ವಿದ್ಯಾರ್ಥಿಗಳಿಗೆ ಬುದ್ಧ, ಬಸವ, ಅಂಬೇಡ್ಕರ್ ರವರ ಆದರ್ಶಗಳು ಅತಿ ಮುಖ್ಯ -ಕವಿ ವಿ ಲಕ್ಷ್ಮಯ್ಯ.

ವಿದ್ಯಾರ್ಥಿಗಳಿಗೆ ಬುದ್ಧ, ಬಸವ, ಅಂಬೇಡ್ಕರ್ ರವರ ಆದರ್ಶಗಳು ಅತಿ ಮುಖ್ಯ -ಕವಿ ವಿ ಲಕ್ಷ್ಮಯ್ಯ.

Share

ಬಂಗಾರಪೇಟೆ :-ಪಿಚ್ಚಹಳ್ಳಿ ಗ್ರಾಮದಲ್ಲಿ ನಡೆದ ಬುದ್ಧ ಹಾಗೂ ಬಸವ ಜಯಂತಿಯ ಪ್ರಯುಕ್ತ ಉದ್ಘಾಟನೆ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ
ಕಾರ್ಯಕ್ರಮದ ಉದ್ಘಾಟನೆಗೆ ಈ ನಾಡಿನ ಹೆಸರಾಂತ ಕವಿ ವಿಮರ್ಶಕ ಭಾವಗೀತೆಗಳ ರಚನೆಕಾರ ವಿ ಲಕ್ಷ್ಮಯ್ಯ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು,ನಂತರ ಮಾತನಾಡಿದ ಕವಿ ವಿ ಲಕ್ಷ್ಮಯ್ಯನವರು ಬಸವಣ್ಣನವರ ತತ್ವ ಮತ್ತು ಆದರ್ಶಗಳನ್ನು ಎಲ್ಲರೂ ಮೈಗೂಡಿಸಿಕೊಳ್ಳಬೇಕು, ವಿದ್ಯಾರ್ಥಿಗಳು ಬುದ್ಧ, ಬಸವ, ಅಂಬೇಡ್ಕರ್ ರವರ ಚಿಂತನೆಗಳು, ಆದರ್ಶಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿ ಕೊಳ್ಳಬೇಕು.ಬುದ್ಧನ ಆಸೆಯೇ ದುಃಖ ಕ್ಕೆ ಮೂಲ, ಮತ್ತು ಬಸವಣ್ಣ ರ ಕಾಯಕವೇ ಕೈಲಾಸ,ಡಾ ಬಿ ಅಂಬೇಡ್ಕರ್ ರವರ ಶಿಕ್ಷಣ ಇವು ನಮ್ಮ ಜೀವನದ ದಾರಿ ದೀಪಗಳಿದ್ದಂತೆ ಎಂದರು.
ಬುದ್ಧ ನಮಗೆ ಆದರ್ಶ ಅವರ ಮಾರ್ಗದರ್ಶನದಲ್ಲಿ ನಾವೆಲ್ಲರೂ ನಡೆಯಬೇಕು ಸಮಾನತೆಯ ಕನಸು ನಮ್ಮ ಗುರಿಯಾಗಿರಬೇಕು.ದ್ವೇಷ, ಅಸೂಯೆ ಬಿಟ್ಟು, ಜಗವನ್ನು ಪ್ರೀತಿಯಿಂದ ಗೆಲ್ಲಬೇಕು
ಎಂದು ಸಲಹೆ ನೀಡಿದರು, ಸಮುದಾಯದ ಏಳಿಗೆಯನ್ನು ಮಾಡಬೇಕು ಎಂದು ಕರೆಕೊಟ್ಟರು.
ಕಾರ್ಯಕ್ರಮದಲ್ಲಿ ಕವಿ ವಿ ಲಕ್ಷ್ಮಯ್ಯ ರವರನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು.

ಅನಂತರ ಮಾತನಾಡಿದ ಕವಿ, ಲೇಖಕ, ಹಾಗೂ ಉಪನ್ಯಾಸಕರಾದ ಜಿ.ಸುಧಾಕರ್ ಮಾತನಾಡಿ ಬುದ್ಧ ಮತ್ತು ಬಸವನ ತತ್ವಗಳು ಇಂದಿಗೂ ಸ್ಪೂರ್ತಿ ಎಂದು ಹೇಳಿದರು. ಬಸವಣ್ಣನವರ ಕೆಲವೊಂದು ಹಿತವಾದ ವಚನಗಳನ್ನು ಜನರಿಗೆ ಮನವರಿಕೆ ಮಾಡಿಕೊಟ್ಟರು, ಕೆಲವೊಂದು ಮಕ್ಕಳು ಸಹ ಭಾಷಣ ಮಾಡಿದ್ದು ವಿಶೇಷವಾಗಿತ್ತು ಈ ಕಾರ್ಯಕ್ರಮದ ಉಸ್ತುವಾರಿಯನ್ನು ಊರಿನ ಮುಖಂಡರಾದ ಜಿ. ತಿಮ್ಮರಾಯಪ್ಪ,ಮೋಹನ್ ರಾಜು,ವಿಜಯ್ ಕುಮಾರ್ ಟಿ, ಕೆಜಿಎಫ್ ಬಾಬಣ್ಣ ,ಬೆಮಲ್ ಮಂಜುನಾಥ್ ಎಸ್, ಕೋಲಾರದಿಂದ ದಸಂಸ ಮುಖಂಡ ಆರ್ ಶಂಕರ್ ರವರು ಸಹ ಭಾಗವಹಿಸಿದ್ದರು,ನಿವೃತ್ತ ಮೇಷ್ಟ್ರು ವೆಂಕಟರಮಣಪ್ಪ, ಹಾಗೂ ಗೋವಿಂದರಾಜು,ಹೆಜ್ಜೆಗೆಜೆ ಶ್ರೀನಿವಾಸ್ ಅವರು ಕಾರ್ಯಕ್ರಮವನ್ನು ನಿರೂಪಿಸಿದರು. ಸರಳವಾಗಿ ಆಚರಿಸಿದ ಈ ಕಾರ್ಯಕ್ರಮಕ್ಕೆ ಗ್ರಾಮಸ್ಥರು ಭಾಗವಹಿಸಿ ಯಶಸ್ವಿಗೊಳಿಸಿದರು.


Share