ವಿವಾ ಮ್ಯೂಸಿಕಲನಲ್ಲಿ ಬೇಸಿಗೆ ರಜಾ ಶಿಬಿರ ಮುಕ್ತಾಯ ಕಾರ್ಯಕ್ರಮ 2024

ವಿವಾ ಮ್ಯೂಸಿಕಲನಲ್ಲಿ ಬೇಸಿಗೆ ರಜಾ ಶಿಬಿರ ಮುಕ್ತಾಯ ಕಾರ್ಯಕ್ರಮ 2024

Share

ಹೊನ್ನಾವರ:- ವಿವಾ ಮ್ಯೂಸಿಕಲ್ಸ ತರಬೇತಿ ಕೇಂದ್ರ ಹೊನ್ನಾವರದಲ್ಲಿ ಬೇಸಿಗೆ ರಜಾ ಶಿಬಿರವನ್ನು ಹಮ್ಮಿಕೊಂಡಿದ್ದರು, ಇದರ ಮುಕ್ತಾಯ ಕಾರ್ಯಕ್ರಮ ಅಂಗವಾಗಿ ಸಭೆಯ ಅಧ್ಯಕ್ಷರಾಗಿ ಸಿಸ್ಟರ್ ಸಂತಾನ ಲೋಪಿಸ್ ಅವರನ್ನು ಆಹ್ವಾನಿಸಿದ್ದರು ಹಾಗೂ ವಿ.ಏನ್.ಪೈ ಸರ್ ಮತ್ತು ವಿವಾ ಸಂಗೀತ ತರಬೇತಿ ಕೇಂದ್ರದ ಸಂಸ್ಥಾಪಕರಾದ ನೀಲನ ಮಿರಾಂಡಾ ಅವರು ಉಪಸ್ಥಿತರಿದ್ದರು,ವಿವಾ ಸಂಗೀತ ಸoಸ್ಥೆಯ ಮಕ್ಕಳಿಂದ ಪ್ರಾರ್ಥನಾಗೀತೆ ಹಾಗೂ ಸಭೆಯ ಗಣ್ಯರಿಂದ ದೀಪ ಬೆಳಗಿಸುವುದರ ಮೂಲಕ ಪ್ರಾರಂಭಿಸಲಾಯಿತು.ಸಿಸ್ಟರ್ ಸಂತಾನ ಲೂಪಿಸ್ ಅವರು ಮಕ್ಕಳಿಗೆ ತಮಗೆ ದೇವರು ಕೊಟ್ಟ ಹಾಗೂ ತಮ್ಮಲ್ಲಿ ಅಡಗಿರುವ ಪ್ರತಿಭೆಗಳನ್ನು ತಮಗೆ ಸಿಕ್ಕ ಹಾಗೂ ಕಲ್ಪಿಸಿಕೊಟ್ಟ ಅವಕಾಶಗಳಲ್ಲಿ ಸರಿಯಾಗಿ ಉಪಯೋಗಿಸಿ ಜೀವನದಲ್ಲಿ ಆ ಪ್ರತಿಭೆಗಳಿಂದ ಯಶಶ್ವಿಗೊಳ್ಳಲು ಹಾಗೂ ಸಮಾಜದಲ್ಲಿ ಗುಣಭರಿತ್ ವ್ಯಕ್ತಿಗಳಾಗಿ ಬಾಳುವ ಸಂದೇಶವನ್ನು ನೀಡಿದರು. ಸರ್ ವಿ.ಏನ್.ಪೈ ಅವರು ಈ ರಾಜ ಶಿಬಿರದಲ್ಲಿ ಮಕ್ಕಳಿಗೆ ಚಿತ್ರಕಲೆಯನ್ನು ಕಲಿಸಿಕೊಟ್ಟವರಾಗಿದ್ದು ಮಕ್ಕಳಿಗೆ ತಮ್ಮ ಜೀವನದಲ್ಲಿ ಹೆಚ್ಚು ಶ್ರಮ ಪಟ್ಟರೆ ಮಾತ್ರ್ ಯಶಸ್ವಿ ಆಗಲು ಸಾಧ್ಯ ಎಂದು ನುಡಿದರು. ವಿವಾ ಮ್ಯೂಸಿಕ್ ಸoಸ್ಥಾಪಕರಾದ ನೀಲನ ಅವರು ಅತಿಥಿಗಳಿಗೆ ನೆನಪಿನ ಕಾಣಿಕೆಯನ್ನು ನೀಡಿ ಗೌರವಿಸಿದರು ಹಾಗೂ ಅತಿಥಿಗಳಿಂದ ಮಕ್ಕಳಿಗೆ ಪ್ರಶಸ್ತಿ ಪತ್ರ ಹಾಗೂ ಪದಕಗಳನ್ನು ವಿತರಿಸಲಾಯಿತು ಮತ್ತು ರಜಾ ಶಿಬಿರದ ಕೆಲವು ಮಕ್ಕಳಿಂದ ತಮ್ಮ ಅನಿಸಿಕೆಯನ್ನು ತಿಳಿಸಲು ಅವಕಾಶ್ಣನೀಡಿದ್ದರು,ಹೀಗೆ ಕೊನೆಯಲ್ಲಿ ಜೋಕಿಮ್ ಫೆರ್ನಾಂಡಿಸ್ ಅವರು ಎಲ್ಲರನ್ನೂ ಧನ್ಯವಾದಗಳನ್ನು ಸಲ್ಲಿಸಿ ಕಾರ್ಯಕ್ರಮವು ಮುಕ್ತಾಯಗೊಳಿಸಲಾಯಿತು.


Share