ಅತಿಥಿ ಶಿಕ್ಷಕರ ಸಮಸ್ಯೆಗೆ ಸ್ಪಂದಿಸುವ ಯೋಗ್ಯ ಅಭ್ಯರ್ಥಿಗೆ ಮತ ನೀಡಿ-ಜೇವರಗಿ ಮತ್ತು ಯಡ್ರಾಮಿ ತಾಲೂಕಿನ ಅತಿಥಿ ಶಿಕ್ಷಕರ ಸಂಘದ ಮನವಿ.

ಅತಿಥಿ ಶಿಕ್ಷಕರ ಸಮಸ್ಯೆಗೆ ಸ್ಪಂದಿಸುವ ಯೋಗ್ಯ ಅಭ್ಯರ್ಥಿಗೆ ಮತ ನೀಡಿ-ಜೇವರಗಿ ಮತ್ತು ಯಡ್ರಾಮಿ ತಾಲೂಕಿನ ಅತಿಥಿ ಶಿಕ್ಷಕರ ಸಂಘದ ಮನವಿ.

Share

ಈಶಾನ್ಯ ಕರ್ನಾಟಕ ಪದವೀಧರ ಕ್ಷೇತ್ರದ ಚುನಾವಣೆ ಜೂನ್ 3ರಂದು ನಡೆಯಲಿದೆ,ಹೀಗಾಗಿ ಜೇವರ್ಗಿ ಮತ್ತು ಯಡ್ರಾಮಿ ತಾಲ್ಲೂಕಿನ ಸಮಸ್ತ ಅತಿಥಿ ಶಿಕ್ಷಕರು ನಮ್ಮ ಸಮಸ್ಯೆಗೆ ಸೂಕ್ತ ಪರಿಹಾರ ನೀಡುವ ಅಭ್ಯರ್ಥಿಯನ್ನು ಬೆಂಬಲಿಸೋಣ ಎಂದು ನಿರ್ಣಯ ಮಂಡನೆಗೆ ಸರ್ವಾನುಮತದಿಂದ ಒಪ್ಪಿಗೆ ಸೂಚಿಸಲಾಗಿದೆ ನಮ್ಮ ಸಂಘದ ವತಿಯಿಂದ ಸುಮಾರು 500ಕ್ಕೂ ಹೆಚ್ಚು ಪದವೀಧರ ಮತದಾರರ ಪಟ್ಟಿಯಲ್ಲಿ ಸೇರ್ಪಡೆ ಮಾಡಲಾಗಿದೆ ಆದರೂ ಈವರೆಗೂ ಯಾವ ಅಭ್ಯರ್ಥಿಗಳು ನಮ್ಮ ಸಂಘದ ಬೇಡಿಕೆಗಳನ್ನು ಈಡೇರಿಸಲು ಮುಂದೆ ಬಂದಿಲ್ಲ ರವಿವಾರ ಸಂಜೆಯವರೆಗೆ ನಮ್ಮ ಸಂಘದ ಬೇಡಿಕೆಯನ್ನು ಈಡೇರಿಸುವ ಅಭ್ಯರ್ಥಿಗೆ ಮತದಾನ ಮಾಡುತ್ತೇವೆ.
ವರ್ಷದಲ್ಲಿ ಕೇವಲ 10 ತಿಂಗಳ ಮಾತ್ರ ನಮ್ಮನ್ನು ದುಡಿಸಿಕೊಂಡು 2 ತಿಂಗಳು ಕೂಲಿ ನಾಲಿ ಮಾಡಿ ಬದುಕು ಸಾಗಿಸುವಂತಾಗಿದೆ”
ವಿದ್ಯಾರ್ಥಿಗಳ ಭವಿಷ್ಯರೂಪಿಸುವ ಶಿಕ್ಷಕರಿಗೆ ಭವಿಷ್ಯದ ಭದ್ರತೆ ಇಲ್ಲದಂತಾಗಿದೆ”
ಸಂಬಳಕ್ಕಾಗಿ ದುಡಿಯದೇ ಮಕ್ಕಳ ಭವಿಷ್ಯಕ್ಕಾಗಿ ನಮ್ಮ ಸೇವೆ ಮೀಸಲಾಗಿಸಿದೇವೆ”
ಅತಿಥಿ ಶಿಕ್ಷಕರ ಸಂಘದ ನವರತ್ನಗಳ ಬೇಡಿಕೆಗಳು
1)ಸೇವಾ ಭದ್ರತೆ
2)ಮೇರಿಟ್ ಪದ್ಧತಿ ಕೈ ಬಿಡಬೇಕು
3)ಮೊದಲು ಸೇವೆ ಸಲ್ಲಿಸಿದವರಿಗೆ ಮೊದಲ ಆದ್ಯತೆ*
4) 15 CL ರಜೆ ನಮಗೂ ಅನ್ವಯವಾಗುವಂತಾಗಬೇಕು
5)ಪ್ರತಿವರ್ಷಕ್ಕೆ 5 ಕೃಪಾಂಕ ನೀಡಬೇಕು”
6)ಪ್ರತಿ ತಿಂಗಳು ಸಂಬಳ ಜಮೆ ಮಾಡಬೇಕು
7)ವರ್ಷದ 12 ತಿಂಗಳ ಸಂಬಳ ಹಾಕುವಂತಾಗಬೇಕು
8)ಸೇವೆ ಸಲ್ಲಿದವರಿಗೆ ಪ್ರಮಾಣ ಪತ್ರ ನೀಡಬೇಕು
9)ಪ್ರತ್ಯೇಕ ಹಾಜರಾತಿ ಕೈಬಿಟ್ಟು ಶಿಕ್ಷಕರ ಹಾಜರಾತಿ ಪುಸ್ತಕದಲ್ಲಿ ಸಹಿ ಮಾಡುವಂತಾಗಬೇಕು
ತಾಲೂಕ ಅಧ್ಯಕ್ಷರು
ರಾಜು ಎನ್ ಬಿರಾದಾರ
8970374710
ರಾಜ್ಯ ಸಂಚಾಲಕರು
ಗಂಗಾಧರ ದೇಸಣಗಿ
9845303821
ಯಡ್ರಾಮಿ ತಾಲೂಕ ಅಧ್ಯಕ್ಷರು
ಶರಣು ಪೂಜಾರಿ
97412 68544


Share