ಹೊನ್ನಾವರ:-“ಶರಾವತಿ ಬೋಟಿಂಗ್ ಚಾಲಕರ ಮತ್ತು ಮಾಲಕರ ಸಂಘ” ಹಾಗೂ “ಟೂರಿಸ್ಟ್ ಬೋಟಿಂಗ್ ಚಾಲಕರ ಮತ್ತು ಮಾಲಕರ ಸಂಘ” ಎರಡು ಬೋಟಿಂಗ್ ಸಂಘದವರು ಶರಾವತಿ ನದಿಯಲ್ಲಿ ಬೋಟಿಂಗನಿಂದ ಯಾವುದೇ ಸಮಸ್ಯೆ ಆಗಿಲ್ಲಾ ಮತ್ತು ದುರುದ್ದೇಶದಿಂದ ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ ಎಂದು ನಿನ್ನೆ ಮಂಗಳವಾರ ಖಾಸಗಿ ಹೋಟೆಲನಲ್ಲಿ ಪತ್ರಿಕಾಗೋಷ್ಟಿಯಲ್ಲಿ ಎರಡು ಸಂಘದವರು ಹೇಳಿದ್ದಾರೆ,
ಸಂಘದ ಕಾರ್ಯದರ್ಶಿಯಾದ್ ಚಂದ್ರಹಾಸ್ ಗೌಡ ಮಾತನಾಡಿ, ಕೆಲವು ದಿನಗಳ ಹಿಂದೆ ಬೋಟಿಂಗ್ ಸಮಯದಲ್ಲಿ ಟೂರಿಸ್ಟ್ ಬೋಟಿಗೆ ಮತ್ತೊಂದು ದೋಣಿ ಅಪ್ಪಳಿಸಿತ್ತು ,ಇದರಿಂದ ಯಾರಿಗೂ ಹನಿಯಾಗಿಲ್ಲಾ ಆದರೆ ಇದೆ ವಿಚಾರ ದೊಡ್ಡದಾಗಿ ಬಿಂಬಿಸಿ ಅಪ್ ಪ್ರಚಾರ್ ಮಾಡುತ್ತಿದ್ದಾರೆ ಎಂದರು, ಇದೆ ರೀತಿ ಸಂಘದ್ ಮತ್ತೊರ್ವ್ ಸದಸ್ಯರಾದ ಶಂಕರ ಮೇಸ್ತ್ ಮಾತನಾಡಿ, ಪ್ರವಾಸೋದ್ಯಮ ಅಂದಮೇಲೆ ಸಣ್ಣಪುಟ್ಟ ಘಟನೆಗಳು ಸಹಜ ಆದರೆ ಇದೆ ವಿಷಯ ಇಟ್ಟುಕೊಂಡು ಗಜಾನನ ಸುಬ್ರಾಯ್ ಅಂಬಿಗ ಅವರು ಅಪಪ್ರಚಾರ್ ಮಾಡುತ್ತಿದ್ದಾರೆ ಮತ್ತು ಈ ಹಿಂದೆಯೂ ಕೂಡಾ ಗಜಾನನ ಅವರು ಬೋಟಿಂಗ್ ಮಾಡುವ ವೇಳೆ ನದಿಯ ಮದ್ಯದಲ್ಲಿ ಮೀನು ಬಲೆ ಹಾಕಿ ಅಡ್ದ ಪಡಿಸುತ್ತೇನೆ ಎಂದು ಬೆದರಿಕೆ ಹಾಕಿದ್ದರು ಎಂದು ಶಂಕರ ಮೇಸ್ತ ಅವರು ತಮ್ಮ ಮಾತಿನಲ್ಲಿ ವ್ಯಕ್ತ ಪಡಿಸಿದ್ದಾರೆ ಹಾಗೂ ಸಮಸ್ಯೆಗಳಲ್ಲಾದ ಟ್ರಾಫಿಕ್ ಸಮಸ್ಯೆ ಕೂಡಾ ದೊಡ್ಡ ಪ್ರಮಾಣದ ವಾಹನಗಳು ಹೈವೇ ಪಕ್ಕ ಪಾರ್ಕಿಂಗ್ ಮಾಡಿಸಿ ಪ್ರವಾಸಿಗರಿಗೆ ಆಟೋ ರಿಕ್ಷಾ ಮೂಲಕ ಸ್ಥಳಗಳಲ್ಲಿ ತಲುಪಿಸುವ ವ್ಯವಸ್ಥೆ ಕೂಡಾ ಮಾಡುತ್ತಿದ್ದೇವೆ ಎಂದು ಹೇಳಿದ್ದಾರೆ ,ಹೀಗೆ ಸಂಘದ್ ಸದಸ್ಯರಾದ್ ಮಾಸ್ತಿ ಅಂಬಿಗ, ಪೌಲ್ ಡಿಸೋಜಾ, ಪ್ರಕಾಶ್ ಫೆರ್ನಾಂಡಿಸ, ಡೋಲ್ವಿನ್ ಡಯಾಸ್ ಮತ್ತಿತರು ಉಪಸ್ಥಿತರಿದ್ದರು.
