ಐಪಿಎಲ್ 2024ರಲ್ಲಿ ಅತಿ ಹೆಚ್ಚು ರನ್ ಗಳಿಸುವ ಮೂಲಕ RCB ತಂಡದ ಆಟಗಾರ ವಿರಾಟ್ ಕೊಹ್ಲಿ ಪರ್ಪಲ್ ಕ್ಯಾಪ್ ಗಳಿಸಿದ್ದಾರೆ. ಆದರೆ ಋತುವಿನ ಉದ್ದಕ್ಕೂ, ವಿರಾಟ್ ಕೊಹ್ಲಿ ಅವರ ಸ್ಟ್ರೈಕ್ ರೇಟ್ ಬಗ್ಗೆ ಟೀಕೆಗಳು ಎದುರಾಯಿತು. ಇದರಲ್ಲಿ ಸುನಿಲ್ ಗವಾಸ್ಕರ್ ಅವರಂತಹ ದಿಗ್ಗಜ ಆಟಗಾರರೂ ಇದ್ದಾರೆ. ಅಲ್ಲದೆ, ಮಾಜಿ ನ್ಯೂಜಿಲೆಂಡ್ ವೇಗದ ಬೌಲರ್ ಮತ್ತು ವೀಕ್ಷಕ ವಿವರಣೆಗಾರ ಸೈಮನ್ ಡೌಲ್ ಕೂಡ ವಿರಾಟ್ ಕೊಹ್ಲಿಯ ಸ್ಟ್ರೈಕ್ ರೇಟ್ ಅನ್ನು ಟೀಕಿಸಿದ್ದರು. ಇದೀಗ ಅವರು ಆಘಾತಕಾರಿ ಸಂಗತಿಯೊಂದನ್ನು ಬಹಿರಂಗಪಡಿಸಿದ್ದಾರೆ.ನ್ಯೂಜಿಲೆಂಡ್‌ನ ಮಾಜಿ ವೇಗದ ಬೌಲರ್ ಮತ್ತು ಕಾಮೆಂಟೇಟರ್ ಸೈಮನ್ ಡೌಲ್ ಅವರು ವಿರಾಟ್ ಕೊಹ್ಲಿಯ ಸ್ಟ್ರೈಕ್ ರೇಟ್ ಅನ್ನು ಟೀಕಿಸಿದ ನಂತರ ಅವರು ಪಡೆದ ಪ್ರತಿಕ್ರಿಯೆಗಳ ಬಗ್ಗೆ ಬಹಿರಂಗಪಡಿಸಿದ್ದಾರೆ. ಕೊಹ್ಲಿ ಬಗ್ಗೆ ಹೇಳಲು ಸಾವಿರಾರು ಒಳ್ಳೆಯ ಸಂಗತಿಗಳು ಇದ್ದರೂ, ತಮ್ಮ ಕೆಲವು ಟೀಕೆಗಳಿಗೆ “ಜೀವ ಬೆದರಿಕೆ” ಬಂದಿವೆ ಎಂದು ಡೌಲ್ ಹೇಳಿದರು.
ಕ್ರಿಕ್‌ಬಝ್‌ನೊಂದಿಗೆ ಮಾತನಾಡುತ್ತಾ, ಡೌಲ್, ನಾನು ಒಬ್ಬ ಶ್ರೇಷ್ಠ ಆಟಗಾರನನ್ನು ನೋಡುತ್ತಿದ್ದೇನೆ. ಮೊದಲಿಗಿಂತ ಹೆಚ್ಚು ಪ್ರಾಬಲ್ಯ ಸಾಧಿಸಬೇಕಾದ ಆಟಗಾರನನ್ನು ನಾನು ನೋಡುತ್ತಿದ್ದೇನೆ ಎಂದರು. ವಿರಾಟ್ ಕೊಹ್ಲಿ ಬಗ್ಗೆ ನಾನು ಒಂದು ಮಿಲಿಯನ್ ಒಳ್ಳೆಯ ಮಾತುಗಳನ್ನು ಹೇಳಿದ್ದೇನೆ. ಆದರೆ ನಾನು ಎಂದಿಗೂ ಒಂದೇ ಒಂದು ಋಣಾತ್ಮಕ ವಿಷಯವನ್ನು ಹೇಳಿಲ್ಲ ಅಥವಾ ನಕಾರಾತ್ಮಕವಾಗಿ ಪ್ರತಿಕ್ರಿಯಿಸಿಲ್ಲ. ಹೀಗಿದ್ದರೂ ನನಗೆ ಕೊಲೆ ಬೆದರಿಕೆಗಳು ಬರುತ್ತಿರುವುದು ನಾಚಿಕೆಗೇಡಿನ ಸಂಗತಿ ಎಂದರು.ಐಪಿಎಲ್ 2024ರಲ್ಲಿ ವಿರಾಟ್ ಕೊಹ್ಲಿಯ ಪ್ರದರ್ಶನ
ವಿರಾಟ್ ಕೊಹ್ಲಿ ಐಪಿಎಲ್ 2024 ರಲ್ಲಿ ಪರ್ಪಲ್ ಕ್ಯಾಪ್‌ಗೆ ಅರ್ಹರಾಗಿದ್ದಾರೆ. ಈ ಋತುವಿನಲ್ಲಿ ಕೊಹ್ಲಿ 15 ಪಂದ್ಯಗಳನ್ನು ಆಡಿದ್ದಾರೆ. ಈ 15 ಪಂದ್ಯಗಳಲ್ಲಿ ಅವರು 154.70 ಸ್ಟ್ರೈಕ್ ರೇಟ್‌ನಲ್ಲಿ 741 ರನ್ ಗಳಿಸಿದ್ದಾರೆ. ಇದರಲ್ಲಿ ಐದು ಅರ್ಧ ಶತಕ ಮತ್ತು ಒಂದು ಶತಕ ಸೇರಿದೆ. ಈ ಋತುವಿನಲ್ಲಿ ಅವರ ಐಪಿಎಲ್ ವೃತ್ತಿಜೀವನದ ಅತ್ಯುತ್ತಮ ಸ್ಕೋರ್ ಅಜೇಯ 113 ರನ್. ವಿರಾಟ್ ಕೊಹ್ಲಿ ಐಪಿಎಲ್ 2024 ರಲ್ಲಿ 62 ಬೌಂಡರಿ ಮತ್ತು 38 ಸಿಕ್ಸರ್‌ಗಳನ್ನು ಬಾರಿಸಿದ್ದಾರೆ.