ಮತ್ತೊಂದು ದುರಂತ: ಕೊಪ್ಪಳದಲ್ಲಿ ಆಟವಾಡುವಾಗ ಕಾಲು ಜಾರಿ ಬಾವಿಗೆ ಬಿದ್ದು ಬಾಲಕಿಯರು ನೀರುಪಾಲು

ಮತ್ತೊಂದು ದುರಂತ: ಕೊಪ್ಪಳದಲ್ಲಿ ಆಟವಾಡುವಾಗ ಕಾಲು ಜಾರಿ ಬಾವಿಗೆ ಬಿದ್ದು ಬಾಲಕಿಯರು ನೀರುಪಾಲು

Share

ಕೊಪ್ಪಳ: ರಾಜ್ಯದಲ್ಲಿ ಇತ್ತೀಚಿನ ದಿನಗಳಲ್ಲಿ ಮಕ್ಕಳು ನೀರುಪಾಲಾಗುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿದ್ದು ಇದೀಗ ಕೊಪ್ಪಳದಲ್ಲಿ ಇಬ್ಬರು ಬಾಲಕಿಯರು ನೀರುಪಾಲಾಗಿರುವ ದಾರುಣ ಘಟನೆ ನಡೆದಿದೆ.

ಕೊಪ್ಪಳ ತಾಲ್ಲೂಕಿನ ಜಿನ್ನಾಪುರ ತಾಂಡಾದ ಹೊರವಲಯದಲ್ಲಿರುವ ಕೃಷಿ ಜಮೀನಿನಲ್ಲಿದ್ದ ಬಾವಿಯಲ್ಲಿ ಮುಳುಗಿ 11 ವರ್ಷದ ಸೌಂದರ್ಯ ರತ್ನಪ್ಪ ಪೂಜಾರ ಹಾಗೂ 10 ವರ್ಷದ ಲಕ್ಷ್ಮಿ ಶರಣಪ್ಪ ಪೂಜಾರ ಮೃತಪಟ್ಟಿದ್ದಾರೆ.

ಮೃತ ಬಾಲಕಿಯರ ಕುಟುಂಬ ತಾಂಡಾದ ಹೊರವಲಯದ ಹೊಲದಲ್ಲಿ ನೆಲೆಸಿದ್ದರು. ತಮ್ಮದೇ ತೋಟದ ಮನೆ ಬಳಿಯಿದ್ದ ಬಾವಿ ಬಳಿ ಆಡವಾಡಲು ಹೋಗಿದ್ದಾಗ ಇಬ್ಬರು ಬಾಲಕಿಯರು ಕಾಲು‌ ಜಾರಿ ಬಾವಿಯಲ್ಲಿ ಬಿದ್ದು ಮೃತಪಟ್ಟಿದ್ದಾರೆ.ಅಗ್ನಿಶಾಮಕ ದಳ ಹಾಗೂ ಕೊಪ್ಪಳ ಗ್ರಾಮೀಣ ಠಾಣೆಯ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ, ಮೃತದೇಹ ತೆಗೆದಿದ್ದಾರೆ. ಈ ಕುರಿತು ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Share