಕುಮಟಾ ಜೆಎಂಎಫ್ ಸಿ ಕೋರ್ಟನಲ್ಲಿ ಖಾಸಗಿ ದೂರು ದಾಖಲಿಸಿದ್ದೇನೆ. ನನ್ನ ಬಳಿಯಿರುವ ದಾಖಲೆಗಳನ್ನು ಪರಿಶೀಲಿಸಿ ಕೋರ್ಟ್ ಈ ಪ್ರಕರಣ ಸಮಗ್ರ ತನಿಖೆ ನಡೆಸಿ ಚಾರ್ಜ್ ಶೀಟ್ ಸಲ್ಲಿಸುವಂತೆ ಕುಮಟಾ ಪೊಲೀಸ್ ಠಾಣೆಯ ಅಧಿಕಾರಿಗಳಿಗೆ ಆದೇಶ ಮಾಡಿದೆ. ಪೊಲೀಸ್ ಅಧಿಕಾರಿಗಳು ಕೋರ್ಟ್ ಗೆ ಶೀಘ್ರ ತನಿಖಾ ವರದಿ ಸಲ್ಲಿಸಬೇಕು ಎಂದು ಒತ್ತಾಯಿಸಿದ್ದಾರೆ. ಈ ಬಗ್ಗೆ ವಿನೋದ್ ದೇಶಭಂಡಾರಿ ಎಸ್ಪಿ ಅವರಿಗೂ ಕೆಲವು ದಿನಗಳ ಹಿಂದೆ ದೂರು ಸಲ್ಲಿಸಿದ್ದಾರೆ.ಈ ಬಗ್ಗೆ ಶ್ರೀರಾಮ್ ಫೈನಾನ್ಸ್ ಅಸಿಸ್ಟೆಂಟ್ ಮ್ಯಾನೇಜರ್ ವಿನಾಯಕ ಮತ್ತು ಮ್ಯಾನೇಜರ ರ್ರಾಘವೇಂದ್ರ ಅವರನ್ನು ಸಂಪರ್ಕಿಸಿದಾಗ ವಿನೋದ್ ಎನ್ನುವ ವ್ಯಕ್ತಿ ನಮ್ಮಲ್ಲಿ ಓಮಿನಿ ವಾಹನ ಮೇಲೆ ಸಾಲ ಪಡೆದಿದ್ದರು. ಸಾಲ ಮರುಪಾವತಿಯಾಗದ ಕಾರಣ ವಾಹನವನ್ನು ಸಿಜ್ ಮಾಡಿ ನಮ್ಮ ಕೇಂದ್ರ ಕಚೇರಿಯ ಮೂಲಕ ಹರಾಜ್ ಮಾಡಲಾಗಿದೆ. ಅದೇ ವಾಹನದ ಮೇಲೆ ಸೋಮಶೇಖರ್ ಎನ್ನುವ ವ್ಯಕ್ತಿಗೆ ಸಾಲ ನೀಡಿ ಸಾಲ ಮರುಪಾವತಿ ಮಾಡದ ಕಾರಣ ಮತ್ತೆ ಅದೇ ವಾಹನವನ್ನು ಸೀಜ ಮಾಡಿ ಹರಾಜ್ ಮಾಡಲಾಗಿದೆ. ಫಾರಂ ನಂಬರ್ 29,30, ಮತ್ತು 35 ಅಲ್ಲಿ ವಿನೋದ್ ನೀಡಿದ ಸಹಿಯ ಆಧಾರದ ಮೇಲೆ ಈ ಹರಾಜ್ ಮಾಡಿದ್ದೇವೆ. ಎನ್ನುವುದು ನನಗೆ ತಿಳಿದ ವಿಷಯವಾಗಿದೆ. ಅಲ್ಲದೇ ಈ ಸಾಲದ ಪ್ರಕ್ರಿಯೆ ನಡೆದ ಅವಧಿಯಲ್ಲಿ ನಾನು ಇರಲಿಲ್ಲ ಎಂದು ತಿಳಿಸಿದ್ದಾರೆ.


Share