ಕಲಬುರಗಿ:- ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಅವರೇ ಬಂದು ಕೂದಲು ಕತ್ತರಿಸಲಿ ಎಂದು ಶಿಕ್ಷಣ ಸಚಿವರು ಮಧು ಬಂಗಾರಪ್ಪ ಅವರ ಹೇಳಿಕೆ ಈಗ. ರಾಜಕೀಯ ತಿರುವು ಪಡೆದಿದೆ . ೧೨ ನೇ ಶತಮಾನದ ವಿಶ್ವಗುರು ಬಸವಣ್ಣನವರ ಆಪ್ತಕಾರ್ಯದರ್ಶಿಯಾದ ನಿಜಸುಖಿ ಹಡಪದ ಅಪ್ಪಣ್ಣ ನವರ ಸಮಾಜಕ್ಕೆ ಮತ್ತು ಕ್ಷೌರಿಕ ವೃತ್ತಿಯನ್ನು ಕಾಯಕ ನಿಷ್ಠೆ ಶ್ರದ್ಧೆ ಆಸಕ್ತಿ ಹೊಂದಿದ್ದ ಸಮಾಜಕ್ಕೆ ಅಪಮಾನ.? ನಮ್ಮ ಪೂರ್ವಜರು ಅನಾದಿಕಾಲದಿಂದಲೂ ಕುಲ ಕಸುಬು ಆದ ಕ್ಷೌರಿಕ ವೃತ್ತಿಯನ್ನು ಅವಲಂಬಿಸಿ ಗ್ರಾಮೀಣ ಪ್ರದೇಶಗಳಲ್ಲಿ ಮಾಡುತ್ತಾ ಬಂದಿದ್ದಾರೆ. ಈ ಕ್ಷೌರ ವೃತ್ತಿಗೆ ಹಗುರವಾಗಿ ಮಾತನಾಡಿದ್ದು . ಈ ಕಾಯಕ ಸಮಾಜದ ವೃತ್ತಿಯನ್ನು ಮಾಡುವ ಬಂಧುಗಳಿಗೆ ಅಗೌರವ ತೋರಿದ ರಾಜ್ಯ ಕಾಂಗ್ರೆಸ್ ಸರ್ಕಾರದ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರಿಗೆ ತಿರುಗೇಟು ನೀಡಿರುವ ಕಲಬುರಗಿ ಜಿಲ್ಲೆಯ ಹಡಪದ ಅಪ್ಪಣ್ಣ (ಕ್ಷೌರಿಕ) ಸಮಾಜದ ಜಿಲ್ಲಾ ಸಂಘಟನಾ ಕಾರ್ಯದರ್ಶಿಗಳಾದ ಡಾ.ಮಲ್ಲಿಕಾರ್ಜುನ ಬಿ ಹಡಪದ ಸುಗೂರ ಎನ್ ಅವರು. ಬಾಜಾ -ಭಜಂತ್ರಿಯೊಂದಿಗೆ ನಿಮ್ಮ ಮನೆ ಬಾಗಿಲಿಗೆ ಬಂದು ತಲೆ ಕೂದಲು ಕತ್ತರಿಸಲು ನಾವು ಸಿದ್ದರಿದ್ದೇವೆ ಎಂದು ಸವಾಲು ಹಾಕಿದ್ದಾರೆ , ಮಧು ಬಂಗಾರಪ್ಪ ನವರು ನೀಡಿದ ಹೇಳಿಕೆ ನಮ್ಮ ಕ್ಷೌರಿಕರಿಗೆ ಕೂದಲು ಕತ್ತರಿಸಲು ಬಿಡುವಿಲ್ಲ ಎಂದು.? ಬಿಜೆಪಿ ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಅವರನ್ನು ಕರೆದಿದ್ದೀರಿ. ? ಅವರು ಹೆಸರು ಏಕೆ ಬಳಸಿ ರಾಜಕೀಯ ಮಾಡುತ್ತಿರಿ ? ನಿಮ್ಮ ನಿಮ್ಮ ವೈಯಕ್ತಿಕದ ರಾಜಕೀಯ ಮಾತು ನಿಮ್ಮಲ್ಲಿ ಇಟ್ಟುಕೊಳ್ಳುವುದು ಸೂಕ್ತ. ಯಾರನ್ನೂ ಮೆಚ್ಚುಸುಲು ಹೋಗಿ ನಿಮ್ಮ ಬಾಯಿಗೆ ಬಂದಂತೆ ಮಾತನಾಡಿ , ರಾಜಕೀಯ ಸಿಮ್ ಪತಿ (ಲಾಭ) ಪಡೆಯಲು ಹೋಗಿ ? ಸಣ್ಣ ಸಣ್ಣ ಸಮುದಾಯದ ಜನತೆಯ ಕೆಂಗಣ್ಣಿಗೆ ಗುರಿಯಾಗಿ. ಈ ಸಮಾಜದ ಜನತೆಯ ಮನಸ್ಸಿಗೆ (ಘಾಸಿ) ನೋವು ನೀಡುವುದು ಎಷ್ಟರ ಮಟ್ಟಿಗೆ ಸರಿ.ಸಚಿವರೆ.? ಈ ರೀತಿಯ ಬೇ ಜವಾಬ್ದಾರಿ ಹೇಳಿಕೆ ನೀಡಿ ಈ ಕ್ಷೌರಿಕ ವೃತ್ತಿಯನ್ನು ತುಂಬಾ (ಕನಿಷ್ಠ) ವಾಗಿ ಹಗುರವಾಗಿ ಮಾತನಾಡಿ ಈ ಕಾಯಕ ಸಮಾಜಕ್ಕೆ ಅಪಮಾನ ಮಾಡಿದ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರನ್ನು ಕೂಡಲೇ ರಾಜ್ಯ ಸಚಿವ ಸಂಪುಟದಿಂದ ಕೈ ಬಿಡಬೇಕು ಎಂದು ರಾಜ್ಯದ ಮುಖ್ಯಮಂತ್ರಿ ಸನ್ಮಾನ್ಯ ಶ್ರೀ ಸಿದ್ರಾಮಯ್ಯ ನವರಿಗೆ ಮನವಿ ಮಾಡಲಾಗುವುದು . ನಾವು ಕ್ಷೌರಿಕ ವೃತ್ತಿಯನ್ನು ಮಾಡುವವರು ಖಾಲಿ ಇದ್ದೇವೆ ಸಚಿವರೆ ತಾವು ದಿನಾಂಕ ನಿಗದಿಪಡಿಸಿ ನಾವೇ ಸ್ವತಃ ನಿಮ್ಮ ಮನೆಗೆ ಬಂದು ಕ್ಷೌರ ಸೇವೆ ಮಾಡುತ್ತೇವೆ. ನಮ್ಮ ಹಡಪದ ಅಪ್ಪಣ್ಣ (ಕ್ಷೌರಿಕ) ಸಮಾಜದ ಬಂಧುಗಳು ನಿಮ್ಮ ಮನೆ ಬಾಗಿಲಿಗೆ ಬಂದು ತಲೆ ಕೂದಲು ಕತ್ತರಿಸಲು ಸಿದ್ದರಿದ್ದೇವೆ ತಾವು ಒಂದು ದಿನ ಸಮಯವನ್ನು ನೀಡಿ ಡೇಟ್ ಪಿಕ್ಸ್ ಮಾಡಿ ಸಚಿವರೆ ಎಂದು ಹಡಪದ ಅಪ್ಪಣ್ಣ (ಕ್ಷೌರಿಕ) ಸಮಾಜದ ಸೇವಕ ಡಾ.ಮಲ್ಲಿಕಾರ್ಜುನ ಬಿ ಹಡಪದ ಸುಗೂರ ಎನ್ ಹೇಳಿದರು,