ಬೆಂಗಳೂರಿನಿಂದ ಹೊನ್ನಾವರಕ್ಕೆ 500 ಕಿಲೋಮೀಟರ್ ಸೈಕಲ್ ಓಡಿಸಿದ ಯುವಕ ರೊಯಸ್ಟನ ಎವೇರಿಸ್ಟ್ ಫೆರ್ನಾಂಡಿಸ್

ಬೆಂಗಳೂರಿನಿಂದ ಹೊನ್ನಾವರಕ್ಕೆ 500 ಕಿಲೋಮೀಟರ್ ಸೈಕಲ್ ಓಡಿಸಿದ ಯುವಕ ರೊಯಸ್ಟನ ಎವೇರಿಸ್ಟ್ ಫೆರ್ನಾಂಡಿಸ್

Share

ಹೊನ್ನಾವರ:- ಹೌದು ಇಂದಿನ ಆಧುನಿಕ ಕಾಲದಲ್ಲಿ ಪ್ರಗತಿ ಹೊಂದಿರುವ ದೇಶದಲ್ಲಿ ನಮ್ಮ ಭಾರತವು ಒಂದಾಗಿದೆ.ಹಿಂದಿನ ಕಾಲದಲ್ಲಿ ನಾವು ಯಾವುದೇ ಊರಿಗೆ ಹೋಗಬೇಕಾದರೆ ಕಾಲ್ನಡಿಗೆ ಅಥವಾ ಪ್ರಾಣಿಗಳನ್ನು ನಾವು ಅವಲಂಬಿತರಾಗಿದ್ದೆವು ,ಆದರೆ ಇಂದಿನ ಕಾಲದಲ್ಲಿ ಕಡಿಮೆ ಸಮಯದಲ್ಲಿ ಅತಿವೇಗವಾಗಿ ನಾವು ಎಲ್ಲಿ ಬೇಕಾದರೂ ಪ್ರಯಾಣ ಮಾಡಬಹುದು. ಈ ಯುಗದ ಯುವಕರು ಹಲವರು ವಾಹನವನ್ನು ಅವಲಂಬಿತರಾಗಿದ್ದಾರೆ. ಈ ಮದ್ಯದಲ್ಲಿ ನಮ್ಮ ಹೊನ್ನಾವರದ ಯುವಕ ಸೈಕಲ್ ಮುಖಾಂತರ ಬೆಂಗಳೂರಿನಲ್ಲಿರುವ ಸೇಂಟ್ ಎಂಟನೀಸ್ ಪ್ರೈಮರಿ ಚರ್ಚ್ ಮಾಡಿವಾಳದಿಂದ ಹೊನ್ನಾವರಕ್ಕೆ 60 ಗಂಟೆಯಲ್ಲಿ ತಲುಪಿ ಹೊಸ ದಾಖಲೆಯನ್ನು ಸೃಷ್ಟಿಸಿರುವ ನಮ್ಮ ಹೊನ್ನಾವರದ ಯುವಕ ರಾಯಸ್ಟನ ಎವರಿಸ್ಟ್ ಫೆರ್ನಾಂಡಿಸ್ ಅವರು ಎಲ್ಲರ ಪ್ರಶoಸೆಗೆ ಪಾತ್ರರಾಗಿದ್ದಾರೆ . ರಾಯಸ್ಟನ ಫೆರ್ನಾಂಡಿಸ್ ಅವರು ಮೂಲತಃ ಕೆಳಗಿನ ಕಾಸರಕೊಡ ,ಹೊನ್ನಾವರದರು.ಇವರು ಬೆಂಗಳೂರಿನಲ್ಲಿ ಖಾಸಗಿ ಸಂಸ್ಥೆಯಲ್ಲಿ ಸುಮಾರು 7 ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ,ಇವರ ಹವ್ಯಾಸಗಳಲ್ಲಾದ ಗಾಯನ,ಸಂಗೀತ ವಾದ್ಯ,ಮತ್ತು ಸೈಕಲ ಓಡಿಸುವುದು ಒಂದಾಗಿದೆ.ಇಂತಹ ಪ್ರತಿಭೆಗಳನ್ನು ನಾವು ಕೂಡ ಪ್ರೋತ್ಸಾಹಿಸಿ ಬೇರೆಯವರಿಗೆ ಮಾದರಿಯಾಗಲಿ ಎಂದು ಹಾರೈಸೋಣ.


Share