ಎನ್‌ಜಿಗೆ “ಕರುನಾಡ ಸಿರಿಗಂಧ’’ ಪ್ರಶಸ್ತಿ ಪ್ರಧಾನ ಕಕಜವೇ, ಮತ್ತು ಸ್ನೇಹಿತರು, ಶಿಷ್ಯರಸಮ್ಮುಖದಲ್ಲಿ ನಿಂಗೇಗೌಡರ ಹುಟ್ಟುಹಬ್ಬ ಆಚರಣೆ ನಿಂಗೇಗೌಡರು ಜೀವನ ಶೈಲಿ ಇಂದಿನ ಪೀಳಿಗೆಗೆ ಮಾದರಿಯಾಗಿದೆ:

ಎನ್‌ಜಿಗೆ “ಕರುನಾಡ ಸಿರಿಗಂಧ’’ ಪ್ರಶಸ್ತಿ ಪ್ರಧಾನ ಕಕಜವೇ, ಮತ್ತು ಸ್ನೇಹಿತರು, ಶಿಷ್ಯರಸಮ್ಮುಖದಲ್ಲಿ ನಿಂಗೇಗೌಡರ ಹುಟ್ಟುಹಬ್ಬ ಆಚರಣೆ ನಿಂಗೇಗೌಡರು ಜೀವನ ಶೈಲಿ ಇಂದಿನ ಪೀಳಿಗೆಗೆ ಮಾದರಿಯಾಗಿದೆ:

Share

ಚನ್ನಪಟ್ಟಣ: ನಿವೃತ್ತ ಪ್ರಾಂಶುಪಾಲರು ಹಾಗೂ ಚನ್ನಪಟ್ಟಣ ಸ್ಪೋರ್ಟ್ಸ್ ಕ್ಲಬ್‌ನ ಅಧ್ಯಕ್ಷರಾದ ನಿಂಗೇಗೌಡ (ಎನ್‌ಜಿ) ಅವರಿಗೆ ಕಸ್ತೂರಿ ಕರ್ನಾಟಕ ಜನಪರ ವೇದಿಕೆಯಿಂದ ಕರುನಾಡ ಸಿರಿಗಂಧ ಪ್ರಶಸ್ತಿ ನೀಡಿ ಗೌರವಿಸಿ ೮೩ ವರ್ಷದ ನಿಂಗೇಗೌಡರ ಜೀವನ ಶೈಲಿ ಇಂದಿನ ಪೀಳಿಗೆಗೆ ಮಾದರಿಯಾಗಿದೆ ಎಂದು ಕಕಜವೇ ರಾಜ್ಯಾಧ್ಯಕ್ಷ ರಮೇಶ್‌ಗೌಡರು ಅಭಿಪ್ರಾಯಿಸಿದರು.

ಪಟ್ಟಣದ ಕಾವೇರು ವೃತ್ತದಲ್ಲಿ ಕಾವೇರಿ ನದಿ ನೀರಿನ ಹಂಚಿಕೆಯಲ್ಲಿ ಸಂಕಷ್ಟ ಸೂತ್ರ ರಚಿಸುವ ಜೊತೆಗೆ ಮೇಕೆದಾಟು ಯೋಜನೆಗೆ ಅಡಿಗಲ್ಲು ಹಾಕುವಂತೆ ಆಗ್ರಹಿಸಿ ಕಸ್ತೂರಿ ಕರ್ನಾಟಕ ಜನಪರ ವೇದಿಕೆಯ ರಾಜ್ಯಾಧ್ಯಕ್ಷರಾದ ರಮೇಶ್‌ಗೌಡರ ನೇತೃತ್ವದಲ್ಲಿ ೨೦೨೩ರ ಅಕ್ಟೋಬರ್ ೫ ರಿಂದ ನಿರಂತರವಾಗಿ ಹೋರಾಟ ಮಾಡುತ್ತಿದ್ದು ಮಂಗಳವಾರ ನಡೆದ ೨೩೬ ನೇ ದಿನದ ಹೋರಾಟ ಹಾಗೂ ನಿಂಗೇಗೌಡರ ೮೩ ನೇ ವರ್ಷದ ಹುಟ್ಟುಹಬ್ಬದ ಸಮಾರಂಭದಲ್ಲಿ ಮಾತನಾಡಿದ ಅವರು ನಿಂಗೇಗೌಡರು ಕಳೆದ ೫೬ ವರ್ಷಗಳ ಕಾಲ ಶಿಕ್ಷಣ ಕ್ಷೇತ್ರದಲ್ಲಿ ಸಾವಿರಾರು ವಿದ್ಯಾರ್ಥಿಗಳಿಗೆ  ಮಾರ್ಗದರ್ಶಕರಾಗಿದ್ದು ಜೊತೆಗೆ ಒಕ್ಕಲಿಗರ ಸಾರ್ವಜನಿಕ ವಿದ್ಯಾ ಸಂಸ್ಥೆಯ ಉಪಾಧ್ಯಕ್ಷರಾಗಿ, ಚನ್ನಪಟ್ಟಣ ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಾ ಬಂದಿದ್ದು, ಕಳೆದ ೧೭೦ ದಿನಗಳಿಂದ ಕಾವೇರಿ ಹೋರಾಟದಲ್ಲಿ ನಿರಂತರವಾಗಿ ಭಾಗಿಯಾಗಿ ನೀರಿನ ಸಂರಕ್ಷಣೆ ಮತ್ತು ನೀರಿನ ಅಭಾರವದ ನಡುವೆ ಪ್ರಾಣಿ ಪಕ್ಷಿಗಳ ಜೀವ ಉಳಿಸುವ ಬಗ್ಗೆ ತಮ್ಮ ಸಲಹೆ ಸಹಕಾರ ನೀಡುತ್ತಾ ಬಂದಿದ್ದಾರೆ. ಕಳೆದ ೫೬ ವರ್ಷಗಳಿಂದ ಸಮಾಜಕ್ಕೆ ತಮ್ಮನ್ನು ಮೀಸಲಿಟ್ಟಿರುವ ಇವರು ನಮ್ಮ ಕರುನಾಡಿನ ಹೆಮ್ಮೆಯಾಗಿದ್ದಾರೆ. ಈ ನಿಟ್ಟಿನಲ್ಲಿ ಅವರಿಗೆ ವೇದಿಕೆಯಿಂದ ಕರುನಾಡ ಸಿರಿಗಂಧ ಪ್ರಶಸ್ತಿ ಪ್ರಧಾನ ಮಾಡುವುದು ನಮ್ಮ ವೇದಿಕೆಗೆ ಹೆಮ್ಮೆಯಾಗಿದೆ ಎಂದರು.

ನನ್ನ ಗುರುಗಳಾದ ನಿಂಗೇಗೌಡರಿಗೆ ಇಂದು ಹುಟ್ಟುಹಬ್ಬ ಮಾಡುತ್ತಿರುವುದು ಸಂತಸ ತಂದಿದೆ. ಇಂದಿನ ಜನತೆ ೪೫ ದಾಟುತ್ತಿದ್ದಂತೆ ಅವರ ದೇಹದಲ್ಲಿ ಎಲ್ಲಾ ಸಹಜ ರೋಗಗಳಿಗೆ ದಾರಿ ಮಾಡಿಕೊಡುತ್ತಾರೆ. ಆದರೆ ನಿಂಗೇಗೌಡರು ೮೩ ವರ್ಷವಾದರೂ ಚಿರ ಯುವಕರಂತೆ ವಾಕಿಂಗ್, ಯೋಗ, ವ್ಯಾಯಾಮಗಳ ಮೂಲಕ ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುತ್ತಾ ಬಂದಿದ್ದು ಎಲ್ಲಾ ರೀತಿಯ ಆಹಾರ ಸೇವಿಸುವ ಭಾಗ್ಯವನ್ನು ಅವರು ಈಗಲೂ ಪಡೆದಿದ್ದಾರೆ ಎಂದರೆ ಅವರ ಜೀವನ ಶೈಲಿ ಇಂದಿನ ಪೀಳಿಗೆಗೆ ಮಾದರಿಯಾಗಿದೆ ಎಂದು ರಮೇಶ್‌ಗೌಡ ಬಣ್ಣಿಸಿದರು.

ಹಿರಿಯ ವಕೀಲರು ಹಾಗೂ ಚನ್ನಪಟ್ಟಣ ಸ್ಪೋರ್ಟ್ಸ್ ಕ್ಲಬ್‌ನ ನಿರ್ದೇಶಕರು ಹಾಗೂ ಎನ್‌ಜಿ ಅವರ ಶಿಷ್ಯ ದಶವಾರ ಶಿವರಾಜೇಗೌಡರು ಮಾತನಾಡಿ, ಅವರ ಶಿಷ್ಯರಾದ ನಾವು ಊಟದ ವಿಚಾರದಲ್ಲಿ ಅದು ಬೇಡ ಇದು ಬೇಡ ಎಂದು ಹಿಂದೆ ಸರಿಯುತ್ತೇವೆ ಆದರೆ ನಮಗೆ ಪಾಠ ಮಾಡಿದ ಗುರುಗಳು ಇಂದಿಗೂ ಎಲ್ಲಾ ವಿಧದ ಆಹಾರವನ್ನು ಸೇವಿಸುವ ಜೊತೆಗೆ ಆರೋಗ್ಯ ಕಾಪಾಡಿಕೊಳ್ಳಲು ಪ್ರತಿನಿತ್ಯ ಒಂದು ಗಂಟೆ ವಾಯುವಿವಾಹ ಮಾಡಿ ಒಂದು ಗಂಟೆಗಳ ಕಾಲ ಮನೆಯಲ್ಲಿ ವ್ಯಾಯಾಮ ಮಾಡುತ್ತಾರೆ. ೬೦ ದಾಟಿದವರನ್ನು ವೃದ್ಧರು ಎನ್ನುತ್ತಾರೆ ಆದರೆ ನಿಂಗೇಗೌಡರು ವೃದ್ಧರಲ್ಲ ಚಿರಯುವಕನಂತೆ ಎಲ್ಲಾ ಚಟುವಟಿಕೆಗಳಲ್ಲಿ ಕ್ರಿಯಾಶೀಲವಾಗಿ ಓಡಾಡುತ್ತಾರೆ. ಇವರು ಶತಾಯುಷಿಗಳಾಗಿ ಬಾಳಬೇಕು ಎಂದು ಶುಭ ಹಾರೈಸಿದರು.

ಇದೇ ವೇಳೆ ಕಾವೇರಿ ನೀರಿನ ಸಮಸ್ಯೆ ಬಗ್ಗೆ ವೇದಿಕೆ ನಡೆಸುತ್ತಿರುವ ಹೋರಾಟದ ಬಗ್ಗೆ ಮಾತನಾಡಿ ವಕೀಲ ಶಿವರಾಜೇಗೌಡರು ಕಾವೇರಿ ನದಿ ನೀರು ಹಂಚಿಕೆ ಮತ್ತು ಮೇಕೆದಾಟು ಅಣೆಕಟ್ಟೆ ನಿರ್ಮಾಣದಲ್ಲಿ ರಾಜಕೀಯ ವ್ಯಕ್ತಿಗಳಿಗೆ ಇಚ್ಛಶಕ್ತಿ ಇಲ್ಲ. ಸಮಸ್ಯೆಗಳನ್ನು ಮುಂದೆ ಹಾಕುತ್ತಾ ಬಂದಿದ್ದು, ಈ ವಿಷಯ ಮುಂದಿಟ್ಟು ರಾಜಕಾರಣ ಮಾಡುವ ವ್ಯವಸ್ಥೆ ನಡೆದುಕೊಂಡು ಬಂದಿದೆ. ತಾಲೂಕಿನಲ್ಲಿ ನೀರಿನ ಬವಣೆ ಆರಂಭ ವಾಗುವ ಮುನ್ನವೇ ಮಳೆ ಬಂದಿದೆ. ಇನ್ನೂ ಒಂದು ತಿಂಗಳು  ಮಳೆ ಬರದಿದ್ದರೆ ಬೆಂಗಳೂರಿನ ಜನತೆ ವಾಪಸ್ ಹಳ್ಳಿಗಳತ್ತ ಮುಖಮಾಡುವ ಪರಿಸ್ಥಿತಿ ನಿರ್ಮಾಣ ಆಗಿತ್ತು. ಮುಂದಾದರೂ ರಾಜಕೀಯ ವ್ಯಕ್ತಿಗಳು  ಇಚ್ಛಾಶÀಕ್ತಿಯಿಂದ ಕೆಲಸ ಮಾಡಲು ಮುಂದಾಗಬೇಕು ಎಂದರು.

ಒಕ್ಕಲಿಗರ ಸಾರ್ವಜನಿಕ ವಿದ್ಯಾಸಂಸ್ಥೆ ಕಾರ್ಯದರ್ಶಿಗಳು ಹಾಗೂ ನಿಂಗೇಗೌಡರ (ಎನ್‌ಜಿ) ಜೋಡಿ ಗೆಳಯ ಚನ್ನಪ್ಪ(ಸಿಸಿ) ಅವರು ಮಾತನಾಡಿ, ನಿಂಗೇಗೌಡರು ಮತ್ತು ನಾನು ಒಮದೇ ಸಂಸ್ಥೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸಿ ನಿವೃತ್ತಿಯಾಗಿದ್ದೇವೆ. ನಾನು ಅವರಿಗಿಂದ ೧೦ ವರ್ಷ ಚಿಕ್ಕವನಾದರೂ ನನ್ನನ್ನು ಸ್ನೇಹಿತರಂತೆ ಕಾಣುತ್ತಾರೆ. ಕ್ರೀಡೆ, ಸಾಮಾಜಿಕ, ಸಾಂಸ್ಕೃತಿಕ, ರಾಜಕೀಯ ಯಾವುದೇ ವಿಚಾರದಲ್ಲಿ ಇಂದಿಗೂ ನಿಂಗೇಗೌಡರು ಕ್ರಿಯಾಶೀಲರಾಗಿ ಓಡಾಡುತ್ತಾ ಎಲ್ಲವನ್ನು ನಿರ್ವಹಣೆ ಮಾಡುತ್ತಾರೆ ಎಂದರೆ ಅದಕ್ಕೆ ಅವರು ತಮ್ಮ ಆರೋಗ್ಯವನ್ನು ಕಾಪಾಡಿಕೊಂಡು ಬಂದಿರುವ ಅವರ ಜೀವನ ಶೈಲಿಯೇ ಕಾರಣ, ಈ ನಿಟ್ಟಿನಲ್ಲಿ ನಾನು ದೊಡ್ಡೋನೆ ಎಂದು ಕರೆಯುವ ಅಣ್ಣನಾದ ನಿಂಗೇಗೌಡರು ಶತಾಯುಷಿಗಳಾಗಲಿ ಎಂದು ಶುಭಹಾರೈಸಿದರು.

ಸುಣ್ಣಘಟ್ಟ ನಾಗರಾಜು ಮಾತನಾಡಿ, ಇಂದು ಸರ್ಕಾರಿ ಸಂಬಳ ಪಡೆದು ನಿವೃತ್ತಿ ಆದರೆ ಸಾಕು ಮನೆಯಲ್ಲಿ ಮೊಮ್ಮಕ್ಕಳ ಜೊತೆ ಕಾಲ ಕಳೆದರೆ ಸಾಕು ಎನ್ನುವವರ ನಡುವೆ ನಮ್ಮ ಗುರುಗಳಾದ ನಿಂಗೇಗೌಡರು ನಿವೃತ್ತಿಯಾದ ನಂತರವೂ ಸಮಾಜಕ್ಕೆ ತಮ್ಮದೇ ಸೇವೆ ನೀಡುತ್ತಾ ಬಂದಿದ್ದಾರೆ. ಬಡಾವಣೆಯ ಸಮಸ್ಯೆಗಳು ಸೇರಿದಂತೆ ರಾಜ್ಯದ ಸಮಸ್ಯೆಗಳ ಬಗ್ಗೆ ಸಹ ಅವರು ದ್ವನಿ ಎತ್ತುತ್ತಾ ಬಂದಿದ್ದಾರೆ. ಗುರುಗಳ ಜೀವನ ಶೈಲಿ ನಮಗೆ ಮಾದರಿಯಾಗಬೇಕು ಎಂದು ಬಣ್ಣಿಸಿ ನಿಂಗೇಗೌಡರು ಶತಾಯುಷಿಗಳಾಗಬೇಕು ಎಂದು ಶುಭ ಕೋರಿದರು.

ಒಕ್ಕಲಿಗರ ಸಾರ್ವಜನಿಕ ವಿದ್ಯಾಸಂಸ್ಥೆಯ ನಿರ್ದೇಶಕರಾದ ಮಾಲಿನಿ ರಮೇಶ್‌ಅವರು ಮಾತನಾಡಿ, ನಿಂಗೇಗೌಡರ(ಎನ್‌ಜಿ) ಬಗ್ಗೆ ಸಂಸ್ಥೆಯಲ್ಲಿ ಕೇಳಿದ್ದೆ, ಇಂದು ಅವರ ಬಗ್ಗೆ ಮತ್ತಷ್ಟು ತಿಳಿದುಕೊಳ್ಳುವ ಜೊತೆಗೆ ಅವರ ಜೀವನ ಶೈಲಿಯ ಬಗ್ಗೆ ಕೇಲಿ ಹೆಮ್ಮೆ ಆಗುತ್ತಿದೆ. ನಿಂಗೇಗೌಡರು ಪ್ರಾಂಶುಪಾಲರಾಗಿ ಶಿಕ್ಷಣ ಸಂಸ್ಥೆಯಲ್ಲಿ ಗುಣಮಟ್ಟದ ಶಿಕ್ಷಣಕ್ಕೆ ಒತ್ತು ನೀಡಿರುವ ಮಾದರಿ ನಮಗೆ ದಾರಿದೀಪವಾಗಲಿದೆ ಎಂದು ಬಣ್ಣಿಸಿದರು.

ಕಾರ್ಯಕ್ರಮದ ಕೇಂದ್ರ ಬಿಂದುವಾಗಿದ್ದ ನಿಂಗೇಗೌಡರು(ಎನ್‌ಜಿ) ಅವರು ಮಾತನಾಡಿ ೫೬ ವರ್ಷಗಳ ಶಿಕ್ಷಣ ಕ್ಷೇತ್ರದ ಸೇವೆಯ ಬಳಿಕ ಮನೆ ಸೇರಿದ ನಾನು ಕುಟುಂಬದ ಸದಸ್ಯರುಗಳ ಸಾವಿನಿಂದ ನೊಂದು ಯೋಚನೆಯಲ್ಲಿ ಮಗ್ನನಾಗಿದ್ದೇ. ಆದರೆ ಮಗಳಂತಹ ನನ್ನ ಸೊಸೆ ನನಗೆ ಧೈರ್ಯ ತುಂಬಿ ಜೀವನದಲ್ಲಿ ಬರುವುದೆಲ್ಲವನ್ನು ಸ್ವೀಕರಿಸುವ ಮನಸ್ಥಿತಿಯನ್ನು ಬೆಳೆಸಿಕೊಳ್ಳುವಂತೆ ಆತ್ಮಸ್ಥೆöÊರ್ಯ ತುಂಬಿದಳು. ಅಂದಿನಿAದ ಹೆಚ್ಚು ಒತ್ತಡ ತರುವ ಯೋಜನೆಗಳನ್ನು ತಲೆಗೆ ಹಾಕಿಕೊಳ್ಳಬಾರದೆಂದು ನಿರ್ಧಾರ ಮಾಡಿದೆ. ಅಲ್ಲದೆ ರಮೇಶ್‌ಗೌಡರು ನಡೆಸುತ್ತಿದ್ದ ಕಾವೇರಿ ಹೋರಾಟದಲ್ಲಿ ನ್ಯಾಯಯುತ ಬೇಡಿಕೆ ಇದ್ದ ನಿಟ್ಟಿನಲ್ಲಿ ಹೋರಾಟದಲ್ಲಿ ಭಾಗಿಯಾಗುತ್ತಾ ಬಂದಿದೇನೆ. ಇಂದು ಸ್ನೇಹಿತರು, ಹಿತೈಷಿಗಳು, ಕುಟುಂಬದವರು, ಶಿಷ್ಯಂದಿರು, ವಿದ್ಯಾರ್ಥಿಗಳ ನಡುವೆ ನನ್ನ ಹುಟ್ಟುಹಬ್ಬದ ಸಂಭ್ರಮದ ನಡೆಯುತ್ತಿರುವುದು ನನ್ನ ಜೀವನದ ಸಕೃತವಾಗಿದೆ ಎಂದರು. ನನ್ನ ಹುಟ್ಟುಹಬ್ಬವನ್ನು ಆಚರಿಸಿದ ವೇದಿಕೆಯ ರಾಜ್ಯಾಧ್ಯಕ್ಷ ರಮೇಶ್‌ಗೌಡ ಸೇರಿದಂತೆ ಎಲ್ಲರಿಗೂ ನಾನು ಆಭಾರಿಯಾಗಿದ್ದೇನೆ ಎಂದರು.

ಕಾರ್ಯಕ್ರಮದಲ್ಲಿ ಉಪನ್ಯಾಸಕ ಹೊಲಸಾಲಯ್ಯ ಅವರು ಕನ್ನಡ ನಾಡಿನ ಕ್ರಾಂತಿ ಗೀತೆ ಆಡಿದರು, ಗಾಯಕಿ ತಸ್ಮಿಯಾಬಾನು ಗೀತಗಾಯನ ನಡೆಸಿಕೊಟ್ಟರು.

ಈ ಸಂದರ್ಭದಲ್ಲಿ  ವೇದಿಕೆಯ ಜಿಲ್ಲಾಧ್ಯಕ್ಷ ಯೋಗೀಶಗೌಡ,  ರಾಜ್ಯ ಸಂಘಟನಾ ಕಾರ್ಯದರ್ಶಿ ಕೃಷ್ಣೇಗೌಡ, ಭುವನೇಶ್ವರಿ, ಪವಿತ್ರಾ ಪ್ರಕಾಶ್, ದರ್ಶನ್, ಅಡಿವೇಲು,  ಜ್ಞಾನ ಸರೋವರ ಕಾಲೇಜಿನ ಪ್ರಾಂಶುಪಾಲರಾದ ಹೇಮಾವತಿ, ಭಾವನಾ, ಶೃತಿ, ಚಂದನ್, ಪ್ರವೀಣ್,  ಇಂಡಿಯನ್ ಆಕ್ಸ್ಫರ್ಡ್ ಸ್ಕೂಲ್‌ನ ಸಂಸ್ಥಾಪಕರಾದಿ ಮಾಲಿನಿ ರಮೇಶ್, ರಮೇಶ್, ಇಂಜಿನಿಯರ್ ಕಿಟ್ಟಣ್ಣ, ಎಲೆಕೇರಿ ಮಂಜುನಾಥ್,  ಚಿಕ್ಕಣ್ಣಪ್ಪ,  ರಾಮಕೃಷ್ಣಯ್ಯ, ಪುಟ್ಟಪ್ಪಾಜಿ, ರಾಜಮ್ಮ, ಮೆಡಿಕಲ್ ಸ್ಟೋರ್ ವಿನಯ್, ವಿನೋದ್,  ಬೈಸೀನ, ರಾಮಸ್ವಾಮಿ, ರಾಜು ಪುಷ್ಪಲತಾ, ಎ.ವಿ.ಹಳ್ಳಿ ಚಂದ್ರಶೇಖರ್, ಡಿ.ಎಸ್. ಎಸ್. ವೆಂಕಟೇಶ್, ಶಂಕರ್ ಆರ್, ಮಜು, ಬ್ಯಾನರ್ ವೆಂಕಿ, ದೊಡ್ಡ ರೇವಣ್ಣ, ತಸ್ಮಿಯಾ ಬಾನು,  ಹೊಲಸಾಲಯ್ಯ, ಉಪನ್ಯಾಸಕ ರಾಜು, ಸಾರ್ವಜನಿಕ ಐಟಿಐ ಕಾಲೇಜಿನ ವಿದ್ಯಾರ್ಥಿಗಳು, 


Share