ಆಳಂದ:- ಶಾಲಾ ಕಾಲೇಜು, ಕುಟುಂಬ ಹಾಗೂ ಸಮಾಜದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳ ಪ್ರತಿಯೊಂದು ಸಾಧನೆಯನ್ನು ಗುರುತಿಸಿ ಅವರನ್ನು ಪ್ರೋತ್ಸಾಹಿಸುವ ವಾತಾವರಣ ತುಂಬಾ ಅಗತ್ಯವಾಗಿದೆ ಎಂದು ಹೀರೆಮಠದ ಪೀಠಾಧಿಪತಿ ಶ್ರೀ ಸಿದ್ದೇಶ್ವರ ಶಿವಾಚಾರ್ಯರು ಹೇಳಿದರು. ಪಟ್ಟಣದ ಹಿರೇಮಠದಲ್ಲಿ ಮಂಗಳವಾರ ಮಹಾಕಾಶಿ ಶಿಕ್ಷಣ ಕೇಂದ್ರದ 3 ನೇ ವರ್ಷದ ಬೇಸಿಗೆ ತರಬೇತಿ ಶಿಬಿರದ ಸಮಾರೋಪ ಸಮಾರಂಭದಲ್ಲಿ ಎಸ್.ಎಸ್ ಎಲ್.ಸಿ. ಪರೀಕ್ಷೆಯಲ್ಲಿ ಅತಿಹೆಚ್ಚುಅಂಕಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಜಾನಪದ ಪರಿಷತ್ತಿನ ತಾಲೂಕು ಅಧ್ಯಕ್ಷ ಅಪ್ಪಾಸಾಹೇಬ ತೀರ್ಥೆ ಮಾತನಾಡಿ ವಿದ್ಯಾರ್ಥಿಗಳಲ್ಲಿ ಶಿಕ್ಷಣದ ಜೊತೆಗೆ ಅವರಲ್ಲಿನ ಕಲೆ, ಸಂಗೀತ, ಮತ್ತಿತರ ಕ್ರಿಯಾಶೀಲ ಸಾಮರ್ಥ್ಯಗಳು ಬೆಳೆಸಲು ಮಹಾಕಾಶಿ ಶಿಕ್ಷಣ ಕೇಂದ್ರದ ಬೇಸಿಗೆ ಶಿಬಿರವು ಉಪಯುಕ್ತವಾಗಿದೆ ಎಂದರು. ಸಿದ್ಧಲಿಂಗ ಹಿರೇಮಠ ಶಾಲೆಯ ಕಾರ್ಯದರ್ಶಿ ಅಣ್ಣಾರಾವ ಪಾಟೀಲ್ ಪ್ರಾಂಶುಪಾಲ ಸಂಜಯ ಪಾಟೀಲ, ಮಹಾ ಕಾಶಿ ಶಿಕ್ಷಣ ಕೇಂದ್ರದ ನಿರ್ದೇಶಕ ಶಶಿಕಾಂತ ಫುಲಾರೆ, ಶಿಕ್ಷಕ ಲಖನ್ ಬಿ.ಕೆ., ಕಾಶಿನಾಥ ಮನ್ನೊಳ್ಳಿ, ವಿದ್ಯಾರ್ಥಿನಿ ಸೃಷ್ಟಿ ಮುನ್ನೊಳ್ಳಿ ಮಾತನಾಡಿದರು.
ಮುಖ್ಯ ಶಿಕ್ಷಕ ದೀಪಕ ಬಂಡಗೋಳೆ ಅಧ್ಯಕ್ಷತೆ ವಹಿಸಿದ್ದರು. ಲಾಡ್ಲೆಸಾಬ, ಪ್ರದೀಪ ಯಲಶೆಟ್ಟಿ, ಪರಮೇಶ್ವರ ಕಾಮನಳ್ಳಿ ಮುಂತಾದವರು ಉಪಸ್ಥಿತರಿದ್ದರು. 10ನೇ ತರಗತಿಯಲ್ಲಿ ಹೆಚ್ಚು ಅಂಕ ಪಡೆದ ಸೃಷ್ಟಿ ಕಾಶಿನಾಥ, ವಿಶಾಲಾಕ್ಷಿ ಪಾಟೀಲ, ವಿರೇಶ ನಿಂಬರ್ಗಿ, ಶೀತಲ ಗುಮಟೆ, ನಿಂಬೆಣ್ಣ ಬಿರಾದಾರ, ಪವನ ಹಾದಿಮನಿ, ಸುಯೋಗ ಬಂಡಗಾರ,ಪರಶುರಾಮ , ಐಶ್ವರ್ಯ ಅವರನ್ನು ಸತ್ಕರಿಸಲಾಯಿತು ಸಿದ್ಧಾರ್ಥ ಹಸೂರೆ ನಿರೂಪಿಸಿದರು. ಪರಮೇಶ್ವರ ಬೆಳಮಗಿ ವಂದಿಸಿದರು.