ಕಾರ್ಕಳ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಸಂದರ್ಭ ಸಾಣೂರು ನಲ್ಲಿ ಬಸ್ಸು ನಿಲ್ದಾಣಕ್ಕೆ ಜಾಗ ಕಾದಿರಿಸದೆ ಇರುವುದರಿಂದ ಪ್ರಯಾಣಿಕರು ರಸ್ತೆಯಲ್ಲಿ ಬಿಸಿಲು ಮಳೆಗೆ ಮೈಯೊಡ್ಡಿ ನಿಲ್ಲುವ ಕಠಿಣ ಪರಿಸ್ಥಿತಿ ಉಂಟಾಗಿದೆ. ಸಾ ಣೂರು ಗ್ರಾಮದ ಪುಲ್ಕರಿ ಬೈಪಾಸನಿಂದ ಮರತಂಗಡಿ ಸಾಣೂರು ಪದವಿಪೂರ್ವ ಕಾಲೇಜಿನವರೆಗೆ ಸಾಣೂರು ಸೇತುವೆ ಬಳಿ ಸುಮಾರು 500 ಮೀಟರ್ ಹೊರತುಪಡಿಸಿ ರಾಷ್ಟ್ರೀಯ ಹೆದ್ದಾರಿ 4 ಬೃಹತ್ ಹೆದ್ದಾರಿ ನಿರ್ಮಾಣ ಕಾರ್ಯ ಬಹುತೇಕ ಪೂರ್ಣಗೊಂಡಿದ್ದು ಹಳೆ ಬಸ್ಸು ಮತ್ತು ರಿಕ್ಷಾ ನಿಲ್ದಾಣಗಳನ್ನು ಸಂಪೂರ್ಣವಾಗಿ ಕೆಡವಿ ರಸ್ತೆ ವಿಸ್ತರಣೆ ಮಾಡುವುದರಿಂದ ಕಳೆದ ಎರಡು ವರ್ಷಗಳಿಂದ ಬಸ್ ಪ್ರಯಾಣಿಕರು ಹಾಗೂ ರಿಕ್ಷಾ ಚಾಲಕರು ಬಿಸಿಲು ಮಳೆಗೆ ಯಾವುದೇ ರಕ್ಷಣೆ ಇಲ್ಲದೆ ಬಸ್ಸಿಗಾಗಿ ನಡು ರಸ್ತೆಯಲ್ಲಿ ಕಾಯಬೇಕಾದ ಪರಿಸ್ಥಿತಿ ಉಂಟಾಗಿದೆ. ಅದಕ್ಕಿನ್ನು ಪರಿಹಾರ ಸಿಕ್ಕಿಲ್ಲ ಈ ಸಂದರ್ಭ ದಲ್ಲಿ ಮಾತನಾಡಿದ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಉದಯ ಕೋಟಿಯನ್ ಹೈವೇ ಕಾಮಗಾರಿಕೆ ಆಮೆ ಗತಿಯಿಂದ ಸಾಗುತ್ತಿದೆ. ಇದರ ಮೊದಲು ಇದ್ದ ಪ್ರಯಾಣಿಕರಿಗೆ ಮಾಡಿದಂತಹ ಉತ್ತಮ ವ್ಯವಸ್ಥೆ ಹೈವೇ ಕಾಮಗಾರಿಕೆಯವರು ತೆಗೆದುಹಾಕಿದ್ದಾರೆ ಇದರಿಂದ ಸಾರ್ವಜನಿಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ತುಂಬ ಸಮಸ್ಯೆಯಾಗುತ್ತಿದೆ. ಅದಲ್ಲದೆ ರಸ್ತೆ ಅಗಲೀಕರಣ ಮಾಡುವ ಸಂದರ್ಭದಲ್ಲಿ ತೆರವುಗೊಳಿಸಬೇಕಾದ ವಿದ್ಯುತ್ ಕಂಬಗಳು ರಸ್ತೆ ಮಧ್ಯದಲ್ಲಿ ಇನ್ನು ಹಾಗೆ ಇವೆ ಇದರಿಂದ ಹಲವಾರು ಅಪಘಾತಗಳು ಸಂಭವಿಸಿದೆ. ಆದುದರಿಂದ ರಸ್ತೆ ಕಾಮಗಾರಿಕೆಯನ್ನು ವಹಿಸಿಕೊಂಡ ಗುತ್ತಿಗೆದಾರರು ಆದಷ್ಟು ಬೇಗ ರಸ್ತೆ ಕಾಮಗಾರಿಕೆಯನ್ನು ಪೂರ್ಣಗೊಳಿಸಿ, ಇಲ್ಲಿ ಉಂಟಾಗಿರುವ ಸಮಸ್ಯೆಗೆ ಪೂರ್ಣ ವಿರಾಮ ಹಾಕಬೇಕೆಂದು ಮಾಧ್ಯಮದ ಮೂಲಕ ವಿನಂತಿಸುತ್ತೇನೆ ಎಂದು ಹೇಳಿದರು.
