ಆಟೋ ಚಾಲಕರು ತನ್ನ ಕುಟುಂಬದ ಜವಾಬ್ದಾರಿಯನ್ನು ಮನಗಂಡು ರಸ್ತೆ ಮೇಲೆ ಎಚ್ಚರಿಕೆಯಿಂದ ಚಾಲನೆ ಮಾಡಬೇಕು.

ಆಟೋ ಚಾಲಕರು ತನ್ನ ಕುಟುಂಬದ ಜವಾಬ್ದಾರಿಯನ್ನು ಮನಗಂಡು ರಸ್ತೆ ಮೇಲೆ ಎಚ್ಚರಿಕೆಯಿಂದ ಚಾಲನೆ ಮಾಡಬೇಕು.

Share

ಸ್ವಲ್ಪ ಯಾಮಾರಿದರೆ ಇಡೀ ಕುಟುಂಬವೇ ಬೀದಿಗೆ ಬರುತ್ತದೆ ಎಂಬುದನ್ನು ಅರಿತಿರಬೇಕು ಎಂದು ವೃತ್ತ ನಿರೀಕ್ಷಕರಾದ ಎಂ.ಶ್ರೀನಿವಾಸ್ ಅವರು ತಿಳಿಸಿದರು.

ನಗರದ ನಗರ ಪೋಲಿಸ್ ಠಾಣೆಯಲ್ಲಿ ಚಿಕ್ಕಬಳ್ಳಾಪುರ ಜಿಲ್ಲಾ ಪೋಲಿಸ್ ಚಿಂತಾಮಣಿ ಉಪ ವಿಭಾಗ ಶಿಡ್ಲಘಟ್ಟ ವೃತ್ತ ಹಾಗೂ ಶಿಡ್ಲಘಟ್ಟ ನಗರ ಪೋಲಿಸ್ ಠಾಣೆ ವತಿಯಿಂದ ಆಯೋಜಿಸಿದ್ದ ಆಟೋ ಚಾಲಕರಿಗೆ ಕಾನೂನುಗಳ ಅರಿವು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು .

ಆಟೋ ಚಾಲಕರು ಕಡ್ಡಾಯವಾಗಿ ಖಾಕಿ ಸಮವಸ್ತ್ರ ಧರಿಸಿ, ರಸ್ತೆ ಸಂಚಾರಿ ನಿಯಮ ಪಾಲನೆ ಮಾಡಿ, ಸಮಚಿತ್ತದಿಂದ ವಾಹನ ಚಾಲನೆ ಮಾಡಬೇಕು. ಹಾಗೂ ತನ್ನ ಮತ್ತು ಇತರ ಪ್ರಯಾಣಿಕರ ಜೀವಗಳನ್ನು ರಕ್ಷಣೆ ಮಾಡುವುದಲ್ಲದೇ ವಾಹನದಲ್ಲಿ ನಿಗದಿತ ಮತ್ತು ಸಾಮರ್ಥ್ಯ‌ ಇದ್ದಷ್ಟು ಮಾತ್ರ ಪ್ರಯಾಣಿಕರನ್ನು ಒಯ್ಯಬೇಕು. ಈ ಮೂಲಕ ತಾನೂ ಬದುಕಬೇಕು. ಇತರರನ್ನು ಬದುಕಿಸಬೇಕು ಎಂಬ ಭಾವನೆಯಿಂದ ತಾವು ಆಟೋ ಚಾಲನೆ ಮಾಡಬೇಕು ಎಂದು ಕಿವಿ ಮಾತು ಹೇಳಿದರು.

ಒಂದೇ ರಸ್ತೆಯಲ್ಲಿ ಪಾದಚಾರಿಗಳು, ದ್ವಿಚಕ್ರ ವಾಹನ, ಬೈಸಿಕಲ್‌, ಆಟೋ, ಕಾರು, ಭಾರಿ ವಾಹನಗಳ ಮಧ್ಯೆ ಮನುಷ್ಯರು ಚಲಿಸುತ್ತಾರೆ. ಹೀಗೆ ಜನದಟ್ಟಣೆಯ ಪರಿಸ್ಥಿತಿಯಲ್ಲಿ ರಸ್ತೆ ನಿಯಮ ಕಡ್ಡಾಯ ಪಾಲಿಸಲೇಬೇಕು. ಇಲ್ಲವಾದರೆ ಜೀವಕ್ಕೆ ಹಾನಿ ಉಂಟಾಗಬಹುದು ಎಚ್ಚರಿಕೆಯಿಂದ ತಾವು ವಾಹನ ಚಾಲನೆ ಮಾಡಬೇಕು ಎಂದರು.

ಏಡಭಾಗ ಮಾತ್ರ ನಮ್ಮದು, ರಹಸ್ಯ ತಿರುವು ಅಪಘಾತ ಸಂಭವಿಸುವ ಅಪಾಯದ ತಿರುವುಗಳು, ಸೇತುವೆ, ಅಂಕು ಡೊಂಕಾದ ರಸ್ತೆ, ಯೂ ಟರ್ನ್‌, ತಿರುವು ಮುರುವ ರಸ್ತೆ, ಇಳಿಜಾರು, ಎತ್ತರದ ರಸ್ತೆ, ಹೀಗೆ ಹಲವು ರೀತಿಯ ರಸ್ತೆ ಸಂಚಾರದ ನಾಮಫಲಕ ಪಾಲಿಸಿದರೆ ಮಾತ್ರ ರಸ್ತೆ ಅಪಘಾತ ತಪ್ಪುತ್ತವೆ. ಶಾಲೆ, ನ್ಯಾಯಾಲಯ, ಆಸ್ಪತ್ರೆಗಳ ಬಳಿ ಶಬ್ದ ಮಾಡಬಾರದು ಎಂದು ವಿವರಿಸಿದರು.

ಈ ಸಂದರ್ಭದಲ್ಲಿ ನಗರ ಠಾಣೆ ಪಿಎಸ್ಐ ಎಂ.ವೇಣುಗೋಪಾಲ್ ,ಅಪರಾಧ ವಿಭಾಗದ ಪಿಎಸ್ಐ ಟಿ.ವೆಂಕಟರಮಣ ,ಮುಖ್ಯಪೇದೆ ಅಶ್ವಥ್ ,ಠಾಣೆ ಬರಹಗಾರರಾದ ಶಿವಕುಮಾರ್ ,ಅಂಬರೀಶ್ ,ಮಕ್ಸೂದ್ , ಸೇರಿದಂತೆ ಆಟೋ ಚಾಲಕರ ಸಂಘದ ಅಧ್ಯಕ್ಷ ಅಪ್ಪು ಸೇರಿದಂತೆ ನಗರದ ಎಲ್ಲಾ ಆಟೋ ಚಾಲಕರು ಹಾಜರಿದ್ದರು…


Share