ಗಂಗಾವತಿ:
ಕೊಪ್ಪಳ ಮತ್ತು ರಾಯಚೂರು ಜಿಲ್ಲೆಗಳು ಯುಗಗಳಷ್ಟು ಇತಿಹಾಸಿಕ ಚರಿತ್ರೆಯನ್ನು ಹೊಂದಿದೆ. ಈ ಭಾಗದ ಕಿಷ್ಕಿಂಧೆಯಲ್ಲಿ ಮಯರ್ಾದಾ ಪುರುಷೋತ್ತಮ ಶ್ರೀರಾಮಚಂದ್ರ ಓಡಾಡಿದ್ದ ಎಂಬುವುದು ರಾಮಾಯಣದಂತ ಕೃತಿಯಿಂದ ವೇದ್ಯವಾಗುತ್ತದೆ.
ಹೀಗಾಗಿ ಶ್ರೀರಾಮನ ಜನ್ಮ ಸ್ಥಾನ ಅಯೋಧ್ಯೆಗೂ ಮತ್ತು ಹನುಮ ಜನ್ಮ ಸ್ಥಾನ ಅಂಜನಾದ್ರಿ ಮಧ್ಯೆ ಕನೆಕ್ಟ್ ಆಗಬೇಕಾದರೆ ಗಂಗಾವತಿಯನ್ನು ಕೇಂದ್ರವನ್ನಾಗಿಸಿಕೊಂಡು ಐತಿಹಾಸಿಕ ಕಿಷ್ಕಿಂಧಾ ಜಿಲ್ಲೆ ರಚನೆಯಾಗಬೇಕು ಎಂದು ಮಂತ್ರಾಲಯದ ರಾಘವೇಂದ್ರ ಸ್ವಾಮೀಜಿಗಳ ಮಠದ ಪೀಠಾಧಿಪತಿ ಸುಭುದೇಂದ್ರ ತಿರ್ಥರು ಪ್ರತಿಪಾದಿಸಿದರು.
ನಗರದ ರಾಣಾ ಪ್ರತಾಪ್ಸಿಂಗ್ ವೃತ್ತದಲ್ಲಿರುವ ಅಮರಜ್ಯೋತಿ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಶ್ರೀಗಳು, ಗಂಗಾವತಿ ಕೇಂದ್ರವನ್ನಾಗಿಸಿಕೊಂಡು ನೂತನ ಜಿಲ್ಲೆ ಅಸ್ತಿತ್ವಕ್ಕೆ ತರುವುದು ಅತ್ಯಾಗತ್ಯವಾಗಿದೆ. ಈ ನಿಟ್ಟಿನಲ್ಲಿ ಸಕರ್ಾರ ಮತ್ತು ಹಾಲಿ-ಮಾಜಿ ಚುನಾಯಿತರು ಪ್ರಮಾಣಿಕ ಯತ್ನ ಮಾಡಬೇಕು.
ನೂತನ ಜಿಲ್ಲೆ ರಚನೆ ಬೇಡಿಕೆ ರಾಜಕೀಯವಾದದ್ದಲ್ಲ, ಐತಿಹಾಸಿಕ ಹಿನ್ನೆಲೆಯನ್ನು ಕಾಪಾಡಿಕೊಳ್ಳುವ ಉದ್ದೇಶಕ್ಕೆ ಹಾಗೂ ನಾಡಿನ ಚಾರಿತ್ರಿಕ ಘನತೆಯನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಹೊಸ ಕಿಷ್ಕಿಂಧಾ ಜಿಲ್ಲೆ ಪ್ರಸ್ತುತವಾಗಿದೆ.
ಗಂಗಾವತಿ ವ್ಯಾಪ್ತಿಗೆ ಕನಕಗಿರಿ, ಕಾರಟಗಿ, ತಾವರಗೇರಾ, ಕಂಪ್ಲಿಯನ್ನು ಒಟ್ಟುಗೂಡಿಸಿ ನೂತನ ಜಿಲ್ಲೆ ರಚನೆಯಾಗಬೇಕು ಎಂಬ ಕೂಗು ಈಗಾಗಲೆ ಎದ್ದಿದೆ. ಇದಕ್ಕೆ ಶ್ರೀಮಠದ ಸಂಪೂರ್ಣ ಸಹಕಾರವಿರುತ್ತದೆ. ಅಲ್ಲದೇ ಮಠದ ಅಪೇಕ್ಷೆಯೂ ಇದೆ.
ಹೀಗಾಗಿ ಭಾಗದ ಎಲ್ಲಾ ರಾಜಕೀಯ ಪಕ್ಷಗಳ ನಾಯಕರು, ಹಾಲಿ-ಮಾಜಿ ಚುನಾಯಿತರು ಸಂಘ-ಸಂಸ್ಥೆಗಳ ಪದಾಧಿಕಾರಿಗಳು ನೂತನ ಜಿಲ್ಲೆಗೆ ಪ್ರಮಾಣಿಕ ಯತ್ನ ಮಾಡಬೇಕು. ರಾಜ್ಯ ಸಕರ್ಾರ ಚಿಂತನೆ ಮಾಡಬೇಕು. ಈ ಸಂಬಂಧ ಶ್ರೀಮಠವೂ ಸಂಬಂಧಿತರ ಗಮನಕ್ಕೆ ತರುವ ಯತ್ನ ಮಾಡುತ್ತದೆ ಎಂದರು.
ಈ ಸಂದರ್ಭದಲ್ಲಿ ಮಾಜಿಶಾಸಕ ಪರಣ್ಣ ಮುನವಳ್ಳಿ, ಕಿಷ್ಕಿಂಧಾ ಜಿಲ್ಲಾ ಸಮಿತಿ ಮುಖ್ಯ ಸಂಚಾಲಕ ಸಂತೋಷ್ ಕೇಲೋಜಿ, ಸಂಚಾಲಕ ನಾಗರಾಜ್ ಗುತ್ತೇದಾರ, ಸ್ವಯಂಸೇವಕರಾದ ಶ್ರೀನಿವಾಸ ಎಂ.ಜೆ, ಪವನಕುಮಾರ ಗುಂಡೂರು ಇತರರಿದ್ದರು.