ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ: BBMP ಗುತ್ತಿಗೆದಾರನ ವಿರುದ್ಧ ದೂರು ದಾಖಲು

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ: BBMP ಗುತ್ತಿಗೆದಾರನ ವಿರುದ್ಧ ದೂರು ದಾಖಲು

Share

ಬೆಂಗಳೂರು: 16 ವರ್ಷದ ನನ್ನ ಮಗಳ ಮೇಲೆ ಕಸ ವಿಂಗಡಣೆ ಗುತ್ತಿಗೆದಾರ ಅತ್ಯಾಚಾರ ನಡೆಸಿದ್ದಾನೆಂದು ಪಶ್ಚಿಮ ಬಂಗಾಳದ ವಲಸಿಗರೊಬ್ಬರು ಬೇಗೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಪಶ್ಚಿಮ ಬಂಗಾಳದ ನೊಯ್ಡಾ ಜಿಲ್ಲೆಯ ನಿವಾಸಿಯಾದ ಬಾಲಕಿಯ ತಂದೆ ಶಹೀನ್ ಹಾಗೂ ಆತನ ಪತ್ನಿ ಮೀಮ್ ಅವರ ವಿರುದ್ಧ ದೂರು ದಾಖಲಿಸಿದ್ದಾರೆ.

ಬಾಲಕಿಯ ಕುಟುಂಬ ಶಹೀನ್ ಅವರಿಗಾಗಿ ಕೆಲಸ ಮಾಡಲು ನಗರಕ್ಕೆ ಬದಿತ್ತು. ಬಾಲಕಿ ಉಳಿದಿದ್ದ ಶೆಡ್ ಪಕ್ಕದಲ್ಲಿಯೇ ಶಹೀನ್ ಕುಟುಂಬದ ಶೆಡ್ ಕೂಡ ಇತ್ತು. ಮೇ.17ರ ರಾತ್ರಿ ಶಹೀನ್ ಪತ್ನಿ ಮೀಮ್ ಮಧ್ಯರಾತ್ರಿ 12.30ರ ಸುಮಾರಿಗೆ ಬಾಲಕಿಗೆ ಟೀ ಮಾಡುವಂತೆ ತಿಳಿಸಿದ್ದಾಳೆ. ಈ ವೇಳೆ ಬಾಲಕಿ ಶೆಡ್ ಒಳಗೆ ಹೋದಾಗ ಮೀಮ್ ಹೊರಗಿಂದ ಬಾಗಿಲನ್ನು ಲಾಕ್ ಮಾಡಿದ್ದಾಳೆ. ಬಾಲಕಿಯ ಪ್ರತಿರೋಧದ ನಡುವೆಯೂ ಶಾಹೀನ್ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆಂದು ದೂರಿನಲ್ಲಿ ತಿಳಿಸಲಾಗಿದೆ.ನನ್ನ ಬೆಳಿಗ್ಗೆ ಇಂದು ಬೆಳಿಗ್ಗೆ ಘಟನೆ ಬಗ್ಗೆ ತಿಳಿಸಿದಳು. ಕೂಡಲೇ ನಾವು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದವು. ಎಫ್‌ಐಆರ್ ದಾಖಲಾಗಿದ್ದರೂ ಪೊಲೀಸರು ಸ್ಥಳಕ್ಕೆ ಬರುವಷ್ಟರಲ್ಲಿ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ. ಮೀಮ್ ಮೇಲೆ ಪೊಲೀಸರು ಎಫ್‌ಐಆರ್ ದಾಖಲಿಸಬೇಕೆಂದು ನಾವು ಬಯಸಿದ್ದೆವು ಆದರೆ ಪೊಲೀಸರು ಒಪ್ಪಲಿಲ್ಲ. ಆರೋಪಿಯ ಸಹೋದರ ಹಸನ್ ನಮಗೆ ಹಣ ನೀಡುತ್ತೇನೆ, ದೂರು ಹಿಂಪಡೆಯಿರಿ ಎಂದು ಒತ್ತಡ ಹೇರುತ್ತಿದ್ದಾರೆ. ನಮಗೆ ನ್ಯಾಯ ಬೇಕು ಎಂದು ಸಂತ್ರಸ್ತೆ ಬಾಲಕಿ. ತಂದೆ ಹೇಳಿದ್ದಾರೆ.

ಘಟನೆಯ ಬಗ್ಗೆ ಪ್ರತಿಕ್ರಿಯೆ ನೀಡಿರುವ ಪೊಲೀಸರು ಆರೋಪಿಯ ವಿರುದ್ಧ ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ, ಶೀಘ್ರದಲ್ಲೇ ಬಂಧಿಸಲಾಗುವುದು ಎಂದು ಹೇಳಿದ್ದಾರೆ.

ವಲಸೆ ಕಾರ್ಮಿಕರ ಕಲ್ಯಾಣಕ್ಕಾಗಿ ಕೆಲಸ ಮಾಡುವ ಸ್ವರಾಜ್ ಇಂಡಿಯಾದ ಆರ್ ಕಲೀಮುಲ್ಲಾ ಮಾತನಾಡಿ, ಪೊಲೀಸರು ವಲಸೆ ಕಾರ್ಮಿಕರ ಶೆಡ್ ಗಳ ಮೇಲೆ ನಿಗಾ ಇಡಬೇಕು ಮತ್ತು ಅವರ ಸುರಕ್ಷತೆಯನ್ನು ಖಚಿತಪಡಿಸಬೇಕು ಎಂದು ಆಗ್ರಹಿಸಿದ್ದಾರೆ.


Share