ಕಬ್ಬಿಣದ ಗೇಟ್ ಹಾರಲು ಯತ್ನಿಸಿದ 10 ಅಡಿ ದೈತ್ಯ ಮೊಸಳೆ!

ಕಬ್ಬಿಣದ ಗೇಟ್ ಹಾರಲು ಯತ್ನಿಸಿದ 10 ಅಡಿ ದೈತ್ಯ ಮೊಸಳೆ!

Share

ಲಖನೌ: ದಾರಿ ತಪ್ಪಿ ಊರಿನೊಳಗೆ ಬಂದಿದ್ದ ದೈತ್ಯ ಮೊಸಳೆಯೊಂದು ಕಬ್ಬಿಣದ ಗೇಟ್ ಹಾರಲು ಯತ್ನಿಸುತ್ತಿರುವ ವಿಡಿಯೋವೊಂದು ವ್ಯಾಪಕ ವೈರಲ್ ಆಗಿದೆ.

ಉತ್ತರ ಪ್ರದೇಶದ ಬುಲಂದ್ಶಹರ್ನ ನರೋರಾ ಘಾಟ್ ಬಳಿ ಈ ಘಟನೆ ನಡೆದಿದ್ದು, ಕಾಲುವೆಯ ಗೇಟ್‌ ದಾಟಿ ಜನ ನಿಬಿಡ ಪ್ರದೇಶಕ್ಕೆ ಬಂದಿದ್ದ ಸುಮಾರು 10 ಅಡಿ ಉದ್ದದ ಮೊಸಳೆ ಮರಳಿ ನೀರಿನತ್ತ ತೆರಳಲು ಪ್ರಯತ್ನಪಡುವ ದೃಶ್ಯ ವೈರಲ್‌ ಆಗಿದೆ.

ಗಂಗಾ ಕಾಲುವೆಯಿಂದ ಆಕಸ್ಮಿಕವಾಗಿ ಹೊರಗೆ ಬಂದ ಈ ಬೃಹತ್‌ ಗಾತ್ರದ ಮೊಸಳೆ ನರೋರಾ ಬ್ಯಾರೇಜ್ ಕೆಳಗಿನ ಗಂಗಾ ನದಿಗೆ ಹಾರಲು ಪ್ರಯತ್ನಿಸುತ್ತಿರುವುದು ಕ್ಯಾಮೆರಾದಲ್ಲಿ ಸೆರೆಯಾಗಿದೆ.ಅಲ್ಲೇ ಸಮೀಪದಲ್ಲಿರುವ ಅಧಿಕಾರಿಯೊಬ್ಬರು ದೊಣ್ಣೆ ಹಿಡಿದು ಮೊಸಳೆ ಜನರತ್ತ ಬರದಂತೆ ನೋಡಿಕೊಳ್ಳುತ್ತಿದ್ದಾರೆ. ಬಳಿಕ ಅರಣ್ಯ ಇಲಾಖೆ ಸಿಬ್ಬಂದಿ ಮತ್ತು ಪೊಲೀಸರು ಆಗಮಿಸಿ ಅದನ್ನು ಸುರಕ್ಷಿತವಾಗಿ ನೀರಿಗೆ ಬಿಟ್ಟಿದ್ದಾರೆ.ನಾಲ್ವರು ಅರಣ್ಯ ಅಧಿಕಾರಿಗಳು ಮೊಸಳೆಯ ತಲೆ ಮತ್ತು ಮುಂಭಾಗದ ಕಾಲುಗಳನ್ನು ಬಿಗಿದಿರುವ ಹಗ್ಗಗಳನ್ನು ಹಿಡಿದರು. ಈ ವೇಳೆ ಇನ್ನೊಬ್ಬ ಅಧಿಕಾರಿ ಅದರ ಹಿಂದಿನ ಕಾಲುಗಳಿಗೆ ಹಗ್ಗವನ್ನು ಸುತ್ತಿದರು. ಇಬ್ಬರು ಮೊಸಳೆಯ ಬಾಲವನ್ನು ಎತ್ತಿಕೊಂಡರು. ಹೀಗೆ ಕೆಲವು ಗಂಟೆಗಳ ಕಾರ್ಯಾಚರಣೆ ಬಳಿಕ ಮೊಸಳೆಯನ್ನು ಸುರಕ್ಷಿತವಾಗಿ ನೀರಿಗೆ ಬಿಡಲಾಯಿತು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.


Share