ಮಕ್ಕಳ ಗೌಪ್ಯತೆ ಗೌರವಿಸಿದ್ದಕ್ಕಾಗಿ ಪಾಪರಾಜಿಗಳಿಗೆ ಉಡುಗೊರೆ: ಗಿಫ್ಟ್ ನೀಡಿದ್ದು ನಾನಲ್ಲ ಅನುಷ್ಕಾ ಎಂದ ವಿರಾಟ್ ಕೊಹ್ಲಿ

ಮಕ್ಕಳ ಗೌಪ್ಯತೆ ಗೌರವಿಸಿದ್ದಕ್ಕಾಗಿ ಪಾಪರಾಜಿಗಳಿಗೆ ಉಡುಗೊರೆ: ಗಿಫ್ಟ್ ನೀಡಿದ್ದು ನಾನಲ್ಲ ಅನುಷ್ಕಾ ಎಂದ ವಿರಾಟ್ ಕೊಹ್ಲಿ

Share

ಐಪಿಎಲ್ 2024ನೇ ಆವೃತ್ತಿಯ ನಂತರ ವಿರಾಟ್ ಕೊಹ್ಲಿ ಬ್ರೇಕ್ ತೆಗೆದುಕೊಂಡಿದ್ದು, ಟಿ20 ವಿಶ್ವಕಪ್‌ನಲ್ಲಿ ಆರಂಭಿಕವಾಗಿ ಪಾಲ್ಗೊಳ್ಳುವುದು ಅನುಮಾನ ಎನ್ನಲಾಗಿತ್ತು. ಆದರೆ, ಗುರುವಾರ ವಿರಾಟ್ ಕೊಹ್ಲಿ ಅವರು ನ್ಯೂಯಾರ್ಕ್‌ಗೆ ತೆರಳಿದ ಕಾರಣ ವದಂತಿಗಳಿಗೆ ತೆರೆಬಿದ್ದಿದೆ ಮತ್ತು ಶೀಘ್ರದಲ್ಲೇ ಅವರು ಭಾರತೀಯ ಕ್ರಿಕೆಟ್ ತಂಡವನ್ನು ಸೇರಿಕೊಳ್ಳಲಿದ್ದಾರೆ. ಮುಂಬೈ ವಿಮಾನ ನಿಲ್ದಾಣದಲ್ಲಿ ವಿರಾಟ್ ಕೊಹ್ಲಿ ಕಾಣಿಸಿಕೊಳ್ಳುತ್ತಿದ್ದಂತೆಯೇ, ಅಭಿಮಾನಿಗಳು ಮತ್ತು ಪಾಪರಾಜಿಗಳು ಸುತ್ತುವರೆದಿದ್ದಾರೆ. ತಮ್ಮ ಮಗ ಅಕಾಯ್ ಜನಿಸಿದ ನಂತರ ಉಡುಗೊರೆಗಳನ್ನು ಕಳುಹಿಸಿದ್ದಕ್ಕಾಗಿ ಪಾಪರಾಜಿಗಳು ಕೊಹ್ಲಿಗೆ ಧನ್ಯವಾದ ಹೇಳಿದ್ದಾರೆ. ಕೂಡಲೇ ಕೊಹ್ಲಿ ಉಡುಗೊರೆಗಳನ್ನು ನೀಡಿದ್ದು ತಾವಲ್ಲ ತಮ್ಮ ಪತ್ನಿ ಅನುಷ್ಕಾ ಶರ್ಮಾ ಎಂದಿದ್ದಾರೆ.ಅನುಷ್ಕಾ ಶರ್ಮಾ ನಿಮಗೆ ಉಡುಗೊರೆಗಳನ್ನು ನೀಡಿದ್ದು, ನಾನಲ್ಲ ಎಂದಿದ್ದಾರೆ. ಈ ಮೂಲಕ ಕ್ರೆಡಿಟ್‌ ಅನ್ನು ವಿರಾಟ್ ಕೊಹ್ಲಿ ಅನುಷ್ಕಾ ಶರ್ಮಾರಿಗೆ ನೀಡಿದ್ದು ಮೆಚ್ಚುಗೆಗೆ ಪಾತ್ರವಾಗಿದೆ.

ಮಗಳು ವಮಿಕಾ ಮತ್ತು ಮಗ ಅಕಾಯ್ ಅವರ ಗೌಪ್ಯತೆಯನ್ನು ಗೌರವಿಸಿದ್ದಕ್ಕಾಗಿ ಕೃತಜ್ಞತೆಗಳನ್ನು ವ್ಯಕ್ತಪಡಿಸುವ ಮೂಲಕ ಸ್ಟಾರ್ ದಂಪತಿ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಪಾಪರಾಜಿಗಳಿಗೆ ಉಡುಗೊರೆ ಹ್ಯಾಂಪರ್‌ಗಳನ್ನು ಕಳುಹಿಸಿದ್ದರು. ಇಬ್ಬರೂ ಈ ಹಿಂದೆ ತಮ್ಮ ಒಪ್ಪಿಗೆಯಿಲ್ಲದೆ ಮಗಳು ವಮಿಕಾ ಮತ್ತು ಮಗ ಅಕಾಯ್ ಅವರ ಫೋಟೊ ತೆಗೆಯದಂತೆ ಛಾಯಾಗ್ರಾಹಕರಿಗೆ ವಿನಂತಿಸಿದ್ದರುಉಡುಗೊರೆಯೊಂದಿಗೆ ಇದ್ದ ಟಿಪ್ಪಣಿಯಲ್ಲಿ, ‘ನಮ್ಮ ಮಕ್ಕಳ ಗೌಪ್ಯತೆಯನ್ನು ಗೌರವಿಸಿದ್ದಕ್ಕಾಗಿ ಮತ್ತು ಯಾವಾಗಲೂ ಸಹಕರಿಸಿದ್ದಕ್ಕಾಗಿ ಪ್ರಾಮಾಣಿಕವಾಗಿ ಧನ್ಯವಾದಗಳು! ಪ್ರೀತಿಯಿಂದ ಅನುಷ್ಕಾ ಮತ್ತು ವಿರಾಟ್ ಎಂದು ಬರೆಯಲಾಗಿತ್ತು.

ಈಮಧ್ಯೆ, ರೋಹಿತ್ ಶರ್ಮಾ ನಾಯಕತ್ವದ ಭಾರತ ಕ್ರಿಕೆಟ್ ತಂಡವು ಸಾಕಷ್ಟು ಸಮತೋಲಿತವಾಗಿದೆ. ಆದರೆ, ಅವರು ಅಲ್ಲಿನ ಪರಿಸ್ಥಿತಿಗಳಿಗೆ ಒಗ್ಗಿಕೊಳ್ಳಬೇಕಾಗಿದೆ. ಅಮೆರಿಕದಲ್ಲಿ ಪಂದ್ಯಗಳು ಬೆಳಿಗ್ಗೆ ಪ್ರಾರಂಭವಾಗಲಿದ್ದು, ಅದು ಸಮಸ್ಯೆಯನ್ನು ಉಂಟುಮಾಡಬಹುದು ಎಂದು ಭಾರತೀಯ ಕ್ರಿಕೆಟ್ ತಂಡದ ಮಾಜಿ ಆಟಗಾರ ಸುರೇಶ್ ರೈನಾ ತಿಳಿಸಿದ್ದಾರೆ.ತಂಡ ಸಮತೋಲಿತವಾಗಿದೆ. ರೋಹಿತ್ ಶರ್ಮಾ ನಾಯಕರಾಗಿದ್ದು, ವಿರಾಟ್ ಕೊಹ್ಲಿ ಉತ್ತಮ ಫಾರ್ಮ್‌ನಲ್ಲಿದ್ದಾರೆ ಮತ್ತು ಸೂರ್ಯಕುಮಾರ್ ಯಾದವ್ ಉತ್ತಮ ಟಚ್‌ನಲ್ಲಿದ್ದಾರೆ. ಇಬ್ಬರು ಎಡಗೈ ವೇಗಿಗಳಿದ್ದು, ಅವರು ಪವರ್‌ಪ್ಲೇನಲ್ಲಿ ಬೌಲಿಂಗ್ ಮಾಡಬಹುದು. ಅಕ್ಷರ್ ಪಟೇಲ್ ಮತ್ತು ರವೀಂದ್ರ ಜಡೇಜಾ ಇದ್ದಾರೆ. ಪಂದ್ಯಗಳು ಬೆಳಿಗ್ಗೆ 10 ಗಂಟೆಗೆ ಆರಂಭವಾಗುತ್ತವೆ. ವಿಕೆಟ್‌ಗಳು ಸಹ ಡ್ರಾಪ್-ಇನ್ ಆಗಿವೆ. ತಂಡವು ಈ ವಿಕೆಟ್‌ಗಳು ಮತ್ತು ಪರಿಸ್ಥಿತಿಗಳಿಗೆ ಸಾಧ್ಯವಾದಷ್ಟು ಬೇಗ ಒಗ್ಗಿಕೊಳ್ಳಬೇಕು ಎಂದು ಕಾರ್ಯಕ್ರಮವೊಂದರಲ್ಲಿ ಹೇಳಿದರು.


Share