ಬೆಂಗಳೂರು ಗ್ರಾಮಾಂತರ: ಬೈಕ್ ಟಚ್ ಮಾಡಿದ್ದನ್ನು ಪ್ರಶ್ನಿಸಿದಕ್ಕೆ ಹಿಂದೂ ಯುವಕನ ಮೇಲೆ ಮುಸ್ಲಿಂ ಯುವಕರಿಂದ ಹಲ್ಲೆ

ಬೆಂಗಳೂರು ಗ್ರಾಮಾಂತರ: ಬೈಕ್ ಟಚ್ ಮಾಡಿದ್ದನ್ನು ಪ್ರಶ್ನಿಸಿದಕ್ಕೆ ಹಿಂದೂ ಯುವಕನ ಮೇಲೆ ಮುಸ್ಲಿಂ ಯುವಕರಿಂದ ಹಲ್ಲೆ

Share

ಬೆಂಗಳೂರು ಗ್ರಾಮಾಂತರ: ರಾಜ್ಯದಲ್ಲಿ ಮುಸ್ಲಿಂ ಯುವಕರ ದಾಂಧಲೆ, ಹಲ್ಲೆ ದಿನ ಕಳೆದಂತೆ ಹೆಚ್ಚಾಗುತ್ತಿದೆ. ಮಂಡ್ಯದ ಬೆಂಗಳೂರಿನಲ್ಲಿ ಹಿಂದೂ ಯುವಕರ ಮೇಲೆ ಹಲ್ಲೆ ಬಳಿಕ ಇದೀಗ ನೆಲಮಂಗಲ ತಾಲೂಕಿನ ದಾಬಸ್ ಪೇಟೆ ಬಳಿ ಬೈಕ್ ಹ್ಯಾಂಡಲ್ ಟಚ್ ಆಗಿದನ್ನು ಪ್ರಶ್ನೆ ಮಾಡಿದ್ದಕ್ಕೆ ಹಿಂದೂ ವ್ಯಕ್ತಿ ಮೇಲೆ ಇಬ್ಬರು ಮುಸ್ಲಿಂ ಯುವಕರು ಹಲ್ಲೆ ಮಾಡಿರುವ ಘಟನೆ ನಡೆದಿದೆ.

ಬಿಲ್ಲಿನಕೋಟೆ ಗ್ರಾಮದ ಶ್ರೀನಿವಾಸಮೂರ್ತಿ ಕಾರಿಗೆ ಮುಸ್ಲಿಂ ಯುವಕರಿದ್ದ ಬೈಕ್ ಟಚ್ ಆಗಿತ್ತು. ಇದನ್ನು ಪ್ರಶ್ನಿಸಿದ್ದಕ್ಕೆ ನದೀಮ್, ಇಮ್ರಾನ್ ಸೇರಿ ಮತ್ತೊಬ್ಬ ಹಲ್ಲೆ ನಡೆಸಿದ್ದಾರೆ. ಅಷ್ಟಕ್ಕೆ ಸುಮ್ಮನಾಗದೇ ಶ್ರೀನಿವಾಸ್ ಮೂರ್ತಿಗೆ ಸೇರಿದ ಅಂಗಡಿಗೂ ನುಗ್ಗಿ ದಾಂಧಲೆ ನಡೆಸಿದ್ದಾರೆ.ಸದ್ಯ ಗಾಯಗೊಂಡಿರುವ ಶ್ರೀನಿವಾಸ ಮೂರ್ತಿಗೆ ದಾಬಸ್ ಪೇಟೆ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಮುಂಜಾಗ್ರತ ಕ್ರಮವಾಗಿ ಸ್ಥಳದಲ್ಲಿ ಹೆಚ್ಚಿಗೆ ಪೊಲೀಸರನ್ನು ನಿಯೋಜನೆ ಮಾಡಲಾಗಿದ್ದು, ಸ್ಥಳಕ್ಕೆ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ಆಗಮಿಸಿ ಪರಿಶೀಲನೆ ನಡೆಸಿದರು. ಈ ಕುರಿತು ದಾಬಸ್ ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Share