ಆಳಂದ:- ತಾಲ್ಲೂಕಿನ ಮೋಘಾ.ಕೆ. ಗ್ರಾಮದಲ್ಲಿ ಕೆಚ್ಚೆದೆಯ ಸ್ನೇಹ ಲೋಕ ಪರಿಸರ ಪರಿವಾರ ಮೋಘಾ.ಕೆ.ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮೋಘಾ.ಕೆ. ಮತ್ತು ಕಲ್ಯಾಣ ಕರ್ನಾಟಕ ನ್ಯೂಸ್ ಚಾನಲ್ ಸಂಯುಕ್ತ ಆಶ್ರಯದಲ್ಲಿ 3ನೇ ವರ್ಷದ ಸಸ್ಯೋತ್ಸವ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಮಾದನ ಹಿಪ್ಪರಗ ವಿರಕ್ತಮಠದ ಶ್ರೀ ಅಭಿನವ ಶಿವಲಿಂಗ ಶ್ರೀಗಳು ವಹಿಸಿ ಜಗತ್ತಿನಲ್ಲಿ ಜಾಗತಿಕ ತಾಪಮಾನ ಏರಿಕೆಯಾಗುತ್ತಿದ್ದು ಜೀವ ಸಂಕುಲಗಳಿಗೆ ಮಾರಕವಾಗಿದೆ,ಮಾನವನ ವಿಪರಿತ ದುರಾಸೆಯಿಂದ ಪರಿಸರ ಅಳಿವಿನ ಅಂಚಿನಲ್ಲಿದೆ ಮುಂದಿನ ಪೀಳಿಗೆಯ ಜೀವನ ಉಹಿಸಲಾಗದು ಎಂದರು, ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಆಗಮಿಸಿದ ಮಾದನ ಹಿಪ್ಪರಗಾ ಪಿ.ಎಸ್.ಐ ದಿನೆಶರವರು ಪರಿಸರವನ್ನು ಉಳಿಸಿ ಬೆಳಸಿದರೆ ಮಾತ್ರ ಸಕಲ ಜೀವಸಂಕುಲ ಉಳಿಯಲು ಸಾದ್ಯವೆಂದು ಹೇಳಿದರು. ಕಲ್ಯಾಣ ಕರ್ನಾಟಕ ನ್ಯೂಸ್ ಚಾನಲ್ ಸಂಪಾದಕರಾದ ಮಲ್ಲಿಕಾರ್ಜುನ ಪಗಡೆಯವರು ಮಾತನಾಡಿ ಪರಿಸರ ಉಳಿಸಿ ಬೆಳೆಸುತ್ತಿರುವ ಯುವ ಪಡೆಯ ಕಾರ್ಯ ತುಂಬಾ ಶ್ಲಾಘನೀಯವಾದದ್ದು ನಿಮ್ಮ ಕಾರ್ಯಕ್ಕೆ ನಮ್ಮ ಸಹಕಾರ ಸದಾ ಇರುತ್ತದೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಕೆಚ್ಚೆದೆಯ ಸ್ನೇಹ ಲೋಕ ಪರಿಸರ ಪರಿವಾರ ಹುಟ್ಟುಹಾಕಿದ ಬಸವರಾಜ ಸರ್ ಮತ್ತು ಅಗ್ನಿಶಾಮಕ ದಳದಲ್ಲಿ ಆಯ್ಕೆಯಾಗಿರುವ ಶಿವರಾಜ ಬೆಳಮಗಿಯನ್ನು ಸನ್ಮಾನಿಸಲಾಯಿತು.ಅಭಿನವ ಶಿವಲಿಂಗ ಶ್ರೀಗಳ ಅಮೃತ ಹಸ್ತದಿಂದ ಶಾಲಾ ಆವರಣದಲ್ಲಿ ಸಸಿ ನೆಡಲಾಯಿತು,ಅದೆ ಸಂದರ್ಭದಲ್ಲಿ ಎಮ್.ಎ. ಆರ್.ಜಿ.ಸ್ಮಾ.ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಗುರುಗಳಾದ ದತ್ತಾತ್ರೇಯ ಎಸ್ ಬಿರಾದಾರ ಪರಿಸರ ಸಂರಕ್ಷಣಾವಿದಿ ಭೊಧನೆ ಮಾಡಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲೆಯ ಎಸ್.ಡಿ.ಎಮ್.ಸಿ ಅಧ್ಯಕ್ಷರಾದ ಮಾಂತಣ್ಣ ಪೋಲೀಸ ಪಾಟೀಲ,ಅತಿಥಿಯಾಗಿ ಶರಣಗೌಡ ಪೋಲೀಸ ಪಾಟೀಲ ವಹಿಸಿಕೊಂಡರು ಮುಖ್ಯರುಗಳಾದ ಸಿದ್ದಪ್ಪಾ ಹಾದಿಮನಿ ಪ್ರಾಸ್ತಾವಿಕ ಮಾತನಾಡಿದರು. ಕೆಚ್ಚೆದೆಯ ಸ್ನೇಹ ಲೋಕ ಪರಿಸರ ಪರಿವಾರ ಕ್ಕೆ ಗ್ರಾಮದ ಹೊಸ ಯುವಕರು ಸೇರಿಕೊಂಡರು. ಕಾರ್ಯಕ್ರಮದಲ್ಲಿ ಶಾಲಾ ಮಕ್ಕಳು ಗ್ರಾಮಸ್ಥರು ಭಾಗಿಯಾಗಿದ್ದರು. ಕಾರ್ಯಕ್ರಮದ ನಿರೂಪಣೆಯನ್ನು ಮಹೇಶ ನಡೆಸಿಕೊಟ್ಟರು.
ವರದಿ-ಡಾ ಎಂ ಬಿ ಹಡಪದ ಸುಗೂರ ಎನ್