ಆರ್ ವಿ ಎಸ್ ಆರ್ ವಿದ್ಯಾರ್ಥಿಗಳಿಗೆ ಆರೋಗ್ಯ ತಪಾಸಣೆ ಶಿಬಿರ

ಆರ್ ವಿ ಎಸ್ ಆರ್ ವಿದ್ಯಾರ್ಥಿಗಳಿಗೆ ಆರೋಗ್ಯ ತಪಾಸಣೆ ಶಿಬಿರ

Share

ಕಾರಟಗಿ ನವನಗರ್ : ಕಮ್ಮವಾರಿ ಶಿಕ್ಷಣ ಸಂಸ್ಥೆ ರೆಡ್ಡಿ ವೀರಣ್ಣ ಸಂಜೀವಪ್ಪ ವಸತಿ ಶಾಲೆಯಲ್ಲಿ ವೈದ್ಯರ ದಿನಾಚರಣೆ ಅಂಗವಾಗಿ ವಿದ್ಯಾರ್ಥಿಗಳಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ ನಡೆಸಲಾಯಿತು.ಡಾ ಡಿ ಎಸ್ ಶ್ರೀಹರಿ ದಂತ ತಜ್ಞರು ವಿದ್ಯಾರ್ಥಿಗಳಿಗೆ ಆರೋಗ್ಯ ತಪಾಸಣೆ ನಡಿಸಿ ಬಳಿಕ ಮಾತನಾಡಿದ ಅವರು, ಹಲ್ಲುಗಳ ಆರೋಗ್ಯ ಮತ್ತು ಸ್ವಚ್ಛತೆ ಬಗ್ಗೆ ಸಂಪೂರ್ಣ ವಿವರಗಳನ್ನು ನೀಡಿ,ಹಲ್ಲಿನ ಆರೋಗ್ಯವನ್ನು ಕಾಪಾಡಿಕೊಳ್ಳಬೇಕಾಗಿರುವುದು ಯಾವ ರೀತಿ ಆಹಾರ ಹಲ್ಲಿನ ಹುಳುಕಿಗೆ ಕಾರಣವಾಗುತ್ತದೆ ಎಂಬುದರ ಬಗ್ಗೆ ಸವಿವರವಾದ ವಿವರ ಕೊಟ್ಟರು,ಪೋಷಕರು ಮಕ್ಕಳ ಆರೋಗ್ಯ ಕುರಿತು ಕಾಳಜಿವಹಿಸಬೇಕು ಎಂದು ತಿಳಿಸಿದರು.ನಂತರ ಒಂದನೇ ತರಗತಿಯಿಂದ 7ನೇ ತರಗತಿ ವಿದ್ಯಾರ್ಥಿಗಳಿಗೆ ಆರೋಗ್ಯ ತಪಾಸಣೆ ನಡೆಸಲಾಯಿತು.ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷರು ಹಾಗೂ ಕಾಡ ಮಾಜಿ ಅಧ್ಯಕ್ಷರು ಕೊಲ್ಲಾಶೇಷಗಿರಿರಾವ್, ಆಡಳಿತ ಅಧಿಕಾರಿ ಶ್ರೀಮನ್ ನಾರಾಯಣ,ಪ್ರಾಚಾರ್ಯರು ಕೆ ಎಸ್ ಗುರುಮಠ್, ಉಪ ಪ್ರಾಚಾರ್ಯರು ವಸಂತ ದೇಸಾಯಿ, ಬಾಲ ಗುರುಕುಲ ಮುಖ್ಯಸ್ಥರಾದ ಶ್ರೀದೇವಿ ಕೊಲ್ಲಾ, ಡಾ. ವಿಜಯ ಭಾಸ್ಕರ್, ಶಿಕ್ಷಕ ವೃಂದ ವಿದ್ಯಾರ್ಥಿ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.


Share