ಜೇವರ್ಗಿ ಮತ್ತು ಯಡ್ರಾಮಿ ತಾಲೂಕಿನ ಕೂಲಿ ಕಾರ್ಮಿಕರನ್ನು ವಂಚಿಸಿ ಲೂಟಿ ಮಾಡುವ ಅಭಿಯಂತರರು ಹಾಗು ಅಧಿಕಾರಿಗಳನ್ನು ಸಸ್ಪೆಂಡ್ ಮಾಡಬೇಕು ಡಾ. ಮಲ್ಲಿಕಾರ್ಜುನ್ ನಾಯ್ಕೋಡಿ. ಜಿಲ್ಲಾ ಪಂಚಾಯತ್ ಕಾರ್ಯ ನಿರ್ವಾಹಕ ಅಧಿಕಾರಿಗಳಿಗೆ ಹಾಗೂ ಸರ್ಕಾರಕ್ಕೆ ಆಗ್ರಹ……
ಜೆವರ್ಗಿ ಮತ್ತು ಯಡ್ರಾಮಿ ತಾಲೂಕಿನ ಪಂಚಾಯತಗಳಲ್ಲಿ ಜವಾನನಿಂದ ಹಿಡಿದು ಅಭಿಯಂತರರು ಹಾಗೂ ಗ್ರಾಮ ಪಂಚಾಯತ್ ಅಧಿಕಾರಿಗಳು ಹಾಗೂ ಕೆಲ ಮಧ್ಯವರ್ತಿಗಳ ಕುಮ್ಮಕ್ಕಿನಿಂದ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಹೆಸರಿನ ಮೇಲೆ ಸೃಷ್ಟಿಯಾದ ಉದ್ಯೋಗ ಖಾತ್ರಿ ಯೋಜನೆಯ ಹೆಸರಿನಲ್ಲಿ ಸರ್ಕಾರದ ಖಜಾನೆಯನ್ನು ಲೂಟಿ ಮಾಡುವ ಕಾಯಕ ಹಾಡು ಹಗಲಿನಲ್ಲಿ ನಡೆಯುತ್ತಿರುವುದು ಹಾಗೂ ರಾಷ್ಟ್ರಪಿತ ಮಹಾತ್ಮ ಗಾಂಧೀ ಉದ್ಯೋಗ ಖಾತ್ರಿ ಯೋಜನೆಯ ಹೆಸರಿನಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರಿಗೆ ಸಲ್ಲುವ ಗೌರವವಲ್ಲವೆಂದು ಈ ಸಂದರ್ಭದಲ್ಲಿ ಡಾ ಮಲ್ಲಿಕಾರ್ಜುನ್ ನಾಯ್ಕೋಡಿ ಆಗ್ರಹಿಸಿದರು ಅದೇ ರೀತಿಯಾಗಿ ಸಾವಿರಾರು ಬಡ ಜನರಿಗೆ ಸೇರಬೇಕಾದ ಸರಕಾರಿ ಸವಲತ್ತುಗಳನ್ನು ಮಹಾತ್ಮ ಗಾಂಧೀಜಿ ಉದ್ಯೋಗ ಖಾತ್ರಿ ಯೋಜನೆಯ ಹೆಸರಿನಲ್ಲಿ ಲೂಟಿಯಾಗುತ್ತಿದೆ ಹಾಗೂ ದೇಶಕ್ಕಾಗಿ ಹೋರಾಡಿದ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ
ಹೆಸರಿಗೆ ಮಶೀ ಬಳೆಯುವ ಕೆಲಸ ನಡೆಯುತ್ತಿರುವುದು ವಿಷಾದಕರ ಸಂಗತಿ ಇಂಥ ಅನಧಿಕೃತ ಕೆಲಸದಲ್ಲಿ ಭಾಗಿಯಾದ ಅಧಿಕಾರಿಗಳನ್ನು ದೇಶದ್ರೋಹಿಗಳೆಂದು ಸರ್ಕಾರ ಪರಿಗಣಿಸಬೇಕು. ಯಾಕೆಂದರೆ ಒಬ್ಬ ಭಯೊತ್ಪಾದಕ ಒಬ್ಬ ದೇಶದ್ರೋಹಿ ನೂರಾರು ಜನರನ್ನು ಬಾಂಬ ಹಾಕಿ ಸಾಯಿಸಿದರೆ. ಅದೇ ರೀತಿಯಾಗಿ ಒಬ್ಬ ಭ್ರಷ್ಟ ಲಂಚ ಬಾಕ ಅಧಿಕಾರಿ ಲಕ್ಷಾಂತರ ಜನರಿಗೆ ಸಿಗಬೇಕಾದ ಸರ್ಕಾರಿ ಸೌಲಭ್ಯಗಳನ್ನು ಲೂಟಿ ಮಾಡುತ್ತಾನೆ ಆದ್ದರಿಂದ ಲಕ್ಷಾಂತರ ಜನರಿಗೆ ಆರ್ಥಿಕವಾಗಿ ವಂಚಿತರನ್ನಾಗಿ ಮಾಡುವುದಲ್ಲದೆ ನಮ್ಮ ದೇಶವನ್ನು ಆರ್ಥಿಕವಾಗಿ ಹಿಂದುಳಿಯಲು ಪ್ರಮುಖ ಕಾರಣವೆಂದು ಪರಿಗಣಿಸಿ ಭ್ರಷ್ಟಾಚಾರಿಗಳನ್ನು ದೇಶದ್ರೋಹಿಗಳೆಂದು ಪರಿಗಣಿಸಬೇಕೆಂದು ಸರ್ಕಾರಕ್ಕೆ ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಕರ್ನಾಟಕ ರಾಜ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯ ಸಹ ಸಂಘಟನಾ ಕಾರ್ಯದರ್ಶಿ ಡಾಕ್ಟರ್ ಮಲ್ಲಿಕಾರ್ಜುನ್ ನಾಯ್ಕೋಡಿ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ