ರನ್ನ ಬೆಳಗಲಿ:ಬೆಳಗಲಿ ಪಟ್ಟಣದ ಶ್ರೀ ಬಂದ ಲಕ್ಷ್ಮಿ ಪಾದಗಟ್ಟೆಯಲ್ಲಿ ಬುಧವಾರ ದಂದು ಉಪ್ಪಾರ ಸಮಾಜ ಸೇವಾ ಸಂಸ್ಥೆಯ ನೂತನ ಉಪ್ಪಾರ ಸಮುದಾಯ ಭವನದ ಉದ್ಘಾಟನೆ ಕಾರ್ಯಕ್ರಮ ಜರುಗಿತು.ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡಿದ ಆರ್. ಬಿ.ತಿಮ್ಮಾಪುರ ಅಬಕಾರಿ ಮತ್ತು ಬಾಗಲಕೋಟೆ ಜಿಲ್ಲೆಯ ಉಸ್ತುವಾರಿ ಸಚಿವರು ಸಮುದಾಯಗಳ ಅಭಿವೃದ್ಧಿಗೆ ಶಿಕ್ಷಣವೇ ಅಡಿಪಾಯವಾಗಿದೆ. ಆದ್ದರಿಂದ ಶಿಕ್ಷಣಕ್ಕೆ ಹೆಚ್ಚಿನ ಒತ್ತನ್ನು ನೀಡುವುದರ ಜೊತೆಗೆ ಹಿಂದುಳಿದ ಸಮುದಾಯಗಳು ರಾಜಕೀಯವಾಗಿ ಮುಂದೆ ಬಂದಾಗ ಮಾತ್ರ ಸಮುದಾಯ ವೇಗದ ಗತಿಯಲ್ಲಿ ಅಭಿವೃದ್ಧಿ ಸಾಧಿಸಲು ಸಾಧ್ಯವಾಗುತ್ತದೆ. ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಕೊಡುಗೆ ಎಲ್ಲಾ ಹಿಂದುಳಿದ ವರ್ಗಗಳಿಗೆ ವರದಾನವಾಗಿದೆ. ಅವರು ಸಂವಿಧಾನದ ಅಡಿಯಲ್ಲಿ ನೀಡಿದ ಮತದಾನದ ಹಕ್ಕು, ಎಲ್ಲರನ್ನ ಸಮಾನ ದೃಷ್ಟಿಕೋನದಲ್ಲಿ ನೋಡುವಂತಾಗಿದೆ. ಭಗೀರಥ ಶ್ರೀಗಳ ಕಾರ್ಯ ಅಮೋಘವಾಗಿದೆ ಸಮುದಾಯದ ಜನತೆಗೆ ಉತ್ತಮ ಸಂಸ್ಕಾರ ನೀಡುವ ಜೊತೆಗೆ ಪ್ರತಿಯೊಂದು ಕಾರ್ಯದಲ್ಲಿ ಭಾಗಿಯಾಗುತ್ತಾ ನಿರಂತರ ಸಂಚರಿಸುತಾ ತಮ್ಮ ಸಮುದಾಯಗಳ ಜೊತೆಗೆ ಹಿಂದುಳಿದ ಸಮುದಾಯಗಳ ಶ್ರೀಗಳ ಕೂಟದ ಗೌರವ ಅಧ್ಯಕ್ಷರಾಗಿ ಕಾರ್ಯ ಮಾಡುತ್ತಿರುವುದು ಶ್ಲಾಘನೀಯವಾಗಿದೆ ಎಂದು ಹೇಳಿದರು.ದಿವ್ಯ ಸಾನಿಧ್ಯ ವಹಿಸಿದ ಜಗದ್ಗುರು ಡಾ. ಶ್ರೀ ಶ್ರೀ ಪರಮ್ ಪೂಜ್ಯ ಪುರುಷೋತ್ತಮಾನಂದ ಪುರಿ ಮಹಾಸ್ವಾಮಿಗಳು ಶ್ರೀ ಚಿನ್ಮೂಲಾದ್ರಿ ಶಿಲಾಪುರಿ ಮಹಾಸಂಸ್ಥಾನ ಮಠ ಭಗೀರಥ ಪೀಠ ಬ್ರಹ್ಮ ವಿದ್ಯಾನಗರ ಚಿತ್ರದುರ್ಗ ಜಿಲ್ಲೆ. ಶ್ರೀಗಳು ಜಗಕ್ಕೆ ರುಚಿಯನ್ನು ಮತ್ತು ಜೀವ ಜಲವನ್ನು ನೀಡಿದ ಸಮಾಜ ನಮ್ಮದು ಉಪ್ಪಿಲ್ಲದೆ ಊಟಕ್ಕೆ ರುಚಿ ಇಲ್ಲವೋ. ಹಾಗೆ ಎಲ್ಲರೊಂದಿಗೆ ಸವಿಯಾಗಿ ಬೆರೆತು ಅಭಿವೃದ್ಧಿಯನ್ನು ಹೊಂದಲು ಚಿಂತಿಸಬೇಕು. ಶಿಕ್ಷಣದಿಂದ ಮಾತ್ರ ಸಮಾಜದ ಅಭಿವೃದ್ಧಿ ಸಾಧಿಸಬಹುದು ಅದಕ್ಕೆ ಬಾಲಕಾರ್ಮಿಕ ಪದ್ಧತಿಯನ್ನು ನಿರ್ಮೂಲನೆ ಗೊಳಿಸಿ, ಸಮಾಜದ ಯಾವ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು. ಮಕ್ಕಳಿಗೆ ಸಂಸ್ಕಾರ ನೀಡಬೇಕಾಗಿರುವುದು ತಂದೆ-ತಾಯಿಯರ ಆದ್ಯ ಕರ್ತವ್ಯವಾಗಿದೆ. ಅನೇಕ ಸಮಾಜ ಸುಧಾರಕರ ಚಿಂತನೆಗಳನ್ನು ಮಕ್ಕಳಲ್ಲಿ ಬಿತ್ತರಿಸಬೇಕು. ನಮ್ಮ ಭಗೀರಥ ಜಯಂತಿಯನ್ನು ಮೊಟ್ಟಮೊದಲ ಬಾರಿಗೆ ಸರ್ಕಾರದ ಅಡಿಯಲ್ಲಿ ಆಚರಣೆಗೆ ತನಂತ ಮಹನೀಯರು ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರು 2016 ರಿಂದ ಭಗೀರಥ ಜಯಂತಿಯನ್ನು ಆಚರಣೆಗೆ ತಂದ ಕೀರ್ತಿ ಅವರಿಗೆ ಸಲ್ಲುತ್ತದೆ. ಬಡ ಮತ್ತು ಹಿಂದುಳಿದ ಸಮುದಾಯಗಳಿಗೆ ಆಶಾ ಕಿರಣರಾಗಿದ್ದಾರೆ ಎಂದು ತಿಳಿಸಿದರು.ಸನಿಧ್ಯ ವಹಿಸಿದ ಸ್ಥಳೀಯ ಪೂಜ್ಯರಾದ ಶ್ರೀ ಸಿದ್ದರಾಮ ಶಿವಯೋಗಿಗಳು ಸಿದ್ದಾರೂಢ ಆಶ್ರಮ ಮುಧೋಳ. ಉಪ್ಪಾರ ಸಮಾಜ ಶ್ರಮಿಕ ಸಮಾಜವಾಗಿದೆ. ಎಲ್ಲಾ ಸಮಾಜಗಳ ಜೊತೆಗೆ ಉತ್ತಮ ಒಡನಾಟ ಹೊಂದಿರುವ ಉಪಹಾರ ಜನಾಂಗವು ದುಡಿಮೆಯ ಜೊತೆಗೆ ಬದುಕನ್ನು ಕಟ್ಟಿಕೊಂಡಿದ್ದಾರೆ. ಭಗೀರಥನ ಹಾಗೆ ಹಿಡಿದ ಕೆಲಸವನ್ನು ಪೂರ್ಣಗೊಳಿಸುವಲ್ಲಿ ವಿಳಂಬವಾದರೂ ಅಭಿವೃದ್ಧಿಯನ್ನು ಸಾಧಿಸಿದ್ದಾರೆ ಎಂದು ಹೇಳಿದರು.ಯೋಗ ಶಿಕ್ಷಕರು ಉಪನ್ಯಾಸಕರಾದ ರಾಘವೇಂದ್ರ ನೀಣ್ಣವರ ಅವರು ಪ್ರಾಸ್ತಾವಿಕವಾಗಿ ಶ್ರೀಮಠದ ಅಭಿವೃದ್ಧಿಯ ಕಾರ್ಯಗಳ ಬಗ್ಗೆ ಮಾತನಾಡಿ, ವಿನುತನವಾಗಿ ಉದ್ಘಾಟನೆಗೊಂಡ ಉಪ್ಪಾರ ಸಮುದಾಯ ಭವನವು ಮಾನ್ಯ ಸಚಿವರಾದ ಆರ್. ಬಿ.ತಿಮ್ಮಾಪುರ ಅವರ ಸಹಾಯ ಹಸ್ತದಿಂದ ಪೂರ್ಣಗೊಂಡು ಉದ್ಘಾಟನೆಯಾಗಿದೆ ಎಂದು ಪ್ರಾಸ್ತಾವಿಕ ನುಡಿಯಲ್ಲಿ ತಿಳಿಸುತ್ತಾ ಸ್ವಾಗತಗೈದು ಕಾರ್ಯಕ್ರಮವನ್ನು ನಿರೂಪಿಸಿದರು. ಸಮಾಜದ ಮಹಿಳಾ ಮುಖಂಡರಾದ ಕಮಲಾ ಜೇಡರ ಕಾರ್ಯಕ್ರಮ ಕುರಿತು ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಯಲ್ಲಪ್ಪ ದೋಬಸಿ ವಹಿಸಿದರು. ಭರಮಪ್ಪ ಹೊಸೂರ, ಮಹಾದೇವ ಹಾದಿಮನಿ, ಅಶೋಕ ಸಿದ್ದಾಪುರ, ಯಲ್ಲನಗೌಡ ಪಾಟೀಲ, ಸದಾನಂದ ಲೂನಾರಿ, ಧರೆಪ್ಪ ಸಾಂಗ್ಲಿಕರ,ದುಂಡಪ್ಪ ಬರಮನಿ, ಎನ್.ಎ.ಲಮಾಣಿ,ಶಿವಪ್ಪ ಮಂಟೂರ, ಪ್ರವೀಣ ಪಾಟೀಲ, ಮುಬಾರಕ ಅತ್ತಾರ, ಸಂಗಪ್ಪ ಅಮಾತಿ, ಮುತ್ತಪ್ಪ ಸಿದ್ದಾಪುರ, ಮಹಾಲಿಂಗಪ್ಪ ಲಾತೂರ, ಯಮನಪ್ಪ ದೊಡ್ಡಮನಿ,ಮಂಜು ಉಪ್ಪಾರ, ಮಹಾದೇವ ಜಗದಾಳ, ಈರಪ್ಪ ಕಿತ್ತೂರ, ಸವಿತಾ ಚವಲಿ, ಮಹಾದೇವ ಮೂರನಾಳ, ಲಕ್ಷ್ಮಣ ಮಂಗಿ, ಭೀಮಪ್ಪ ದೋಬಸಿ, ಉಪ್ಪಾರ ಸೇವಾ ಸಂಸ್ಥೆಯ ಪದಾಧಿಕಾರಿಗಳು, ಸಮಾಜದ ಬಾಂಧವರು ಹಾಜರಿದ್ದರು.