ದೆಹಲಿಯಲ್ಲಿ ದಾಖಲೆಯ ತಾಪಮಾನ; ಇಂದು 52.3 ಡಿಗ್ರಿ Celsius!

ದೆಹಲಿಯಲ್ಲಿ ದಾಖಲೆಯ ತಾಪಮಾನ; ಇಂದು 52.3 ಡಿಗ್ರಿ Celsius!

Share

ದೆಹಲಿ ಇತಿಹಾಸದಲ್ಲೇ ಕಂಡು ಕೇಳರಿಯದಷ್ಟು ಹೆಚ್ಚಿನ ತಾಪಮಾನವನ್ನು ಇಂದು ಕಂಡಿದೆ. 52.3 ಡಿಗ್ರಿ ಸೆಲ್ಷಿಯಸ್ ನಷ್ಟು ಉಷ್ಣಾಂಶ ದಾಖಲಾಗಿದೆ.

ಬಿಸಿಲಿನ ಝಳ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ದೆಹಲಿಯಲ್ಲಿ ವಿದ್ಯುತ್ ಬೇಡಿಕೆ 8,302 ಮೆಗಾ ವ್ಯಾಟ್ (ಎಂಡಬ್ಲ್ಯು)ಗಳಿಗೆ ಏರಿಕೆಯಾಗಿದೆ.Heatwave ನ್ನು ತಡೆದುಕೊಳ್ಳುವುದಕ್ಕಾಗಿ ಹೆಚ್ಚು ಹೆಚ್ಚು ನಿವಾಸಿಗಳು ವಿದ್ಯುತ್-ತೀವ್ರ ಹವಾನಿಯಂತ್ರಣವನ್ನು ಚಾಲೂ ಮಾಡುತ್ತಿದ್ದಾರೆ ಎಂದು ವಿದ್ಯುತ್ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ರಾಜಸ್ಥಾನದಲ್ಲಿ 51 ಡಿಗ್ರಿ ಸೆಲ್ಷಿಯಸ್ ತಾಪಮಾನ ದಾಖಲಾಗಿದೆ.

ರಾಜಸ್ಥಾನದಲ್ಲಿ ಸಿಡು ಬೇಸಿಗೆ ಇದ್ದು, ಬಿಎಸ್ ಎಫ್ ಯೋಧರು ಮರಳಿನಲ್ಲಿ ಹಪ್ಪಳ ರೋಸ್ಟ್ ಮಾಡುತ್ತಿರುವ ವಿಡಿಯೋ ಎಲ್ಲೆಡೆ ವರಲ್ ಆಗಿತ್ತು.


Share