ಯಡ್ರಾಮಿ ತಾಲೂಕ್ಕಿನಲ್ಲಿ ಕೈಗಾರಿಕಾ ವಲಯ ಸ್ಥಾಪನೆಯಾಗಬೇಕು ಹೋರಾಟಗಾರ ಶಂಕರಗೌಡ ಕನ್ನೋಳ್ಳಿ ಸರ್ಕಾರಕ್ಕೆ ಆಗ್ರಹ.

ಯಡ್ರಾಮಿ ತಾಲೂಕ್ಕಿನಲ್ಲಿ ಕೈಗಾರಿಕಾ ವಲಯ ಸ್ಥಾಪನೆಯಾಗಬೇಕು ಹೋರಾಟಗಾರ ಶಂಕರಗೌಡ ಕನ್ನೋಳ್ಳಿ ಸರ್ಕಾರಕ್ಕೆ ಆಗ್ರಹ.

Share

ಯಡ್ರಾಮಿ ಸುದ್ದಿ.
ಕಲ್ಯಾಣ ಕರ್ನಾಟಕದ ಕಟ್ಟಕಡೆಯ ನಿರ್ಲಕ್ಷ ಕೊಳಗಾದ ತಾಲೂಕಾವೆಂದರೆ ಅದು ನಮ್ಮ ಯಡ್ರಾಮಿ ತಾಲೂಕ ಇ ತಾಲೂಕಿನಲ್ಲಿ ಯಾವುದೇ ರೀತಿಯಿಂದ ನವೀಕರಣವಾದ ನೂತನ ಸರ್ಕಾರಿ ಕಚೇರಿಗಳಿಲ್ಲ ಮತ್ತು ಅಗ್ನಿಶಾಮಕ ಕಚೇರಿಯು ಸಹಿತ ಇರುವದಿಲ್ಲ ಸಮಾಜ ಕಲ್ಯಾಣ ಇಲಾಖೆಯ ಕಚೇರಿಗಳಿಲ್ಲ ಅದೇ ರೀತಿಯಾಗಿ ಶಿಕ್ಷಣ ಇಲಾಖೆಯ ಕಚೇರಿ ಇಲ್ಲಾ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಕಚೇರಿ ಇರುವುದಿಲ್ಲ ಹೆಸರಿಗೆ ಮಾತ್ರ ತಾಲೂಕ ಘೋಷಣೆಯಾದರೆ ಸಾಲದು ಹಿಂದುಳಿದ ತಾಲೂಕಿಗೆ ಹೆಚ್ಚಿನ ಅನುದಾನ ಬಿಡುಗಡೆ ಮಾಡಬೇಕು ಹಾಗೂ ಯಡ್ರಾಮಿ ತಾಲೂಕಿನ ಅಭಿವೃದ್ಧಿಗೆ ತಾಲೂಕಿನ ಶಾಸಕರಾದ ಡಾ. ಅಜಯ್ ಸಿಂಗಅವರು ಯಡ್ರಾಮಿ ತಾಲೂಕಿನ ಸ್ಪಷ್ಟ ಚಿತ್ರಣ ಬದಲಾಯಿಸಬೇಕಿದೆ ಇನಮ್ಮ ಯಡ್ರಾಮಿ ತಾಲೂಕಿನಲ್ಲಿ ಯಾವುದೇ ರೀತಿಯ ನಿರುದ್ಯೋಗಿ ಯುವಕರಿಗೆ ಕೆಲಸ ಮಾಡಲು ಕೈಗಾರಿಕಾ ಇಂಡಸ್ಟ್ರಿಯಲ್ ಕಂಪನಿಗಳು ಇರುವುದಿಲ್ಲ ಯಡ್ರಾಮಿ ತಾಲೂಕಿನ ಯುವಕರ ಬಹುದಿನಗಳ ಬೇಡಿಕೆ ಯಡ್ರಾಮಿ ತಾಲೂಕಿನಲ್ಲಿ ಇಂಡಸ್ಟ್ರಿಯಲ್ ಕೈಗಾರಿಕಾ ಕಂಪನಿಗಳನ್ನು ಸ್ಥಾಪಿಸಲು ಮೊದಲು ಆದ್ಯತೆ ಕೊಡಬೇಕು ಯಾಕೆಂದರೆ ಯಡ್ರಾಮಿ ತಾಲೂಕಿನಿಂದ ಘಟಾನುಘಟೀ ಪ್ರಭಾವಿಗಳು ರಾಜಕೀಯ ಮಾಹಾನ ಮುತ್ಸದಿಗಳು ಮೇಧಾವಿಗಳು ತತ್ವಜ್ಞಾನಿಗಳು ಸಂತಶರಣರಿಗೆ ಜನ್ಮ ನೀಡಿದ ಪುಣ್ಯಕ್ಷೇತ್ರವೇ ಈನಮ್ಮ ಯಡ್ರಾಮಿ ತಾಲೂಕವು ಕಟ್ಟ ಕಡೆಯ ನಿರ್ಲಕ್ಷಕೊಳಗಾದ ಹಿಂದುಳಿದ ತಾಲೂಕುವೆಂದು ಪ್ರಸಿದ್ಧಿ ಪಡೆದಿದ್ದು ಇನ್ನು ಮುಂದಾದರೂ ಯಡ್ರಾಮಿ ತಾಲೂಕಿನ ಅಭಿವೃದ್ಧಿಗೆ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಯಿಂದ ಹೆಚ್ಚಿನ ಅನುದಾನ ಬಿಡುಗಡೆ ಮಾಡಬೇಕು ಮತ್ತು ರಾಜ್ಯದ ಮುಖ್ಯಮಂತ್ರಿ ಗಳಾದ ಸಿದ್ದರಾಮಯ್ಯನವರು ಕಲ್ಯಾಣ ಕರ್ನಾಟಕದ ನಿರ್ಲಕ್ಷ ಕೊಳಗಾದ ಹಿಂದುಳಿದ ಪ್ರದೇಶಗಳ ಅಭಿವೃದ್ಧಿಗೆ ನಾಂದಿ ಹಾಡಬೇಕು ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿ ಅಧ್ಯಕ್ಷರು ಶಾಸಕರಾದ ಡಾ. ಅಜಯ್ ಸಿಂಗ್ ಅವರು ಯಡ್ರಾಮಿ ತಾಲೂಕಿನ ಕಡೆ ವಿಶೇಷವಾಗಿ ಗಮನಹರಿಸುವುದು ಸೂಕ್ತವಾಗಿದೆ ಯಾಕೆಂದರೆ ಅವಳಿ ತಾಲೂಕವೆಂದೆ ಎಂದು ಹೆಸರಾದ ಜೇವರ್ಗಿ ಮತ್ತು ಯಡ್ರಾಮಿ ತಾಲೂಕ ಹೆಸರಿಗೆ ಮಾತ್ರ ತಾಲೂಕ ಘೋಷಣೆಯಾದರೆ ಸಾಲದು ತಾಲೂಕಿಲ್ಲಿ ಏನು ಕೊರತೆ ಇದೆ ಅದು ಸರಿಪಡಿಸುವುದು ತಾಲೂಕಿನ ಶಾಸಕರ ಮುಖ್ಯ ಕರ್ತವವಾಗಿದೆ ಎಂದು ಸಾಮಾಜಿಕ ಹೋರಾಟಗಾರ ಶಂಕರಗೌಡ ಕನ್ನೋಳ್ಳಿ ಸುಂಬುಡ ಅವರು ಪತ್ರಿಕಾ ಪ್ರಕಟಣೆಯ ಮೂಲಕ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ


Share