ಗಂಗಾವತಿ: ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆಯಿಂದ ದಿನಬಳಕೆಯ ಆಹಾರ ಪದರ‍್ಥಗಳ ಬೆಲೆ ಏರಿಕೆಯ ಪರಿಣಾಮವಾಗಿ ಜನರ ಬದುಕಿನ ಮೇಲೆ ದುಷ್ಪರಿಣಾಮ ಬೀರಿದೆ. ಹಾಗಾಗಿ ಕೇಂದ್ರ ಮತ್ತು ರಾಜ್ಯ ರ‍್ಕಾರ ಪೆಟ್ರೋಲ್, ಡಿಸೆಲ್ ಅಗತ್ಯ ವಸ್ತುಗಳ ಬೆಲೆಯನ್ನು ಕೂಡಲೇ ಇಳಿಸಬೇಕೆಂದು ಸಿ.ಪಿ.ಐ.ಎಂ.ಎಲ್ ಲಿಬರೇಷನ್ ಪಕ್ಷದ ಜಿಲ್ಲಾ ಕರ‍್ಯರ‍್ಶಿ ವಿಜಯ್ ದೊರೆರಾಜು ರ‍್ಕಾರಕ್ಕೆ ಒತ್ತಾಯಿಸಿದರು.ಅವರು ಇಂದು ಸಿ.ಪಿ.ಐ.ಎಂ.ಎಲ್ ಲಿಬರೇಷನ್ ಪಕ್ಷದಿಂದ ರಾಜ್ಯಾಧ್ಯಂತ ಬೆಲೆ ಏರಿಕೆ ಕ್ರಮ ಖಂಡಿಸಿ ಪ್ರತಿಭಟನೆ ನಡೆಸಿದ್ದು, ಅದರಂತೆ ಪಕ್ಷದ ಕೊಪ್ಪಳ ಜಿಲ್ಲಾ ಸಮಿತಿಯಿಂದ ಜೂನ್-೨೯ ರಂದು ತಹಶೀಲ್ದಾರ ಮುಖಾಂತರ ರ‍್ಕಾರಕ್ಕೆ ಮನವಿ ಸಲ್ಲಿಸಿ ಮಾತನಾಡಿದರು.ಈ ಪ್ರತಿಭಟನೆಯಲ್ಲಿ ಹಿರಿಯ ಕಮ್ಯುನಿಸ್ಟ್ ಮುಖಂಡ ಭಾರಧ್ವಾಜ್ ಮಾತನಾಡಿ, ಜನಪರವಾಗಿರುವ ರ‍್ಕಾರ ಎಂಬ ನಂಬುಗೆ ಇಟ್ಟುಕೊಂಡಿರುವ ರ‍್ಕಾರವೇ ಇಂದು ಪೆಟ್ರೋಲ್, ಡೀಸೆಲ್ ಮತ್ತು ಅಗತ್ಯ ಬೆಲೆ ಏರಿಕೆಯಿಂದ ನಂಬುಗೆಯನ್ನು ಕಳೆದುಕೊಂಡಿದೆ. ಕೂಡಲೇ ರ‍್ಕಾರ ಅಗತ್ಯ ವಸ್ತುಗಳ ಬೆಲೆ ಏರಿಕೆ ಕ್ರಮವನ್ನು ಹಿಂಪಡೆಯಬೇಕೆಂದು ಒತ್ತಾಯಿಸಲಾಗಿದೆ ಎಂದು ತಿಳಿಸಿದರು.ಈ ಸಂರ‍್ಭದಲ್ಲಿ ಸಣ್ಣ ಹನುಮಂತಪ್ಪ ಹುಲಿಹೈದರ್, ಚಾಂದಪಾಷಾ, ರಸೂಲ್ ಗುಲಾಮ್, ಅಮೀರ್ ಅಲಿ, ಮಹೆಬೂಬ, ಅನ್ವರಭಾಷಾ, ಹುಸೇನ್ ಗೋವಾ, ಗೌಸ್‌ಪಾಷಾ, ಪರಶುರಾಮ, ಮಹಮ್ಮದ್ ಪಾಷಾ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.