ಅನಾರೋಗ್ಯದ ವದಂತಿ ತಳ್ಳಿಹಾಕಿದ ಒಡಿಶಾ ಸಿಎಂ: ಪ್ರಧಾನಿ ಮೋದಿ ಹೇಳಿಕೆಗೆ ಪಟ್ನಾಯಕ್ ಪ್ರತಿಕ್ರಿಯೆ ಹೀಗಿದೆ..

ಅನಾರೋಗ್ಯದ ವದಂತಿ ತಳ್ಳಿಹಾಕಿದ ಒಡಿಶಾ ಸಿಎಂ: ಪ್ರಧಾನಿ ಮೋದಿ ಹೇಳಿಕೆಗೆ ಪಟ್ನಾಯಕ್ ಪ್ರತಿಕ್ರಿಯೆ ಹೀಗಿದೆ..

Share

ಭುವನೇಶ್ವರ್: ಒಡಿಶಾ ಸಿಎಂ ನವೀನ್ ಪಟ್ನಾಯಕ್ ತಮ್ಮ ಆರೊಗ್ಯದ ಬಗ್ಗೆ ಕೇಳಿಬರುತ್ತಿರುವ ವದಂತಿಗಳನ್ನು ತಳ್ಳಿಹಾಕಿದ್ದಾರೆ.

ತಮ್ಮ ಆರೋಗ್ಯ ಉತ್ತಮವಾಗಿದೆ ಎಂದು ಹೇಳಿರುವ ಪಟ್ನಾಯಕ್ ತಾವು ಸಕ್ರಿಯವಾಗಿ ಲೋಕಸಭಾ ಚುನಾವಣೆ, ವಿಧಾನಸಭಾ ಚುನಾವಣೆಗಳಲ್ಲಿ ಪ್ರಚಾರ ಮಾಡುತ್ತಿರುವುದಾಗಿ ಹೇಳಿದ್ದಾರೆ.ಪ್ರಧಾನಿ ಮೋದಿ ಒಡಿಶಾದಲ್ಲಿ ಸಾರ್ವಜನಿಕ ಸಭೆಯಲ್ಲಿ ಮಾತನಾಡುವಾಗ ನವೀನ್ ಪಟ್ನಾಯಕ್ ಅವರಿಗೆ ಅನಾರೋಗ್ಯ ಇದ್ದು ಇದರ ಹಿಂದೆ ಪಿತೂರಿ ನಡೆಯುತ್ತಿದೆ ಬಿಜೆಪಿ ಸರ್ಕಾರ ಒಡಿಶಾದಲ್ಲಿ ಅಸ್ತಿತ್ವಕ್ಕೆ ಬಂದಲ್ಲಿ ಈ ಪಿತೂರಿ ಬಗ್ಗೆ ತನಿಖೆ ನಡೆಸಲು ಸಮಿತಿ ರಚಿಸುವುದಾಗಿ ಹೇಳಿದ್ದರು.ಪ್ರಧಾನಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ನವೀನ್ ಪಟ್ನಾಯಕ್, ಪ್ರಧಾನಿ ನರೇಂದ್ರ ಮೋದಿ ತಮ್ಮನ್ನು ಅವರ ಉತ್ತಮ ಸ್ನೇಹಿತ ಎಂದು ಸಾರ್ವಜನಿಕವಾಗಿ ಹೇಳಿದ್ದಾರೆ. ಈ ರೀತಿ ಇದ್ದಾಗ ತಮಗೆ ಅವರು ಕರೆ ಮಾಡಿ ಆರೋಗ್ಯದ ಬಗ್ಗೆ ವಿಚಾರಿಸಬಹುದಿತ್ತು. ಆದರೆ ಒಡಿಶಾದಲ್ಲಿರುವ ಹಲವು ಬಿಜೆಪಿಗರು ಹಾಗೂ ದೆಹಲಿಯಲ್ಲಿರುವವರು ನನ್ನ ಆರೋಗ್ಯದ ಬಗ್ಗೆ ವದಂತಿ ಹಬ್ಬಿಸುತ್ತಿದ್ದಾರೆ ಎಂದು ಹೇಳಿದ್ದಾರೆ.”ನಾನು ಪರಿಪೂರ್ಣ ಆರೋಗ್ಯ ಹೊಂದಿದ್ದೇನೆ ಮತ್ತು ಕಳೆದ ಒಂದು ತಿಂಗಳಿನಿಂದ ನಾನು ರಾಜ್ಯದಲ್ಲಿ ಪ್ರಚಾರ ಮಾಡುತ್ತಿದ್ದೇನೆ ಎಂದು ಪ್ರಧಾನಿಗೆ ಭರವಸೆ ನೀಡುತ್ತೇನೆ” ಎಂದು ಪಟ್ನಾಯಕ್ ಹೇಳಿದರು.


Share