ಜಗುಲಿ ಕಿರಿಕ್..ಸಾರ್ವಜನಿಕರ ರಸ್ತೆಯಲ್ಲಿ ನಿರ್ಮಾಣ ಆರೋಪ.ಗ್ರಾಮಸ್ಥರ ತೀವ್ರ ವಿರೋಧ ಮಾತಿನ ಚಕಮಕಿ.ಪಿಡಿಓ ನೋಟೀಸ್

ಜಗುಲಿ ಕಿರಿಕ್..ಸಾರ್ವಜನಿಕರ ರಸ್ತೆಯಲ್ಲಿ ನಿರ್ಮಾಣ ಆರೋಪ.ಗ್ರಾಮಸ್ಥರ ತೀವ್ರ ವಿರೋಧ ಮಾತಿನ ಚಕಮಕಿ.ಪಿಡಿಓ ನೋಟೀಸ್

Share

ಹುಣಸೂರು

ಸಾರ್ವಜನಿಕರ ರಸ್ತೆಯಲ್ಲಿ ರಾತ್ರೋ ರಾತ್ರಿ ನಿರ್ಮಾಣವಾದ ಜಗುಲಿ ತೀವ್ರ ವಿವಾದಕ್ಕೆ ಕಾರಣವಾಗಿದೆ.ಗ್ರಾಮಸ್ಥರ ವಿರೋಧವಿದ್ದರೂ ಲೆಕ್ಕಿಸದ ಗ್ರಾಮ ಪಂಚಾಯ್ತಿ ಸದಸ್ಯೆ ರಾಜಾರೋಷವಾಗಿ ಜಗುಲಿ ನಿರ್ಮಿಸಿರುವುದಾಗಿ ಆರೋಪ ಕೇಳಿ ಬಂದಿದೆ.ನಿರ್ಮಾಣ ಕಾಮಗಾರಿಯನ್ನ ತಡೆಹಿಡಿಯಲು ಬಂದ ಗ್ರಾಮಸ್ಥರ ನಡುವೆ ಗ್ರಾಮ ಪಂಚಾಯ್ತಿ ಸದಸ್ಯೆ ಕುಟುಂಬ ಮಾತನ ಚಕಮಕಿ ನಡೆಸಿದೆ.ಹುಣಸೂರು ತಾಲೂಕಿನ ಉಮ್ಮತ್ತೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ನೆಲ್ಲೂರು ಪಾಲ ಗ್ರಾಮದಲ್ಲಿ ಘಟನೆ ನಡೆದಿದೆ.

ನೆಲ್ಲೂರುಪಾಲ ಗ್ರಾಮದ ಉಮ್ಮತ್ತೂರು ಗ್ರಾಮ ಪಂಚಾಯ್ತಿ ಸದಸ್ಯೆ ರಾಣಿ ರವರ ಪತಿ ಶಂಕರ ನಾಯಕ ರವರ ಮನೆಗೆ ಹೊಂದಿಕೊಂಡಂತಿರುವ ರಸ್ತೆ ಸಾರ್ವಜನಿಕರು ಓಡಾಡುವ ರಸ್ತೆ ಎಂದು ಹೇಳಲಾಗಿದೆ.ಇಲ್ಲಿ ವಾಹನಗಳು,ಟ್ರಾಕ್ಟರ್ ಗಳ ಓಡಾಟ ಹಿಂದಿನಿಂದಲೂ ಸಾಗಿ ಬಂದಿದೆ.ಇದೀಗ ಶಂಕರನಾಯಕ ಮನೆಯವರು ಸಾರ್ವಜನಿಕರ ರಸ್ತೆಯಲ್ಲಿ ವಾಹನಗಳು ಓಡಾಡಲು ಸಾಧ್ಯವಾಗದಂತೆ ಜಗುಲಿ ನಿರ್ಮಿಸಿದ್ದಾರೆ.ಈ ಬಗ್ಗೆ ಗ್ರಾಮಸ್ಥರು ವಿರೋಧಿಸಿದ್ದಾರೆ.ಗ್ರಾಮಸ್ಥರ ವಿರೋಧವನ್ನ ಲೆಕ್ಕಿಸದೆ ಜಗುಲಿ ನಿರ್ಮಾಣ ಕಾರ್ಯ ಮುಂದುವರೆದಿದೆ.ಈ ಬಗ್ಗೆ ಗ್ರಾಮಸ್ಥರಾದ ವಿಶ್ವನಾಥ್ ಹಾಗೂ ಕೃಷ್ಣ ರವರು ಉಮತ್ತೂರು ಗ್ರಾಮ ಪಂಚಾಯ್ತಿಗೆ ದೂರು ನೀಡಿದ್ದಾರೆ.ಪಿಡಿಓ ರವರು ಮನೆ ಮಾಲೀಕ ಶಂಕರ ನಾಯಕ ರವರಿಗೆ ನೋಟೀಸ್ ಜಾರಿ ಮಾಡಿದ್ದು ಕಾಮಗಾರಿಯನ್ನ ಸ್ಥಗಿತಗೊಳಿಸುವಂತೆ ಸೂಚಿಸಿದ್ದಾರೆ.ಇದು ರಸ್ತೆ ಅಲ್ಲ ನಮ್ಮದೇ ಜಾಗ ಎಂದು ವಾದಿಸುತ್ತಿರುವ ಶಂಕರ ನಾಯಕ ರವರಿಗೆ ಸೂಕ್ತ ದಾಖಲೆ ಒದಗಿಸುವಂತೆ ನೋಟೀಸ್ ನಲ್ಲಿ ಪಿಡಿಓ ಸೂಚನೆ ನೀಡಿದ್ದಾರೆ.ಸ್ಥಳಕ್ಕೆ ಬಂದ ಸಾರ್ವಜನಿಕರ ವಿರುದ್ದ ಆಕ್ರೋಷ ವ್ಯಕ್ತಪಡಿಸುತ್ತಿರುವ ಗ್ರಾಮ ಪಂಚಾಯ್ತಿ ಸದಸ್ಯೆ ವರ್ತನೆ ಮೊಬೈಲ್ ನಲ್ಲಿ ಸೆರೆಯಾಗಿದೆ…


Share