ಮತ್ತೊಮ್ಮೆ ಡೀಪ್‌ಫೇಕ್‌ಗೆ ಬಲಿಯಾದ ರಶ್ಮಿಕಾ ಮಂದಣ್ಣ: ಈ ಬಾರಿ ಮಾಡೆಲ್‌ ಮುಖಕ್ಕೆ ಸಂಯೋಜನೆ!

ಮತ್ತೊಮ್ಮೆ ಡೀಪ್‌ಫೇಕ್‌ಗೆ ಬಲಿಯಾದ ರಶ್ಮಿಕಾ ಮಂದಣ್ಣ: ಈ ಬಾರಿ ಮಾಡೆಲ್‌ ಮುಖಕ್ಕೆ ಸಂಯೋಜನೆ!

Share

ನಟಿ ರಶ್ಮಿಕಾ ಮಂದಣ್ಣ ಮತ್ತೊಮ್ಮೆ ಡೀಪ್ ಫೇಕ್ ವಿಡಿಯೋಗೆ ಬಲಿಯಾಗಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೋ ವೈರಲ್ ಆಗುತ್ತಿದ್ದು, ಇದರಲ್ಲಿ AI ಬಳಸಿ ಮಾರ್ಫಿಂಗ್ ಮಾಡಲಾಗಿದೆ. ಈ ವಿಡಿಯೋದಲ್ಲಿ ರಶ್ಮಿಕಾ ಮಂದಣ್ಣ ಮುಖವನ್ನು ಮಾಡೆಲ್‌ನ ಮುಖದೊಂದಿಗೆ ಎಐ ಸಹಾಯದಿಂದ ಸಂಯೋಜಿಸಲಾಗಿದೆ.

ಮಾಧ್ಯಮ ವರದಿಗಳ ಪ್ರಕಾರ, 2024ರ ಏಪ್ರಿಲ್ ನಲ್ಲಿ ಕೊಲಂಬಿಯಾದ ಮಾಡೆಲ್ ಮತ್ತು ಕಂಟೆಂಟ್ ಕ್ರಿಯೇಟರ್ ಡೇನಿಯೆಲಾ ವಿಲ್ಲಾರ್ರಿಯಲ್ ಅವರು ಇನ್‌ಸ್ಟಾಗ್ರಾಮ್‌ನಲ್ಲಿ ವೀಡಿಯೊವನ್ನು ಹಂಚಿಕೊಂಡಿದ್ದರು. ಇದರಲ್ಲಿ ಅವರು ಸ್ಟ್ರಾಪ್‌ಲೆಸ್ ಬಿಕಿನಿಯಲ್ಲಿ ಜಲಪಾತದ ಬಳಿ ಪೋಸ್ ನೀಡುತ್ತಿದ್ದಾರೆ. ಕೆಲವು ದಿನಗಳ ಹಿಂದೆ, AI ಸಹಾಯದಿಂದ ಮಾಡೆಲ್‌ನ ಮುಖವನ್ನು ರಶ್ಮಿಕಾ ಅವರ ಮುಖದೊಂದಿಗೆ ಬದಲಾಯಿಸಲಾಗಿದ್ದು ಅದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು.ಕಳೆದ ವರ್ಷ ನವೆಂಬರ್‌ನಲ್ಲಿ ರಶ್ಮಿಕಾ ಅವರ ಇದೇ ರೀತಿಯ ವೀಡಿಯೊ ವೈರಲ್ ಆಗಿತ್ತು. ಆ ವಿಡಿಯೋ ಕೂಡ ಎಐ ಸಹಾಯದಿಂದ ಮಾರ್ಫಿಂಗ್ ಮಾಡಿ ಮಾಡಲಾಗಿತ್ತು. ಹಳೆಯ ವೈರಲ್ ವೀಡಿಯೊದಲ್ಲಿ ಬ್ರಿಟನ್ ಮೂಲದ ಜಾರಾ ಪಟೇಲ್ ಅವರ ದೇಹದ ಮೇಲೆ ರಶ್ಮಿಕಾ ಅವರ ಮುಖವನ್ನು ಅಳವಡಿಸಲಾಗಿತ್ತು. ಆದರೆ ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿಯನ್ನು ಬಂಧಿಸಿದ್ದರು.

ರಶ್ಮಿಕಾ ಯಾವುದೇ ಪ್ರತಿಕ್ರಿಯೆ ನೀಡಿಲ್ಲ

ವಿಡಿಯೋ ವೈರಲ್ ಆದ ನಂತರ ನಟಿಯಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಅಲ್ಲು ಅರ್ಜುನ್ ಅಭಿನಯದ ‘ಪುಷ್ಪ 2’ ಚಿತ್ರದಲ್ಲಿ ರಶ್ಮಿಕಾ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅಲ್ಲದೆ, ಚಿತ್ರದಲ್ಲಿ ಫಹದ್ ಫಾಸಿಲ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರವು ಆಗಸ್ಟ್ 15ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.


Share