ಬುದ್ದ ಬಸವ ಅಂಬೇಡ್ಕರ್ ಅವರ ಚಿಂತನೆಗಳ ವಿಚಾರ ಸಂಕಿರಣ ಹಾಗೂ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪುರಸ್ಕಾರ

ಬುದ್ದ ಬಸವ ಅಂಬೇಡ್ಕರ್ ಅವರ ಚಿಂತನೆಗಳ ವಿಚಾರ ಸಂಕಿರಣ ಹಾಗೂ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪುರಸ್ಕಾರ

Share

ಇಂಡಿ:ತಾಲೂಕಿನ ಚಿಕ್ಕ ಬೇವನೂರ ಗ್ರಾಮದಲ್ಲಿ ಜೂನ್ 5 ರಂದು ಸಾಯಂಕಾಲ 4 ಘಂಟೆಗೆ ಈ ಕಾಯ೯ಕ್ರಮವನ್ನು ಆಯೋಜಿಸಲಾಗಿದೆ ಬುದ್ದ ಬಸವ ಅಂಬೇಡ್ಕರ್ ಅವರ ಚಿಂತನೆಗಳು ಮತ್ತು ಸಿದ್ಧಾಂತಗಳನ್ನು ವಿಚಾರ ಗೋಷ್ಠಿ ಮುಖಾಂತರ ತಿಳಿಯಬಹುದು ಹಾಗೂ ಈ ವರ್ಷ ಹತ್ತನೇ ತರಗತಿಯಲ್ಲಿ ಮತ್ತು ಪಿಯುಸಿ ಪರೀಕ್ಷೆ ಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಗುವುದು ಬೆಂಗಳೂರು ಡಿಸಿಪಿ.ಪೋಲಿಸ್ ಕಮಿಷನರ್ ಸಿದ್ದರಾಜು (ips) ಆಗಮಿಸುವರು ಹಾಗೂ ಗ್ರಾಮದ ನಿವೃತ್ತ ಅಧಿಕಾರಿಗಳಿಗೆ ಸನ್ಮಾನಿಸಿ ಗೌರವಿಸಲಾಗುವುದು ಇದರಂತೆ ಕಾಯ೯ಕ್ರಮದ ಪ್ರಯುಕ್ತ ಯಕ್ಷಗಾನ.ಮಲ್ಲಕಂಬ.ರಸಮಂಜರಿ ಮತ್ತು ಚಿಕ್ಕಮಕ್ಕಳಿಗೆ ಪುರುಷರಿಗೆ ಮಹಿಳೆಯರಿಗೆ ವಿಶೇಷ ಮನರಂಜನಾ ಕ್ರೀಡೆಗಳನ್ನು ಆಯೋಜಿಸಲಾಗುವುದು ನಮ್ಮ ಊರು ನಮ್ಮ ಜನ ಒಂದು ಗೂಡಿಸುವ ಕಾಯ೯ಕ್ರಮವನ್ನು ಹಮ್ಮಿಕೊಳ್ಳಲಾಗುವುದು ಊರಿನ ಯುವಕ ಯುವತಿಯರಿಗೆ ಒಳ್ಳೆಯ ಸಂಸ್ಕಾರ ಮತ್ತು ಸಿದ್ಧಾಂತಗಳನ್ನು ಹಂಚಿಕೊಳ್ಳಲಾಗುವುದು ಎಂದು ಕಾಯ೯ಕ್ರಮದ ಮುಖ್ಯ ವ್ಯವಸ್ಥಾಪಕ ರೇವಣಸಿದ್ದಪ್ಪ ಪಾದಗಟ್ಟಿ . ಡಾಕ್ಟರ್ ಅಂಬೇಡ್ಕರ್ ಅಂತಾರಾಷ್ಟ್ರೀಯ ಪ್ರಶಸ್ತಿ ಪುರಸ್ಕಾರ ಪಡೆದ ಅಜಿತ ಕಟ್ಟಿಮನಿ ಚಂದು ದೋಡಮನಿ ಬಸವರಾಜ ಪಾದಗಟ್ಟಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ


Share