ಬೆಂಗಳೂರು: ಅಪಾರ್ಟ್ಮೆಂಟ್ ಸಂಕೀರ್ಣಗಳಲ್ಲಿ ಎಲೆಕ್ಟ್ರಿಕ್ ವಾಹನಗಳನ್ನು ಚಾರ್ಜಿಂಗ್ ಮಾಡಲು ಶೀಘ್ರವೇ ಸೂಕ್ತ ಮಾನದಂಡಗಳೊಂದಿಗೆ ನಿಯಮ ರೂಪಿಸಲಾಗುವುದು ಎಂದು ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ ತಿಳಿಸಿದೆ.
ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗವು (ಕೆಆರ್‌ಸಿ) ಎಲ್ಲಾ ಅಪಾರ್ಟ್ಮೆಂಟ್ ಸಂಕೀರ್ಣಗಳಲ್ಲಿ ಚಾರ್ಜಿಂಗ್ ಘಟಕಗಳನ್ನು ಸ್ಥಾಪಿಸಲು ಅನುಸರಿಸಬೇಕಾದ ಕಾರ್ಯಾಚರಣಾ ಕಾರ್ಯವಿಧಾನಗಳು ಮತ್ತು ನಿಯಮಗಳೊಂದಿಗೆ ಬರುತ್ತಿದೆ. ಈಗ ಎಲೆಕ್ಟ್ರಿಕ್ ವಾಹನಗಳನ್ನು ಚಾರ್ಜ್ ಮಾಡಲು ವಿಭಿನ್ನ ರೀತಿಯ ದರ ನಿಗದಿ ಮಾಡಲಾಗಿದೆ. ಕೆಲವು ಅಪಾರ್ಟ್‌ಮೆಂಟ್‌ಗಳಲ್ಲಿ, ವಾಹನ ಮಾಲೀಕರು ನೇರವಾಗಿ ತಮ್ಮ ಪಾರ್ಕಿಂಗ್ ಜಾಗದಲ್ಲಿ ಚಾರ್ಜಿಂಗ್ ಘಟಕವನ್ನು ಸ್ಥಾಪಿಸುತ್ತಿದ್ದು, ಅದನ್ನು ಪ್ರತ್ಯೇಕವಾಗಿ ಬಿಲ್ ಮಾಡಲಾಗುತ್ತದೆ. ಆದರೆ ಇನ್ನು ಕೆಲವೆಡೆ ಚಾರ್ಜಿಂಗ್ ಘಟಕ ಸಾಮಾನ್ಯ ಪ್ರದೇಶದಲ್ಲಿದ್ದು, ಅಪಾರ್ಟ್ ಮೆಂಟ್ ಅಸೋಸಿಯೇಷನ್ ನವರು ವೆಚ್ಚ ಭರಿಸುತ್ತಾರೆ.
ಇವಿ ಚಾರ್ಜಿಂಗ್ ಸ್ಟೇಷನ್‌ಗಳು ಮತ್ತು ಪಾವತಿಗಳನ್ನು ಸ್ಥಾಪಿಸಲು ಅನುಸರಿಸಬೇಕಾದ ವಿಧಾನವನ್ನು ಈ ಆದೇಶವು ಒಳಗೊಂಡಿರುತ್ತದೆ ಎಂದು ಕೆಇಆರ್‌ಸಿ ಅಧ್ಯಕ್ಷ ಪಿ ರವಿ ಕುಮಾರ್ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ತಿಳಿಸಿದ್ದಾರೆ. ಈ ಆದೇಶವು ಮೂರನೇ ವ್ಯಕ್ತಿಗೆ EV ಚಾರ್ಜಿಂಗ್ ಪಾಯಿಂಟ್‌ಗಳನ್ನು ಸ್ಥಾಪಿಸಲು, ಅದರಿಂದ ವ್ಯಾಪಾರ ಮಾಡಲು ಅನುಮತಿಯನ್ನು ನೀಡಲಾಗುತ್ತದೆ.ಬೆಂಗಳೂರು ಅಪಾರ್ಟ್‌ಮೆಂಟ್ ಫೆಡರೇಶನ್ ಸೇರಿದಂತೆ ವಿವಿಧ ಅಪಾರ್ಟ್‌ಮೆಂಟ್ ಅಸೋಸಿಯೇಷನ್‌ಗಳ ಸದಸ್ಯರು 2024 ರ ಏಪ್ರಿಲ್‌ನಲ್ಲಿ ವಿದ್ಯುತ್ ದರದ ಆದೇಶವನ್ನು ಪ್ರಕಟಿಸುವ ಮೊದಲು ಕೆಇಆರ್‌ಸಿ ಆಯೋಜಿಸಿದ್ದ ಸಾರ್ವಜನಿಕ ಸಮಾಲೋಚನಾ ಸಭೆಗಳಲ್ಲಿ ಇವಿ ಚಾರ್ಜಿಂಗ್ ಘಟಕಗಳು ಮತ್ತು ವಿಧಾನಗಳ ಬಗ್ಗೆ ತಮ್ಮ ಕಳವಳ ವ್ಯಕ್ತಪಡಿಸಿದ್ದರು.
2019 ರಿಂದ ಹೊಸ ಅಪಾರ್ಟ್‌ಮೆಂಟ್‌ಗಳಲ್ಲಿ ಇವಿ ಚಾರ್ಜಿಂಗ್ ಪಾಯಿಂಟ್‌ಗಳ ಅಳವಡಿಕೆಯನ್ನು ಕಡ್ಡಾಯಗೊಳಿಸಲಾಗಿದ್ದರೂ, ಇದುವರೆಗೆ ಸ್ವಲ್ಪ ಪ್ರಮಾಣದಲ್ಲಿಯೂ ಮಾಡಲಾಗಿಲ್ಲ. ಅಂತಹ ಘಟಕಗಳನ್ನು ಸ್ಥಾಪಿಸಲು ಮಾಲೀಕರು ಮತ್ತು ಸಂಘಗಳ ನಡುವೆ ಸಂಘರ್ಷ ಏರ್ಪಟ್ಟಿದೆ. ಒಕ್ಕೂಟವು ಸಮುದಾಯ-ಆಧಾರಿತ ಘಟಕಗಳನ್ನು ಶಿಫಾರಸು ಮಾಡಿದೆ ಎಂದು ಫೆಡರೇಶನ್ ಅಧ್ಯಕ್ಷ ವಿಕ್ರಮ್ ರೈ ತಿಳಿಸಿದ್ದಾರೆ.
ಅಪಾರ್ಟ್‌ಮೆಂಟ್ ಕಾಂಪ್ಲೆಕ್ಸ್‌ಗಳಲ್ಲಿ ಚಾರ್ಜಿಂಗ್ ಘಟಕಗಳನ್ನು ಮರುಹೊಂದಿಸುವುದು ಒಂದು ಸವಾಲಾಗಿದೆ. ಈ ಪ್ರಕ್ರಿಯೆಯನ್ನು ಸುವ್ಯವಸ್ಥಿತಗೊಳಿಸಬೇಕಾಗಿದ್ದು ಇದನ್ನು ಕೆಇಆರ್‌ಸಿ ಪರಿಹರಿಸಬೇಕಾಗಿದೆ ಎಂದು ರೈ ಹೇಳಿದರು. ಅಪಾರ್ಟ್‌ಮೆಂಟ್ ಸಂಕೀರ್ಣಗಳು ಕೆಲವೇ ಚಾರ್ಜಿಂಗ್ ಸ್ಟೇಷನ್‌ಗಳನ್ನು ಹೊಂದಿವೆ.ಹೊಸ ಆದೇಶವು ಸೌರ ಮತ್ತು ವಿದ್ಯುತ್-ಸಕ್ರಿಯ ವಿಧಾನಗಳನ್ನು ಒಳಗೊಂಡಂತೆ ಚಾರ್ಜಿಂಗ್ ಘಟಕಗಳನ್ನು ಸ್ಥಾಪಿಸುವಲ್ಲಿ ಅನುಸರಿಸಬೇಕಾದ ವಿಧಾನ ಮತ್ತು ಕ್ರಮಗಳನ್ನು ಪಟ್ಟಿ ಮಾಡುತ್ತದೆ. ಈ ರೀತಿಯ ಆದೇಶ ಹೊರಡಿಸುತ್ತಿರುವುದು ಇದೇ ಮೊದಲು ಎಂದು ಹೇಳಿದ್ದಾರೆ. ವಾಣಿಜ್ಯ ಸಂಸ್ಥೆಗಳಲ್ಲಿ ಚಾರ್ಜಿಂಗ್ ಘಟಕಗಳನ್ನು ಸ್ಥಾಪಿಸಲು ಸಹ ನಿರ್ದೇಶನಗಳನ್ನು ನೀಡಲಾಗುವುದು ಎಂದು ತಿಳಿಸಿದ್ದಾರೆ.